ಪ್ರಖ್ಯಾತ ಮಲ್ಟಿಡಿಸಿಪ್ಲಿನಿರಿ ತಜ್ಞರ ತಂಡ ರಚನೆ ಮೂಲಕ ಪಾಲಿಟ್ರಾಮಾ ಚಿಕಿತ್ಸೆಯನ್ನು ಬಲಪಡಿಸಿದ ಗ್ಲೆನಿಗಲ್ಸ್ ಬಿಜಿಎಸ್ ಆಸ್ಪತ್ರೆ
Gleneagles BGS Hospital has strengthened polytrauma care by creating a team of renowned multidisciplinary specialists
ಬೆಂಗಳೂರು: ಕರ್ನಾಟಕದಲ್ಲಿ ಬಹು ಅಂಗಾಂಗ ಕಸಿಯಲ್ಲಿ ಮುಂಚೂಣಿಯಲ್ಲಿರುವ ಗ್ಲೆನಿಗಲ್ಸ್ ಬಿಜಿಎಸ್ ಆಸ್ಪತ್ರೆ ಇದೀಗ ತುರ್ತು ಚಿಕಿತ್ಸಾ ಕ್ಷೇತ್ರದಲ್ಲಿ ತನ್ನ ಮುಂದಾಳತ್ವವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಪ್ರಖ್ಯಾತ 16-ಸದಸ್ಯರ ಮಲ್ಟಿಡಿಸಿಪ್ಲಿನರಿ ತಜ್ಞರ ಪಾಲಿಟ್ರಾಮಾ ತಂಡವನ್ನು ರಚಿಸಿದೆ. ತುರ್ತು ವೈದ್ಯಕೀಯ, ಆರ್ಥೋಪೆಡಿಕ್ಸ್, ಕಾರ್ಡಿಯಾಲಜಿ, ಅನಸ್ತೇಷಿಯಾ, ಪ್ಲಾಸ್ಟಿಕ್ ಸರ್ಜರಿ, ನರಶಸ್ತ್ರಚಿಕಿತ್ಸೆ, ಸಾಮಾನ್ಯ ಶಸ್ತ್ರಚಿಕಿತ್ಸೆ, ಕಾರ್ಡಿಯೋಥೊರಾಸಿಕ್ ಮತ್ತು ವ್ಯಾಸ್ಕ್ಯುಲಾರ್ ಶಸ್ತ್ರಚಿಕಿತ್ಸೆ (CTVS), ರಕ್ತನಿಧಿ, ಪ್ರಯೋಗಾಲಯ ವೈದ್ಯಕೀಯ, ಐಸಿಯು ಮತ್ತು ನ್ಯೂರೋ-ಕ್ರಿಟಿಕಲ್ ಕೇರ್ ತಜ್ಞರು ಈ ತಂಡದ ಭಾಗವಾಗಿದ್ದಾರೆ. ಸಂಕೀರ್ಣ ಹಾಗೂ ಜೀವಕ್ಕೆ ಹಾನಿಕರ ಟ್ರಾಮಾ ಪ್ರಕರಣಗಳಲ್ಲಿ ವಿಶ್ವಮಟ್ಟದ, ಚಿಕಿತ್ಸೆಯನ್ನು ಈ ತಂಡ ಒದಗಿಸಲಿದೆ.
ಡಾ. ಜತೀಂದರ್ ಅರೋರಾ, ಕ್ಲಸ್ಟರ್ ಸಿಒಒ, ಬೆಂಗಳೂರು, ಅವರು “ಗ್ಲೆನಿಗಲ್ಸ್ ಬಿಜಿಎಸ್ ಆಸ್ಪತ್ರೆ ಸದಾ ಅತ್ಯಾಧುನಿಕ ಚಿಕಿತ್ಸಾ ಸೇವೆಗಳ ಮುಂಚೂಣಿಯಲ್ಲಿ ನಿಂತು, ಕರ್ನಾಟಕದ ಮೊದಲ ಬಹು ಅಂಗಾಂಗ ಕಸಿ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ನಮ್ಮ ಪಾಲಿಟ್ರಾಮಾ ತಂಡ ಕೂಡ ಇದೇ ಔನ್ನತ್ಯದ ಒಂದು ಉದಾಹರಣೆ. ವಿವಿಧ ತಜ್ಞರ ಸಂಯೋಜಿತ ಸೇವೆಯ ಮೂಲಕ, ನಾವು ತುರ್ತು ಚಿಕಿತ್ಸೆಯನ್ನು ವೇಗವಾಗಿ ಮತ್ತು ನಿಖರವಾಗಿ ಒದಗಿಸಲು ನಾವು ಬದ್ಧರಾಗಿದ್ದೇವೆ ” ಎಂದು ಹೇಳಿದರು.
