ಟೆಸ್ಟ್ ಕ್ರಿಕೆಟ್‌ಗೆ ಕೇನ್ ವಿಲಿಯಮ್ಸನ್ ನಿವೃತ್ತಿ! ಮಹತ್ವದ ಸುಳಿವು ನೀಡಿದ್ರಾ?

ಟೆಸ್ಟ್ ಕ್ರಿಕೆಟ್‌ಗೆ ಕೇನ್ ವಿಲಿಯಮ್ಸನ್  ನಿವೃತ್ತಿ! ಮಹತ್ವದ ಸುಳಿವು ನೀಡಿದ್ರಾ?
ಜಾಹೀರಾತಿಗಾಗಿ ಸಂಪರ್ಕಿಸಿ 6362546216

ಹ್ಯಾಮಿಲ್ಟನ್: ನ್ಯೂಜಿಲೆಂಡ್ ತಂಡದ ಅನುಭವಿ ಆಟಗಾರ ಟಿಮ್ ಸೌಥಿ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಹ್ಯಾಮಿಲ್ಟನ್ ಸೆಡನ್ ಪಾರ್ಕ್ ಮೈದಾನದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಮೂಲಕ 16 ವರ್ಷಗಳ ತಮ್ಮ ಟೆಸ್ಟ್ ಕ್ರಿಕೆಟ್ ಕೆರಿಯರ್‌ಗೆ ಗುಡ್ ಬೈ ಹೇಳಿದ್ದಾರೆ.

ಟಿಮ್ ಸೌಥಿ ವಿದಾಯ ಘೋಷಿಸುತ್ತಿದ್ದಂತೆ, ನ್ಯೂಜಿಲೆಂಡ್‌ನ ಮತ್ತೋರ್ವ ಅನುಭವಿ ಆಟಗಾರ ಕೇನ್ ವಿಲಯಮ್ಸ್‌ನ್ ಕೂಡ ಟೆಸ್ಟ್ ಕ್ರಿಕೆಟಿಗೆ ನಿವೃತ್ತಿ ಘೋಷಿಸಲಿದ್ದಾರೆ ಎಂಬ ಬಗ್ಗೆ ಚರ್ಚೆ ಹುಟ್ಟಿಕೊಂಡಿದೆ. ಹೌದು, ಇಂಗ್ಲೆಂಡ್ ವಿರುದ್ಧದ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಕೇನ್‌ ವಿಲಿಯಮ್ಸ್‌ನ್ ಶತಕ ಸಿಡಿಸಿ ಮಿಂಚಿದ್ದರೂ, ಅವರು ಟೆಸ್ಟ್ ಕ್ರಿಕೆಟ್‌ನಿಂದ ದೂರ ಉಳಿಯುವ ನಿರ್ಧಾರ ಮಾಡಿದ್ದಾರಾ ಎಂಬ ಅನುಮಾನ ಮೂಡುತ್ತಿದೆ.

ಟೆಸ್ಟ್ ಚಾಂಪಿಯನ್ಸ್ ಟ್ರೋಫಿಗೆ ವಿಭಿನ್ನ ಕ್ರಿಕೆಟ್ ತಂಡ ಬರಲಿದೆ. ಇದು ಸಾಕಷ್ಟು ರೋಮಾಂಚನಕಾರಿಯಾಗಿದೆ. ಅದು ಹೇಗೆ ಎಂಬುದನ್ನು ಕಾದು ನೋಡಿ... ಐ ಲವ್ ಟೆಸ್ಟ್ ಕ್ರಿಕೆಟ್' ಎಂದು ಕೇನ್ ವಿಲಿಯಮ್ಸ್‌ನ್ ಹೇಳಿದ್ದಾರೆ.