ದೇಶದ ಸಂಸ್ಕೃತಿ, ಸಂಪ್ರಾದಯ ಉಳಿಸಿ,ಬೆಳಸಲು ಮತ್ತು ಮಕ್ಕಳಿಗೆ ಅರಿವು ಮೂಡಿಸಲು ಸಂಸ್ಕೃತಿ ಕಾರ್ಯಕ್ರಮ
A cultural program to preserve, cultivate and create awareness among children about the country's culture

ಬೆಂಗಳೂರು: ಇಂಜನಿಯರ್ಸ್ ಅಕಾಡೆಮಿ ಸಭಾಂಗಣದಲ್ಲಿ ಆಟ-ಪಾಟ ಪ್ರಿ ಸ್ಕೂಲ್ ವತಿಯಿಂದ ಶಾಲೆಯ ಮಕ್ಕಳಿಗೆ ಸಂಸ್ಕೃತಿ ಸಾಂಸ್ಕೃತಿಕ ಕಾರ್ಯಕ್ರಮ.
ಉದ್ಘಾಟನೆಯನ್ನು ಇಂಡಿಯನ್ ನ್ಯಾಷನಲ್ ಸ್ಕೂಲ್ ಅಧ್ಯಕ್ಷರಾದ ಸುಧಾಕರ್, ಶಿವದೇವಾಲಯದ ಅಧ್ಯಕ್ಷರಾದ ಮನೋಹರ್ ಮತ್ತು ಆಟ-ಪಾಟ ಶಾಲೆಯ ಅಧ್ಯಕ್ಷರಾದ ಶಶಿಕುಮಾರ್ ,ಪ್ರಾಂಶುಪಾಲರಾದ ನಂದಾರವರು, ಇಂಡಿಯನ್ ಹೈಸ್ಕೂಲ್ ಪ್ರಾಂಶುಪಾಲರಾದ ನಿತ್ಯರವರು ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು.
ಶಾಲೆಯ ಮಕ್ಕಳಿಂದ ಭಾರತೀಯ ಕಲೆ ಸಾಹಿತ್ಯ ಸಂಸ್ಕೃತಿ ಬಿಂಬಿಸುವ ಕಾರ್ಯಕ್ರಮಗಳು, ಭರತನಾಟ್ಯ, ಸಂಗೀತ, ನೃತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು.
ಸುಧಾಕರ್ ರವರು ಮಾತನಾಡಿ ತಂದೆ ತಾಯಂದಿರು ಮಕ್ಕಳನ್ನು ದೇವರಂತೆ ಕಾಣುತ್ತಾರೆ. ಮಕ್ಕಳಿಗೆ ಉತ್ತಮ ಶಿಕ್ಷಣ ಹಾಗೂ ಗುರುಗಳ ಮಾರ್ಗದರ್ಶನ ಸಿಕ್ಕರೆ ದೇಶದ ಉತ್ತಮ ಪ್ರಜೆಗಳಾಗಿ ಬಾಳುತ್ತಾರೆ. ದೇಶದ ಎಲ್ಲ ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆಯಲ್ಲಿ ದೇಶದ ಸಂಸ್ಕೃತಿಯ ಪಾಠ ಕಲಿಸಬೇಕು ಎಂದು ಹೇಳಿದರು.
ಅಧ್ಯಕ್ಷರಾದ ಶಶಿಕುಮಾರ್ ರವರು ಮಾತನಾಡಿ ಆಟ ಮತ್ತು ಪಾಠದ ಜತೆಯಲ್ಲಿ ಮಕ್ಕಳಿಗೆ ದೇಶದ ಸಂಸ್ಕೃತಿ ಸಂಪ್ರಾದಯ ಕಲಿಸಬೇಕು. ನಮ್ಮ ಮಾತೃಭಾಷೆಯಾದ ಕನ್ನಡವನ್ನು ಪ್ರತಿಯೊಂದು ಮಗುವಿಗೆ ಕಲಿಸಬೇಕು.
ಸ್ವಾತಂತ್ರ್ಯ ಹೋರಾಟಗಾರರು, ರೈತರು ಮತ್ತು ದೇಶ ಸೇವೆ ಮಾಡುತ್ತಿರುವ ಸೈನಿಕರು ಹಾಗೂ ಕಲೆ, ಸಾಹಿತ್ಯ ಸಂಸ್ಕೃತಿಯನ್ನು ಶಾಲೆಯಲ್ಲಿ ಮಕ್ಕಳಿಗೆ ಚಿಕ್ಕವಯಸ್ಸಿನಲ್ಲಿ ಅವರಿಗೆ ಅರಿವು ಮೂಡಿಸಬೇಕು ಇದರಿಂದ ಅವರಿಗೆ ದೇಶಭಿಮಾನ ಬೆಳಯುತ್ತದೆ. ಮಕ್ಕಳು ತಪ್ಪು ಮಾಡುವುದು ಸಹಜ, ಮಕ್ಕಳ ತಪ್ಪುಗಳನ್ನು ತಿದ್ದಿ ಸಮಾಜದ ಉತ್ತಮ ಪ್ರಜೆಯಾಗಿ ರೂಪಿಸಲು ಶಿಕ್ಷಕರ ಪಾತ್ರ ಡೊಡ್ಡದು ಎಂದು ಹೇಳಿದರು.
ಪ್ರಾಂಶುಪಾಲರಾದ ನಂದಾ ರವರು ಮಾತನಾಡಿ ಯಶ್ವಸಿ ಏನ್ನುವುದು ನಿರಂತರ ಸಾಧನೆಯಿಂದ ಮಾತ್ರ ಸಾಧ್ಯ. ಶಿಕ್ಷಕರಿಂದ ಉತ್ತಮ ಪ್ರಪಂಚ ನಿರ್ಮಾಣ ಮಾಡಲು ಸಾಧ್ಯ. ಏಕಲವ್ಯರವರು ನಿರಂತರ ಸಾಧನೆಯಿಂದ, ಗುರುಗಳ ಆಶೀರ್ವಾದದಿಂದ ಉತ್ತಮ ಬಿಲ್ಲುಗಾರಿಕೆ ಕಲಿಯಲು ಸಾಧ್ಯವಾಯತು.
ಶಾಲೆಯ ಶಿಕ್ಷಕಿಯರುಗಳಾದ ಲಲಿತ, ಮಂಜುಳ, ಅರ್ಪಿತ, ಶಾಂತಿ ಸುಚಿತ್ರರವರು ಭಾಗವಹಿಸಿದ್ದರು.