ಡಾ. ಸ್ಮಿತಾ ತಮ್ಮಯ್ಯ, ಕ್ಲಸ್ಟರ್ ಮೆಡಿಕಲ್ ಡೈರೆಕ್ಟರ್ ಮತ್ತು ಮುಖ್ಯ ಆಡಳಿತಾಧಿಕಾರಿ, ಅವರು “ಟ್ರಾಮಾ ಪ್ರಕರಣಗಳಲ್ಲಿ ಕ್ಷಿಪ್ರ ಸ್ಪಂದನೆ ಮತ್ತು ತಜ್ಞರ ಸಮೂಹದ ಸಂಯೋಜಿತ ಕಾರ್ಯವೈಖರಿ ಅಗತ್ಯವಿರುತ್ತದೆ. ನಮ್ಮ ಬಹುವಿಷಯ ತಜ್ಞರ ಪಾಲಿಟ್ರಾಮಾ ತಂಡ ಹಾಗೂ ಬಹು ಅಂಗಾಂಗ ಕಸಿಯ ಸೇವೆಗಳ ಅನುಭವದೊಂದಿಗೆ, ನಾವು ಆರೋಗ್ಯ ಸ್ಥಿರೀಕರಣದಿಂದ ಚೇತರಿಕೆವರೆಗಿನ ಎಲ್ಲ ಹಂತಗಳಲ್ಲಿ ನಿರಂತರ ಮತ್ತು ಸಮಗ್ರ ಸೇವೆಯನ್ನು ಒದಗಿಸುತ್ತೇವೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಸವರಾಜ ತೇಲಿ (ಪಶ್ಚಿಮ ವಿಭಾಗದ ಎಸಿಪಿ), ಶ್ರೀ ಸಂಜೀವ ಗೌಡ ಇನ್ಸ್ಪೆಕ್ಟರ್ ಕೆಂಗೇರಿ, ಮೋಹನ್ ದೇವೇಗೌಡ (ಸಂಸ್ಥಾಪಕ, ರನ್ ಅಡಿಕ್ಟ್ಸ್ ಫೌಂಡೇಶನ್), ಅಶ್ವಿನ್ ಕುಮಾರ್ ಎಸ್.ಜಿ. (ರೋಟರಿ ಬೆಂಗಳೂರು ಜ್ಞಾನಾಕ್ಷಿ ಕ್ಲಬ್ ಅಧ್ಯಕ್ಷರು) ಮತ್ತು ರಾಮಚಂದ್ರಪ್ಪ ಜಿ.ಹೆಚ್. (ಮಾಜಿ ಕಾಪೆರ್Çರೇಟರ್, ಆರ್‍ಆರ್ ನಗರ) ಅವರು ಉಪಸ್ಥಿತರಿದ್ದು, ಗ್ಲೆನಿಗಲ್ಸ್ ಬಿಜಿಎಸ್ ಆಸ್ಪತ್ರೆಯ ಸಮಗ್ರ ವ್ಯವಸ್ಥೆ, ತಜ್ಞರ ತಂಡ ಮತ್ತು ತುರ್ತು ಸೇವೆಗಳ ಮಹತ್ವಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಗ್ಲೆನಿಗಲ್ಸ್ ಬಿಜಿಎಸ್ ಆಸ್ಪತ್ರೆಯ ಪಾಲಿಟ್ರಾಮಾ ತಂಡದ ಆರಂಭವು ಆಸ್ಪತ್ರೆಯ ತುರ್ತು ಮತ್ತು ಕ್ಲಿಷ್ಟ ಚಿಕಿತ್ಸಾ ಸೇವೆಗಳಲ್ಲಿ ಮತ್ತೊಂದು ಮಹತ್ವದ ಹಂತವಾಗಿದೆ. 24/7 ತುರ್ತು ಸೇವೆಗಳು, ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಸಂಯೋಜಿತ ಚಿಕಿತ್ಸಾ ಕ್ರಮಗಳ ಮೂಲಕ, ರೋಗಿಗಳ ಬಾಳಿಗೆ ಹೊಸ ಆಶಾಕಿರಣವನ್ನು ನೀಡುವಲ್ಲಿ ಆಸ್ಪತ್ರೆ ಮುನ್ನಡೆಯುತ್ತಿದೆ.