ಶಾಸಕ ಎಸ್.ಸುರೇಶ್ ಕುಮಾರ್ ರವರ ನೇತೃತ್ವದಲ್ಲಿ ಜನಸ್ಪಂದನಾ ಕಾರ್ಯಕ್ರಮ

Public awareness program under the leadership of MLA S. Suresh Kumar

ಶಾಸಕ ಎಸ್.ಸುರೇಶ್ ಕುಮಾರ್ ರವರ ನೇತೃತ್ವದಲ್ಲಿ ಜನಸ್ಪಂದನಾ ಕಾರ್ಯಕ್ರಮ
ಜಾಹೀರಾತಿಗಾಗಿ ಸಂಪರ್ಕಿಸಿ 6362546216

ಬೆಂಗಳೂರು: ಶಾಸಕರ ಜನಸಂಪರ್ಕ ಕಛೇರಿ ಅವರಣದಲ್ಲಿ ಶಾಸಕರಾದ ಎಸ್.ಸುರೇಶ್ ಕುಮಾರ್ ರವರ ನೇತೃತ್ವದಲ್ಲಿ ಜನರೊಂದಿಗೆ ಜನ ಸೇವಕ ಜನಸ್ಪಂದನಾ ಕಾರ್ಯಕ್ರಮ.

ಸಾರ್ವಜನಿಕರ ಸಮಸ್ಯೆಗಳನ್ನು ಶಾಸಕರನ್ನ ಖುದ್ದು ಮುಖಮುಖಿ ಭೇಟಿ ಸಮಸ್ಯೆಗಳನ್ನು ಸ್ಥಳದಲ್ಲಿ ನಿವಾರಣೆ ಮಾಡುವ ಕಾರ್ಯಕ್ರಮ.

ಶಾಸಕರಾದ ಎಸ್.ಸುರೇಶ್ ಕುಮಾರ್ ರವರು ಸಾರ್ವಜನಿಕರ ಸಮಸ್ಯೆಗಳ ಅಹವಾಲುಗಳನ್ನು ಸ್ವೀಕರಿಸಿದರು.

ಸಮಸ್ಯೆಗಳ ನಿರಂತರ, ನಿವಾರಣೆ ಮಾಡುವುದು ನಮ್ಮ ಕರ್ತವ್ಯ ನಮ್ಮದು. ಮೂರು ವಾರಗಳಿಂದ ಪ್ರತಿ ಸೋಮವಾರ ಜನರೊಂದಿಗೆ ಸಮಸ್ಯೆಗಳ ಕುರಿತು ಮುಕ್ತ ಚರ್ಚೆ, ನೇರ ಭೇಟಿ ಮಾಡಿರುವ ಕಾರಣ ಶೇಕಡ 90ರಷ್ಟು ಪರಿಹಾರವಾಗಿದೆ.

ಅಧಿಕಾರಿ ಸಮಕ್ಷಮದಲ್ಲಿ ಸಾರ್ವಜನಿಕರ ಸಮಸ್ಯೆಗಳು ಕೇಳುವುದರಿಂದ ತತಕ್ಷಣ ಪರಿಹಾರ ಸಿಗುತ್ತಿದೆ.

ಕುಡಿಯುವ, ರಸ್ತೆ, ಚರಂಡಿ ಮತ್ತು ಕಸವಿಲೇವಾರಿ, ವೈದ್ಯಕೀಯ ಚಿಕಿತ್ಸೆ ಬಗ್ಗೆ ಹೆಚ್ಚಿನ ದೂರುಗಳು ಬಂದಿದೆ.
ಸಮಸ್ಯೆಗಳ ಶಾಶ್ವತ ಪರಿಹಾರ ಸಿಗಬೇಕು ಎಂದು ಜನರೊಂದಿಗೆ ಜನಸೇವಕ ಕಾರ್ಯಕ್ರಮ ಆಯೋಜಿಸಿಕೊಂಡು ಬರಲಾಗುತ್ತಿದೆ ಉತ್ತಮ ಜನಸ್ಪಂದನೆ ಸಿಗುತ್ತಿದೆ ಎಂದು ಎಸ್.ಸುರೇಶ್ ಕುಮಾರ್ ರವರು ಹೇಳಿದರು.

ಜಲಮಂಡಳಿ ಕಾರ್ಯಪಾಲಕ ಅಭಿಯಂತರ ಹರಿನಾಥ್, ಬಿಬಿಎಂಪಿ ಕಾರ್ಯಪಾಲಕ ಅಭಿಯಂತ ಗಂಗಾಧರ್, ಮಂಡಲ ಅಧ್ಯಕ್ಷರಾದ ಸುದರ್ಶನ್, ಪ್ರಧಾನ ಕಾರ್ಯದರ್ಶಿ ಗಿರೀಶ್ ಗೌಡ,ಮಾಜಿ ಮಹಾಪೌರರಾದ ರಂಗಣ್ಣ, ಮಾಜಿ ಪಾಲಿಕೆ ಸದಸ್ಯರುಗಳಾದ ರಾಜಣ್ಣ, ವಿಜಯಕುಮಾರ್, ಹೆಚ್.ಆರ್.ಕೃಷ್ಣಪ್ಪ, ದೀಪಾ ನಾಗೇಶ್ ರವರು ಉಪಸ್ಥಿತರಿದ್ದರು.