ವಿಸಿಬಿ ಆಡಳಿತ ಮಂಡಳಿ ಚುನಾವಣೆಯಲ್ಲಿ ಶ್ರೀನಿವಾಸರಾವ್ ಅಧ್ಯಕ್ಷರಾಗಿ, ಗಣೇಶ್ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆ
VCB board election Srinivasa Rao as President, Ganesh as Vice President elected unopposed

ಬೆಂಗಳೂರು : ಸರ್ ಎಂ ವಿಶ್ವೇಶ್ವರಯ್ಯ ಕೋ -ಆಪರೇಟಿವ್ ಬ್ಯಾಂಕ್ ನ ಆಡಳಿತ ಮಂಡಳಿ ಚುನಾವಣೆಯಲ್ಲಿ ಎಸ್. ಎಸ್.ಶ್ರೀನಿವಾಸರಾವ್ ಅಧ್ಯಕ್ಷರಾಗಿ, ಎಲ್.ಗಣೇಶ್ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆ.
ಇಂದು ನಡೆದ ಸಭೆಯಲ್ಲಿ ಚುನಾವಣಾಧಿಕಾರಿ ಚಂದ್ರಶೇಖರ ಅವರು ವಿಜೇತ ಸದಸ್ಯರಿಗೆ ಪ್ರಮಾಣ ಪತ್ರವನ್ನು ವಿತರಿಸಿ, ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಸೂಚಿಸಿದರು, ಅಧ್ಯಕ್ಷ ಸ್ಥಾನಕ್ಕೆ ಶ್ರೀನಿವಾಸರಾವ್ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಗಣೇಶ್ ಅವರು ನಾಮಪತ್ರ ಸಲ್ಲಿಸಿದ್ದು ಬೇರೆ ಯಾರು ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ಚಂದ್ರಶೇಖರ ಅವರು ಇವರಿಬ್ಬರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು, ಸಂದರ್ಭದಲ್ಲಿ ಹದಿನೈದು ಪ್ರತಿನಿಧಿಗಳ ಪೈಕಿ ಹನ್ನೊಂದು ಸದಸ್ಯರು ಹಾಜರಿದ್ದರು,ಪ್ರಗತಿ ತಂಡದ ವೇದವ್ಯಾಸ್, ಗೋಪಿನಾಥ್ ರಾವ್ , ಮುರಲೀಧರ್, ಮಮತ, ಕಿರಣ್ ನಾಡಿಗ್,ರಘು, ರವಿಕುಮಾರ್,ವೆಂಕಟೇಶ್ ಮತ್ತು ಲಕ್ಷ್ಮೀನಾರಾಯಣ ಹಾಜರಿದ್ದು, ರವಿಶಂಕರ್, ಗೋಪಿನಾಥ್ ಮತ್ತು ನಳಿನಿ ಶಿವಶಂಕರ ಗೈರು ಹಾಜರಾಗಿದ್ದರು,
ವಿಜೇತರನ್ನು ಬ್ಯಾಂಕ್ ಸಿಇಓ ಶ್ರೀಧರ್, ಎಸಿಇಓ ಅಶ್ವತನಾರಾಯಣ ಮತ್ತು ರಾಜೇಂದ್ರ ಹಾಗು ಸೂರ್ಯನಾರಾಯಣ, ಸುಧೀಂದ್ರರಾವ್, ಶ್ರೀಕಾಂತ್, ಶ್ರೀವಿದ್ಯಾ ವಿಜಯ್ ರಾಘವನ್ ಸೇರಿದಂತೆ ಮತ್ತಿತರರು ಅಭಿನಂದಿಸಿದರು.