ಕನ್ನಡವೇ ಸತ್ಯ ಕನ್ನಡದಲ್ಲಿ ಸಹಿ ಅಭಿಯಾನಕ್ಕೆ ಶಾಸಕ ಎಲ್.ಎ ರವಿ ಸುಬ್ರಹ್ಮಣ್ಯ ಚಾಲನೆ
MLA Ravi Subrahmany drives for signature campaign in Kannadave Satya kannadadalli shai

ಬೆಂಗಳೂರು : 68ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಬೆಂಗಳೂರಿನ ಡಿ.ವಿ.ಜಿ.ರಸ್ತೆಯಲ್ಲಿ ಅಬಲಾಶ್ರಮ ಆಯೋಜಿಸಿದ್ದ "ಕನ್ನಡವೇ ಸತ್ಯ ಕನ್ನಡದಲ್ಲಿ ಸಹಿ ಅಭಿಯಾನದಲ್ಲಿ ಶಾಸಕ ಎಲ್ಎ ರವಿ ಸುಬ್ರಹ್ಮಣ್ಯ ರವರು ಭಾಗವಹಿಸಿ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಬೆಳೆಸಲು ಕನ್ನಡದಲ್ಲಿ ಸಹಿ ಮಾಡಿದರು. ಈ ವೇಳೆ ಎಲ್ಎ ರವಿ ಸುಬ್ರಹ್ಮಣ್ಯ ರವರು ಮಾತನಾಡಿ
ಕನ್ನಡ ಭಾಷೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಪ್ರೋತ್ಸಾಹಿಸುವ ಈ ಅಭಿಯಾನವು ಸಮಾಜದಲ್ಲಿ ಭಾಷಾ ಜಾಗೃತಿ ಮತ್ತು ಗೌರವವನ್ನು ಹೆಚ್ಚಿಸುವಲ್ಲಿ ಮುಖ್ಯವಾಗಿದೆ. ರಾಜ್ಯ-ಪದ ರಕ್ಷಣೆಯ ಜೊತೆಗೆ ಸಮೃದ್ಧ, ಸಹಬಾಳ್ವೆ, ಅಭಿವೃದ್ಧಿಶೀಲ ಕರ್ನಾಟಕವನ್ನು ಕಟ್ಟೋಣ ಎಂದರು.