ಶಾಸಕರ ಭವನದ ಒಳಾಂಗೀಣ ಮತ್ತು ಹೊರಾಂಗೀಣ ಸ್ವಚ್ಛತೆಯ ಗುಣಮಟ್ಟವನ್ನು ಕಾಪಾಡಲು ಸೂಕ್ತ ಕ್ರಮ
Adequate measures to maintain the standard of internal and external cleanliness of the shasakkara Bhavana
ಬೆಂಗಳೂರು: ಶಾಸಕರ ಭವನದಲ್ಲಿ ಈ ಹಿಂದೆ ಹೊರಗುತ್ತಿಗೆ ಆಧಾರದ ಮೇರೆಗೆ ಸ್ವಚ್ಛತಾ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿತ್ತು. ಆದರೆ, ಪ್ರಸ್ತುತ ಹೊರಗುತ್ತಿಗೆ ಆಧಾರದ ವ್ಯವಸ್ಥೆ ಜಾರಿಯಲ್ಲಿ ಇಲ್ಲದಿರುವ ಪ್ರಯುಕ್ತ ಕರ್ನಾಟಕ ವಿಧಾನ ಸಭೆ ಸಚಿವಾಲಯದ ಅಲ್ಪ ಪ್ರಮಾಣದ ಸಿಬ್ಬಂದಿಗಳನ್ನು ಉಪಯೋಗಿಸಿಕೊಂಡು ಸ್ವಚ್ಛತಾ ಕಾರ್ಯಗಳನ್ನು ನೆರವೇರಿಸಲಾಗುತ್ತಿತ್ತು. ಆದರೂ ಸಹ ಶಾಸಕರ ಭವನದಲ್ಲಿ ಒಳಾಂಗೀಣ ಮತ್ತು ಹೊರಾಂಗೀಣ ಸ್ವಚ್ಛತೆಯ ಗುಣಮಟ್ಟವನ್ನು ಕಾಪಾಡಲು ಸಾಧ್ಯವಾಗಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಸಭಾಧ್ಯಕ್ಷರು ಮತ್ತು ಉಪ ಸಭಾಧ್ಯಕ್ಷರು ಶಾಸಕರ ಭವನಕ್ಕೆ ಆಗಿಂದಾಗ್ಗೆ ಭೇಟಿ ನೀಡಿ, ಪರಿಸರವು ಮಲಿನಗೊಂಡಿರುವುದನ್ನು ಗಮನಿಸಿ, ಪ್ರಥಮ ಹಂತದಲ್ಲಿ ಪ್ರಾಯೋಗಿಕವಾಗಿ ಖಾಸಗಿ ಸಂಸ್ಥೆಗೆ deep cleaning ಕಾರ್ಯವನ್ನು ವಹಿಸಿದ್ದು, ಸ್ವಚ್ಛತಾ ಕಾಮಗಾರಿಯು ಪ್ರಸ್ತುತ ಚಾಲನೆಯಲ್ಲಿರುತ್ತದೆ.
ವಿಧಾನಸಭೆ ಸಚಿವಾಲಯ ವ್ಯಾಪ್ತಿಗೆ ಬರುವ ಶಾಸಕರ ಭವನದ ಕಟ್ಟಡಗಳಲ್ಲಿ ದೈನಂದಿನ ಸ್ವಚ್ಛತೆಯನ್ನು ಕಾಪಾಡಲು, ಕಸ ವಿಲೇವಾರಿ ಮಾಡಲು, ಶಾಸಕರುಗಳ ಕೊಠಡಿಗಳಲ್ಲಿ ಶುಚಿತ್ವವನ್ನು ಕಾಪಾಡುವ ಸಂಬಂಧದಲ್ಲಿ ಹೊರಗುತ್ತಿಗೆ ಆಧಾರದ ಮೇರೆಗೆ ಕಾರ್ಯನಿರ್ವಹಿಸಲು ಪ್ರತಿಷ್ಠಿತ RFP (Request for proposal) ಕರೆಯಲು ಸಹ ತೀರ್ಮಾನಿಸಲಾಗಿರುತ್ತದೆ.
ಶಾಸಕರ ಭವನ ಕಟ್ಟಡಗಳ ಹೊರಾಂಗೀಣ ಸ್ವಚ್ಛತೆ ಸಂಬಂಧದಲ್ಲಿ ಸುಣ್ಣಬಣ್ಣ ಬಳಿಯುವುದು, ಕಟ್ಟಡಗಳ ಸಣ್ಣಪುಟ್ಟ ದುರಸ್ತಿ ಕಾರ್ಯಗಳನ್ನು ಮಾಡಲು ಹಾಗೂ ಕಟ್ಟಡವನ್ನು ನಿರ್ವಹಣೆ ಮಾಡುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಈಗಾಗಲೇ ಲೋಕೋಪಯೋಗಿ ಇಲಾಖೆಗೆ ಸೂಚನೆ ನೀಡಲಾಗಿರುತ್ತದೆ ಎಂದು ವಿಧಾನ ಸಭೆಯ ಸಭಾಧ್ಯಕ್ಷರ ಕಚೇರಿ ಪ್ರಕಟಣೆ ತಿಳಿಸಿದೆ.