ಆಧುನಿಕ ತಂತ್ರಜ್ಞಾನ ಯುಗದಲ್ಲಿ ಮಾನವೀಯತೆ ಮೌಲ್ಯಗಳು ಅಗತ್ಯ : ಸಂತೋಷ್ ಹೆಗ್ಡೆ

Humanity values ​​are essential in modern technological era : Santosh Hegde

ಆಧುನಿಕ ತಂತ್ರಜ್ಞಾನ ಯುಗದಲ್ಲಿ ಮಾನವೀಯತೆ ಮೌಲ್ಯಗಳು ಅಗತ್ಯ : ಸಂತೋಷ್ ಹೆಗ್ಡೆ
ಜಾಹೀರಾತಿಗಾಗಿ ಸಂಪರ್ಕಿಸಿ 6362546216

ಬೆಂಗಳೂರು: ಈಗಿನ ಆಧುನಿಕ ತಂತ್ರಜ್ಞಾನ ಯುಗದಲ್ಲಿ ಮಾನವೀಯತೆ ಮೌಲ್ಯಗಳು ನಶಿಸಿ ಹೋಗುತ್ತಿರುವ ಪರಿಸ್ಥಿತಿಯೇ... ಮನುಷ್ಯನಿಗೆ ನೂರಾರು ಆದರ ಪರಿಣಾಮ ದುರಾಸೆ ಎಂದು ನಿವೃತ್ತ ನ್ಯಾಯಮೂರ್ತಿ ಹಾಗೂ ಲೋಕಾಯುಕ್ತ ಸಂತೋಷ್ ಹೆಗ್ಡೆ ಹೇಳಿದರು. ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶೆಟ್ಟಿಹಳ್ಳಿ ವಾರ್ಡಿನ ವ್ಯಾಪ್ತಿಗೆ ಬರುವ ವಿಶ್ವೇಶ್ವರ ಬಡಾವಣೆಯಲ್ಲಿರುವ ಸರ್ ಎಂ ವಿಶ್ವೇಶ್ವರಯ್ಯ ವಿದ್ಯಾನಿಕೇತನ ಶಾಲೆಯಲ್ಲಿ 'ಕಾಮನಬಿಲ್ಲು -2024 ಹಾಗೂ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಪೋಷಕರನ್ನು ಉದ್ದೇಶಿಸಿ ಅವರು ಮಾತನಾಡಿದರು. ಕೆಎಎಸ್ ಅಧಿಕಾರಿ ವಿ.ಪಾತರಾಜು ಮಾತನಾಡಿ ಸೂಕ್ತವಾದ ಶಿಕ್ಷಣ ಹೊರತೆಗೆಯುದೆ ಶಿಕ್ಷಣ ಸಂಸ್ಥೆಯ ಶಿಕ್ಷಕ ಶಿಕ್ಷಕಿಯರು ಅದರಲ್ಲಿ ನಾ ನೋಡಿದ ಹಾಗೆ ಸರ್ ಎಂ ವಿಶ್ವೇಶ್ವರಯ್ಯ ವಿದ್ಯಾನಿಕೇತನ ಸಂಸ್ಥೆಯ ಆಡಳಿತ ಮಂಡಳಿಯರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಎಂದು ಪಾತರಾಜು ಅಭಿಪ್ರಾಯಪಟ್ಟರು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಸಚೇತ್ ಮೇರಿ, ಕಾರ್ಯದರ್ಶಿ ನಾಗೇಗೌಡ, ಖಜಾಂಚಿ ಸಿ.ಎಂ.ಶಿವಕುಮಾರ್, ಸಮಾಜ ಸೇವಕ ಶ್ರೀನಿವಾಸ್ ರಾವ್, ಶಾಲಾ ಆಡಳಿತ ಮುಖ್ಯಸ್ಥ ಆರೋಗ್ಯಪ್ಪ, ಮುಖ್ಯೋಪಾಧ್ಯಾಯಿನಿ ಸುನಂದ ವರ್ಮಾ, ಮತ್ತು ಪ್ರೇಮಾ, ಶಿಕ್ಷಕ ಶಿಕ್ಷಕಿಯರು ಸಿಬ್ಬಂದಿ ವರ್ಗದವರು ಹಾಗೂ ಪೋಷಕರು ವಿದ್ಯಾರ್ಥಿಗಳು ವಿಶ್ವೇಶ್ವರ ಬಡಾವಣೆಯ ಸಮಸ್ತ ನಾಗರಿಕರು ಮಹಿಳೆಯರು ಮುಂತಾದವರು ಇದ್ದರು.