ಸಾರ್ವಜನಿಕ ಅನುಕೂಲಕ್ಕೆ ಬಹುಉಪಯೋಗಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಗುದ್ದಲಿಪೂಜೆ ನೇರವೆರಿಸಿದ ಸಚಿವ ದಿನೇಶ್ ಗುಂಡೂರಾವ್

Minister Dinesh Gundurao laid the foundation stone for the construction of multi-purpose building for public benefit.

ಸಾರ್ವಜನಿಕ ಅನುಕೂಲಕ್ಕೆ ಬಹುಉಪಯೋಗಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಗುದ್ದಲಿಪೂಜೆ ನೇರವೆರಿಸಿದ ಸಚಿವ ದಿನೇಶ್ ಗುಂಡೂರಾವ್
ಜಾಹೀರಾತಿಗಾಗಿ ಸಂಪರ್ಕಿಸಿ 6362546216

ಬೆಂಗಳೂರು: ಶಿರೂರ್ ಪಾರ್ಕ್ ರಸ್ತೆಯಲ್ಲಿರುವ ಬಿಬಿಎಂಪಿ ಜಾಗದಲ್ಲಿ ಸಾರ್ವಜನಿಕರ ಉಪಯೋಗಕ್ಕೆ ಬಹುಉಪಷೋಗಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಗುದ್ದಲಿಪೂಜೆ ಕಾರ್ಯಕ್ರಮ.

ಆರೋಗ್ಯ ಮತ್ತುಕುಟುಂಬ ಕಲ್ಯಾಣ ಖಾತೆ ಸಚಿವರಾದ ದಿನೇಶ್ ಗುಂಡೂರಾವ್ ರವರು ಪೂಜೆ ಸಲ್ಲಿಸಿ ಗುದ್ದಲಿಪೂಜೆ ನೇರವೆರಿಸಿದರು.

ಇದೇ ಸಂದರ್ಭದಲ್ಲಿ ಸಚಿವರಾದ ದಿನೇಶ್ ಗುಂಡೂರಾವ್ ಗಾಂಧಿನಗರ ವಿಧಾನಸಭಾ ಕ್ಷೇತ್ರದ ಸಾರ್ವಜನಿಕರ ಉಪಯೋಗಕ್ಕೆ ನಾಲ್ಕು ಮಹಡಿ ಕಟ್ಟಡ ನಿರ್ಮಾಣವಾಗಲಿದ್ದು. ಬಿಬಿಎಂಪಿ ಕಂದಾಯ, ಆರೋಗ್ಯ ಮತ್ತು ಇಂಜನಿಯರ್ ವಿಭಾಗದ ಬೆಸ್ಕಾಂ, ಬೆಂಗಳೂರು ಓನ್, ನಾಡ ಕಛೇರಿ ಒಂದೇ ಸೂರಿನ ಅಡಿಯಲ್ಲಿ ಬರಲಿದೆ.
ಅಧಿಕಾರಿಗಳ ಜೊತೆಯಲ್ಲಿ ಸಭೆ ನಡೆಸಲು ಮೀಟಿಂಗ್ ಹಾಲ್ ವಲಯ ಆಯುಕ್ತರು, ಮುಖ್ಯ ಅಭಿಯಂತರರು ಕಛೇರಿಗಳು ಕೆಳಹಂತದ ಅಧಿಕಾರಿಗಳಿಂದ ಮೇಲಧಿಕಾರಿಗಳವರಗೆ  ಕಾರ್ಯಾಲಯ ಬರುವುದರಿಂದ ಸಾರ್ವಜನಿಕರು ತಮ್ಮ ಸಮಸ್ಯೆಗಳು ನಿವಾರಣೆ ಹಾಗೂ ಇನ್ನಿತರೆ ಕೆಲಸಗಳಿಗೆ ಒಂದೇ ಜಾಗದಲ್ಲಿ ಕೆಲಸಗಳು ನಡೆಯಲಿದೆ ಇದರಿಂದ ಕಛೇರಿಯಿಂದ ಕಛೇರಿಗೆ ಸಾರ್ವಜನಿಕರು ಅಲೆಯುವುದು ತಪ್ಪುತ್ತದೆ ಎಂದು ಹೇಳಿದರು

ಗಾಂಧಿನಗರ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಉಮೇಶ್ ಬಾಬು, ಮಾಜಿ ಮಹಾನಗರ ಪಾಲಿಕೆ ಸದಸ್ಯ ನವೀನ್ ಕುಮಾರ್ ರಾಥೋಡ್, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರುಗಳಾದ ಶ್ರೀನಿವಾಸಮೂರ್ತಿ, ಸರವಣನ್, ಬಿಬಿಎಂಪಿ ಅಧಿಕಾರಿಗಳು ಉಪಸ್ಥಿತರಿದ್ದರು.