ಕ್ಯಾನ್ಸರ್ ಜಾಗೃತಿ ವಾಕಥಾನ್

Cancer Awareness Walkathon

ಕ್ಯಾನ್ಸರ್ ಜಾಗೃತಿ ವಾಕಥಾನ್
ಜಾಹೀರಾತಿಗಾಗಿ ಸಂಪರ್ಕಿಸಿ 6362546216

ಬೆಂಗಳೂರು : ಬೆಂಗಳೂರಿನ ಸೇಂಟ್ ಜೋಸೆಫ್ ವಿಶ್ವವಿದ್ಯಾನಿಲಯದ ಎನ್‌ಎಸ್‌ಎಸ್ ಘಟಕ, ಯೂತ್ ರೆಡ್‌ಕ್ರಾಸ್, ಎನ್‌ಸಿಸಿ ವಿಂಗ್ಸ್, ಬೆಂಬಲ, ಇಕೋ ಕ್ಲಬ್, ವಿದ್ಯಾರ್ಥಿ ಪರಿಷತ್, ಲಯನ್ಸ್ ಇಂಟರ್‌ನ್ಯಾಶನಲ್ 317 ಎ ಮತ್ತು ಸಂಪ್ರದಾ ಆಸ್ಪತ್ರೆ ಸಹಯೋಗದಲ್ಲಿ ಕ್ಯಾನ್ಸರ್ ಜಾಗೃತಿ ವಾಕಥಾನ್ ಆಯೋಜಿಸಲಾಗಿತ್ತು.
ಈ ಕ್ಯಾನ್ಸರ್ ಜಾಗೃತಿ ವಾಕಥಾನ್ ಅನ್ನು ಆರಂಭಿಕ ಕ್ಯಾನ್ಸರ್ ಪತ್ತೆ, ತಡೆಗಟ್ಟುವಿಕೆ ಮತ್ತು ಆರೋಗ್ಯಕರ ಜೀವನಶೈಲಿಯ ಬಗ್ಗೆ ಜಾಗೃತಿ ಮೂಡಿಸುವುದು   ವಾಕಥಾನ್ ಮೂಲ ಉದ್ದೇಶವಾಗಿತ್ತು. 
 ವಾಕಥಾನ್‌ನಲ್ಲಿ ಸುಮಾರು 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಲಯನ್ಸ್ ಮತ್ತು ಹಲವು ಸಂಸ್ಥೆಗಳ ಸದಸ್ಯರು  ಭಾಗವಹಿಸಿದ್ದರು.
ಈ ಕ್ಯಾನ್ಸರ್ ಜಾಗೃತಿ ವಾಕಥಾನ್ ಸೇಂಟ್ ಜೋಸೆಫ್ ವಿಶ್ವವಿದ್ಯಾಲಯದಿಂದ ಪ್ರಾರಂಭಗೊಂಡು  ಲ್ಯಾನ್‌ಫೋರ್ಡ್ ರಸ್ತೆ, ರಿಚ್‌ಮಂಡ್ ವೃತ್ತ, ಕಂಠೀರವ ಕ್ರೀಡಾಂಗಣ, ಕಸ್ತೂರಬಾ ರಸ್ತೆ, ವಿಟ್ಟಲ್ ಮಲ್ಯ ರಸ್ತೆಯ ಮೂಲಕ ಸೇಂಟ್ ಜೋಸೆಫ್ ವಿಶ್ವವಿದ್ಯಾಲಯಕ್ಕೆ ಮರಳಿತು. 
ಈ ವಾಕಥಾನ್ ನಲ್ಲಿ ಮುಖ್ಯ ಅತಿಥಿಗಳಾಗಿ ಸಂಪ್ರದಾ ಆಸ್ಪತ್ರೆಯ ಪ್ರೆವೆಂಟಿ ಆಂಕೊಲಾಜಿಸ್ಟ್ ಡಾ. ವಿನೋದ್, ಸೇಂಟ್ ಜೋಸೆಫ್ ವಿಶ್ವವಿದ್ಯಾಲಯದ ಪ್ರೊ-ವೈಸ್ ಚಾನ್ಸಲರ್ ಪ್ರೊ.ಡಾ.ರೊನಾಲ್ಡ್ ಮಸ್ಕರೇನ್ಹಸ್, ಸೇಂಟ್ ಜೋಸೆಫ್ ವಿಶ್ವವಿದ್ಯಾಲಯದ ಎನ್ಎಸ್ಎಸ್ ಸಂಯೋಜಕರಾದ  ಸೆಲ್ವಿನ್ ಪಾಲ್ ಜೆ, ವಾಕಥಾನ್ ನ ವಿಶೇಷ ಆಹ್ವಾನಿತರಾದ ಲಯನ್ಸ್ ಇಂಟರ್ ನ್ಯಾಷನಲ್ 317 ಎ ಲಯನ್ ರಾಘವೇಂದ್ರ ಮತ್ತು ಲಯನ್ ಮನೋಜ್ ಕುಮಾರ್, ಲಯನ್ ವಿಶಾಲ್ ಯಾದವ್ ಸೇರಿದಂತೆ ಇತರರು ವಾಕಥಾನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.