ಕೇಂದ್ರ ಬಿಜೆಪಿ ಸರ್ಕಾರದ ವಿರುದ್ದ ಕೆಪಿಸಿಸಿ ಅಂಗ ಸಂಸ್ಥೆ INBCWF ವತಿಯಿಂದ ಪ್ರತಿಭಟನೆ
Protest by KPCC affiliate INBCWF against central BJP government
ಬೆಂಗಳೂರು: ಕೇಂದ್ರ ಬಿಜೆಪಿ ಸರ್ಕಾರ ಬಜೆಟ್ ನಲ್ಲಿ ರಾಜ್ಯಕ್ಕೆ ಅನುದಾನ ನೀಡದೆ, ಆನ್ಯಾಯ ಮಾಡುತ್ತಿದೆ ಎಂದು ಆರೋಪಿಸಿ ಕೆಪಿಸಿಸಿ ಅಂಗ ಸಂಸ್ಥೆ INBCWF ವತಿಯಿಂದ ವಿನೂತನವಾಗಿ ಪ್ರತಿಭಟನೆ ನಡೆಸಲಾಯಿತು.
INBCWF ಅಧ್ಯಕ್ಷರಾದ ಜಿ.ಆರ್.ದಿನೇಶ್ ರವರು ಮತ್ತು ಸೇವಾದಳ ಅಧ್ಯಕ್ಷರಾದ ಎಂ.ರಾಮಚಂದ್ರ, ಜಾಕೀರ್ ಹುಸೇನ್. ಅಕ್ರಮ್ ಪಾಷಾ. ಪ್ರಸಾದ್ ಆರಾಧ್ಯ, ನಾಗರಾಜು, ಸಂಗೀತ ನಾಡಗೌಡ್ರು, ರಘು, ಗಿರೀಶ್, ಮಹಿಳಾ ಮುಖಂಡರು ರಾಜ್ಯ ಪದಾಧಿಕಾರಿಗಳು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಅಧ್ಯಕ್ಷರಾದ ಜಿ.ಆರ್.ದಿನೇಶ್ ರವರು ಮಾತನಾಡಿ ಬಿಜೆಪಿ ಕೇಂದ್ರ ಸರ್ಕಾರ ಕಳೆದ 10ವರ್ಷಗಳಿಂದ ತನ್ನ ಬಜೆಟ್ ನಲ್ಲಿ ರಾಜ್ಯಕ್ಕೆ ಅನ್ಯಾಯ ಮಾಡುತ್ತಾ ಬಂದಿದೆ. ಕಳೆದ ಲೋಕಸಭಾ ಚುನಾವಣೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟಕ್ಕೆ 19ಲೋಕಸಭಾ ಸ್ಥಾನ ರಾಜ್ಯದ ಜನತೆ ನೀಡಿದ್ದಾರೆ. ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲ ಸೀತಾರಾಮನ್ ರವರು ಎರಡು ಬಾರಿ ರಾಜ್ಯದಿಂದ ರಾಜ್ಯಸಭೆ ಆಯ್ಕೆಯಾಗಿದ್ದಾರೆ.
ಐದು ಸಚಿವರು ಕೇಂದ್ರ ಸರ್ಕಾರದಲ್ಲಿ ಇದ್ದಾರೆ ರಾಜ್ಯಕ್ಕೆ ಇವರ ಕೊಡುಗೆ ಏನು ಎಂಬುದು ರಾಜ್ಯದ ಜನರಿಗೆ ತಿಳಿಸಬೇಕು. ರಾಜ್ಯದಿಂದ ಕೇಂದ್ರ ಸರ್ಕಾರಕ್ಕೆ ಜಿ.ಎಸ್.ಟಿ.ರೂಪದಲ್ಲಿ ಲಕ್ಷಾಂತರ ಕೋಟಿ ರೂಪಾಯಿ ಸಂಗ್ರಹ ಮಾಡುತ್ತದೆ, ಅದರೆ ರಾಜ್ಯಕ್ಕೆ ಅನುದಾನ ನೀಡುವುದಿಲ್ಲ ದೇಶದಲ್ಲಿ ಎರಡನೇಯ ಅತಿಡೊಡ್ಡ ತೆರಿಗೆ ಪಾವತಿ ರಾಜ್ಯ ನಮ್ಮದು.
ಕೇಂದ್ರ ಸರ್ಕಾರ ತಾಯಿ ಸ್ಥಾನದಲ್ಲಿ ನಿಂತು ಎಲ್ಲ ರಾಜ್ಯಗಳಿಗೆ ನ್ಯಾಯ ಒದಗಿಸಬೇಕು ಅದರೆ ಕರ್ನಾಟಕಕ್ಕೆ ಬಜೆಟ್ ನಲ್ಲಿ ಅನುದಾನ ನೀಡದೇ ತಾರತಮ್ಯ ಮಾಡಿದೆ ಮತ್ತು ಬಿಹಾರ ಮತ್ತು ಆಂಧ್ರಪ್ರದೇಶ ಹೆಚ್ಚಿನ ಅನುದಾನ ನೀಡಿದೆ ಕೇಂದ್ರ ಸರ್ಕಾರ ರಾಜ್ಯದ ಮೇಲೆ ಮಲತಾಯಿ ಧೋರಣೆ ಮಾಡುತ್ತಿದೆ ಎಂದರು.