ಗುರುವಾರ ನಡೆದ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ 2 ಪದಕಗಳು
2 medals for India in Paris Olympics held on Thursday
ಪ್ಯಾರಿಸ್: ಗುರುವಾರ ನಡೆದ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ 2 ಪದಕಗಳು ಒಲಿದು ಬಂದವು. ಮೊದಲು ಭಾರತೀಯ ಹಾಕಿ ಪಡೆ ಸ್ಪೇನ್ ವಿರುದ್ಧ 2-1 ಅಂತರದಿಂದ ಗೆಲುವು ಸಾಧಿಸುವ ಮೂಲಕ ಕಂಚನ್ನು ಗೆದ್ದರೆ, ಭಾರತೀಯ ಕಾಲಮಾನದ ಪ್ರಕಾರ ಮಧ್ಯರಾತ್ರಿ ನಡೆದ ಜಾವೆಲಿನ್ ಥೋ ಸ್ಪರ್ಧೆಯಲ್ಲಿ ನೀರಜ್ ಚೋಪ್ರಾ ರಜತ ಪದಕ ಗೆದ್ದು ಸಮಾಧಾನ ಪಟ್ಟಿಕೊಂಡರು.
ಕೋಟ್ಯಂತರ ಭಾರತೀಯರ ಚಿನ್ನದ ನಿರೀಕ್ಷೆ ಹುಸಿಯಾಯಿತು. ಪುರುಷರ ಜಾವೆಲಿನ್ ಥೋನಲ್ಲಿ ನಡೆದ ಫೈನಲ್ ಸುತ್ತಿನಲ್ಲಿ ಭಾರತದ ನೀರಜ್ ಚೋಪ್ರಾ 89.47 ಮೀಟರ್ ದೂರ ಎಸೆದರು. ಆದರೆ, ಪಾಕಿಸ್ತಾನದ ಅರ್ಶದ್ ನದೀಮ್ 92.97 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ಒಲಿಂಪಿಕ್ಸ್ ಹೊಸ ದಾಖಲೆ ಬರೆದು ಚಿನ್ನ ತನ್ನದಾಗಿಸಿಕೊಂಡರು. ನೀರಜ್ ತನ್ನ 6 ಎಸೆತಗಳಲ್ಲಿ 4 ಬಾರಿ ಫೌಲ್ ಮಾಡಿದರು.
ಜರ್ಮನಿ ಸೇರಿದಂತೆ ಉಳಿದ ಜಾವೆಲಿನ್ ಥೋ ಅಥೀಟ್ಸ್ ಉತ್ತಮ ಪೈಪೋಟಿ ನೀಡಿದರಾದರೂ ಚೋಪ್ರಾರನ್ನು ಹಿಂದಿಕ್ಕಲು ಸಾಧ್ಯವಾಗಲಿಲ್ಲ. ಗ್ರೆನೆಡಾದ ಪೀಟರ್ಸ್‌ಗೆ ಕಂಚು ಲಭಿಸಿತು.
ಪುರುಷರ ಹಾಕಿ ಸೆಮಿಫೈನಲ್ ಪಂದ್ಯದಲ್ಲಿ ಜರ್ಮನಿ ವಿರುದ್ಧ ರೋಚಕವಾಗಿ ಆಡಿ ಸೋಲುವ ಮೂಲಕ ಫೈನಲ್ ಪ್ರವೇಶದಿಂದ ಹೊರಗುಳಿದಿದ್ದ ಭಾರತ, ಕಂಚಿಗಾಗಿ ನಡೆದ ಪಂದ್ಯದಲ್ಲಿ ಸ್ಪೇನ್ ವಿರುದ್ಧ ಹೋರಾಡಿ ರೋಚಕ ಗೆಲುವು ಸಂಪಾದಿಸಿದೆ.
ಮೊದಲು ಸ್ಪೇನ್ ನಾಯಕ ಮಾರ್ಕ್ ಮಿಲ್ಲರಸ್ 18ನೇ ನಿಮಿಷದಲ್ಲಿ ಮೊದಲ ಗೋಲು ಗಳಿಸಿ, ಮುನ್ನಡೆ ಸಾಧಿಸಿದರು. ಆದರೆ, 2ನೇ ವೇಳೆಯ ಕೊನೆಯ ಕೆಲ ಸೆಕೆಂಡ್‌ಗಳಿಗೂ ಮುನ್ನ ಭಾರತದ ನಾಯಕ ಹರ್ಮನ್ ಪ್ರೀತ್ ಸಿಂಗ್ ಗೋಲು ಗಳಿಸುವ ಮೂಲಕ ಈಕ್ವಲೈಜರ್ ಮಾಡಿದರು. ಅಷ್ಟೇ ಅಲ್ಲದೇ ಪಂದ್ಯದ 33ನೇ ನಿಮಿಷದಲ್ಲೂ ಮತ್ತೊಮ್ಮೆ ಹರ್ಮನ್ ಪ್ರೀತ್ ಸಿಂಗ್ 2ನೇ ಗೋಲುಗಳಿಸಿ, ಮೇಲುಗೈ ಸಾಧಿಸಿದರು.