ವಕ್ಫ್ ( ತಿದ್ದುಪಡಿ) ಮಸೂದೆ 2024 ರ ಜಂಟಿ ಸದನ ಸಮಿತಿ ಸದಸ್ಯರಾಗಿ ಸಂಸದ ತೇಜಸ್ವೀ ಸೂರ್ಯ ನೇಮಕ
MP Tejaswi Surya appointed as Member of Joint House Committee on Waqf (Amendment) Bill 2024
ನವದೆಹಲಿ : ಬಹು ನಿರೀಕ್ಷಿತ ವಕ್ಫ್ ( ತಿದ್ದುಪಡಿ) ಮಸೂದೆ, 2024ರ ಲೋಕಸಭಾ ಜಂಟಿ ಸದನ ಸಮಿತಿ ಸದಸ್ಯರಾಗಿ ಬೆಂಗಳೂರು ದಕ್ಷಿಣ ಸಂಸದರಾದ ಶ್ರೀ ತೇಜಸ್ವೀ ಸೂರ್ಯ ರವರು ನೇಮಕವಾಗಿರುತ್ತಾರೆ.
" ವಕ್ಫ್ ಆಸ್ತಿ ನಿರ್ವಹಣೆ, ಇತರ ಸುಧಾರಣೆಗಳಿಗೆ ಈ ಮಸೂದೆ ಅತ್ಯಂತ ಮಹತ್ವದ್ದಾಗಿದ್ದು, ಪ್ರಧಾನಿಯಾಗಿ ಶ್ರೀ ನರೇಂದ್ರ ಮೋದಿ ರವರು ಮೂರನೇ ಬಾರಿ ಆಯ್ಕೆಯಾದ ನಂತರ ವಕ್ಫ್ ತಿದ್ದುಪಡಿ ಮಸೂದೆ ಜಾರಿಗೆ ತುರ್ತು ಕ್ರಮವಹಿಸಿದ್ದು, ನನಗೆ ವಹಿಸಿರುವ ನೂತನ ಜವಾಬ್ದಾರಿಯನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಲಿದ್ದೇನೆ . ವಕ್ಫ್ ( ತಿದ್ದುಪಡಿ) ಮಸೂದೆಯಲ್ಲಿ ಹಲವಾರು ನೂತನ ಸುಧಾರಣೆಗಳನ್ನು ತರಲು ಸದನ ಸಮಿತಿ ಕಾರ್ಯ ನಿರ್ವಹಿಸಲಿದೆ " ಎಂದು ಸಂಸದ ಸೂರ್ಯ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಧಾನಿ ಶ್ರೀ ನರೆಂದ್ರ ಮೋದಿ & ಕೇಂದ್ರ ಸಚಿವರಾದ ಶ್ರೀ ಕಿರಣ್ ರಿಜಿಜು ರವರಿಗೆ ಇದೇ ಸಂದರ್ಭದಲ್ಲಿ ಸಂಸದರಾದ ಶ್ರೀ ತೇಜಸ್ವೀ ಸೂರ್ಯ ರವರು ಧನ್ಯವಾದಗಳನ್ನು ವ್ಯಕ್ತಪಡಿಸಿದ್ದಾರೆ.