ಪೆನ್ ಡ್ತೃೆವ್ ಪ್ರಕರಣ  ಮಹಿಳಾ ಸಂತ್ರಸ್ತರಿಗೆ ಸೂಕ್ತ ರಕ್ಷಣೆ ಮತ್ತು ವಿಡಿಯೊ ಬಿಡುಗಡೆ ಮಾಡಿದ ಕಿಡಿಗೇಡಿಗಳ ಸೂಕ್ತ ಕ್ರಮಕ್ಕೆ ಕರ್ನಾಟಕ ಮಹಿಳಾ ಸಂಘರ್ಘ ವೇದಿಕೆ ಬತ್ತಾಯ

ಪೆನ್ ಡ್ತೃೆವ್ ಪ್ರಕರಣ  ಮಹಿಳಾ ಸಂತ್ರಸ್ತರಿಗೆ ಸೂಕ್ತ ರಕ್ಷಣೆ ಮತ್ತು ವಿಡಿಯೊ ಬಿಡುಗಡೆ ಮಾಡಿದ ಕಿಡಿಗೇಡಿಗಳ ಸೂಕ್ತ ಕ್ರಮಕ್ಕೆ ಕರ್ನಾಟಕ ಮಹಿಳಾ ಸಂಘರ್ಘ ವೇದಿಕೆ ಬತ್ತಾಯ
ಜಾಹೀರಾತಿಗಾಗಿ ಸಂಪರ್ಕಿಸಿ 6362546216

ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣದ ಸಂತ್ರಸ್ತರಿಗೆ ಸೂಕ್ತ ರಕ್ಷಣೆ ಮತ್ತು ಸಂತ್ರಸ್ತರ ಪೂರ್ಣ ವಿಡಿಯೋ ಬಿಡುಗಡೆ ಮಾಡಿದ ವ್ಯಕ್ತಿಗಳನ್ನು ಬಂಧಿಸುವ ಬಗ್ಗೆ ಕರ್ನಾಟಕ ಮಹಿಳಾ ಸಂಘರ್ಷ ವೇದಿಕೆ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿರವರಿಗೆ ಕರ್ನಾಟಕ ರಾಜ್ಯ ಮಹಿಳಾ ಸಂಘರ್ಘ ವೇದಿಕೆ ಅಧ್ಯಕ್ಷರಾದ ಪೂರ್ಣಿಮಾ ದಾಸ್ , ಪ್ರಧಾನ ಕಾರ್ಯದರ್ಶಿ ಪ್ರೇಮರವರು, ಪದಾಧಿಕಾರಿಗಳು ಸೂಕ್ತ ಕ್ರಮಕ್ಕೆ ಮನವಿ ಪತ್ರ ಸಲ್ಲಿಸಿದರು.

        ಅಧ್ಯಕ್ಷರಾದ ಪೂರ್ಣಿಮಾ ದಾಸ್ ರವರು ಹಾಸನ ಜಿಲ್ಲೆಯಲ್ಲಿ ನಡೆದಿರುವ ಪೆನ್ ಡ್ತೃೆವ್ ಲೈಂಗಿಕ ಹಗರಣ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ. ಹಣ, ಅಧಿಕಾರ ಅಮಲಿನಿಂದ ಮಹಿಳೆಯರ ಮೇಲೆ ದೌರ್ಜನ್ಯ, ಲೈಂಗಿಕವಾಗಿ ಶೋಷಣೆ ಮಾಡಿದ ಪ್ರಜ್ವಲ್ ರೇವಣ್ಣರನ್ನು ಕೊಡಲೆ ಬಂಧಿಸಬೇಕು. ಇಂತಹ ವಿಡಿಯೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ವಿಕೃತ್ತ ಮನಸ್ಸಿನ ವ್ಯಕ್ತಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು.

.       ಮಹಿಳಾ ಸಂತ್ರಸ್ತರಿಗೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ರಾಜ್ಯ ಮಹಿಳಾ ಆಯೋಗಕ್ಕೆ ಮನವಿ ಸಲ್ಲಿಸಲಾಗಿದೆ. ಪೆನ್ ಡ್ತೃೆವ್ ಹಗರಣ ದೂರು ಬಂದ ತತಕ್ಷಣ ಕಾರ್ಯಪ್ರವೃತ್ತರಾದ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿರವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಕ್ರಮ ಕೈಗೊಳ್ಳಬೇಕು ಎಂದು ಪತ್ರ ಬರೆದರು, ಇದರ ಕಾರಣ ರಾಜ್ಯ ಸರ್ಕಾರ ಎಸ್.ಐ.ಟಿ.ತನಿಖೆಗೆ ಆದೇಶ ನೀಡಿತು. ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ರವರ ಮಹಿಳೆಯರ ಪರ ದಿಟ್ಟ ಧ್ವನಿಯಾಗಿ ನಿಂತಿರುವ ಅವರನ್ನು ನಮ್ಮ ವೇದಿಕೆ ವತಿಯಿಂದ ಅಭಿನಂದಿಸಲಾಗುತ್ತದೆ ಎಂದು ಹೇಳಿದರು.