ಕೇಂದ್ರ ಸಚಿವೆ ಹಾಗೂ ಬಿಜೆಪಿ ನಾಯಕಿ ಶೋಭಾ ಕರಂದ್ಲಾಜೆಯನ್ನು ಬಂಧಿಸಬೇಕೆಂದು ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರಿಂದ ಬೃಹತ್ ಪ್ರತಿಭಟನೆ

ಕೇಂದ್ರ ಸಚಿವೆ ಹಾಗೂ ಬಿಜೆಪಿ ನಾಯಕಿ ಶೋಭಾ ಕರಂದ್ಲಾಜೆಯನ್ನು ಬಂಧಿಸಬೇಕೆಂದು ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರಿಂದ ಬೃಹತ್ ಪ್ರತಿಭಟನೆ
ಜಾಹೀರಾತಿಗಾಗಿ ಸಂಪರ್ಕಿಸಿ 6362546216

ಬೆಂಗಳೂರು : ಕೆಐಎಡಿಬಿ ಅಕ್ರಮ ಹಗರಣದ ಪ್ರಕರಣದಲ್ಲಿ ಆರೋಪ ಹೊತ್ತಿರುವ ಕೇಂದ್ರ ಸಚಿವೆ ಹಾಗೂ ಬಿಜೆಪಿ ನಾಯಕಿ ಶೋಭಾ ಕರಂದ್ಲಾಜೆಯನ್ನು ಇಡಿ ಇಲಾಖೆ ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ನಗರದ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದ ಪ್ರತಿಭಟನೆ ನಡೆಸಿದರು. ಈ ವೇಳೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳು ಹಾಗೂ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ನ ಅಧ್ಯಕ್ಷರಾದ ಎಸ್ ಮನೋಹರ್ ರವರು ಮಾತನಾಡಿ ಕೇಂದ್ರದ ಇಡಿ ಸಿಬಿಐ ಆದಾಯ ತೆರಿಗೆ ಇಲಾಖೆಗಳು ಭ್ರಷ್ಟ ಬಿಜೆಪಿ ಸಚಿವರನ್ನು ಮತ್ತು ಪಕ್ಷದ ನಾಯಕರನ್ನು ಬಂಧಿಸದೆ ಕ್ರಮ ಕೈಗೊಳ್ಳದೆ ವಿರೋಧ ಪಕ್ಷದ ನಾಯಕರನ್ನ ಬಂಧಿಸಿ ಬೆದರಿಸುತ್ತಿದೆ ಎಂಬುದಕ್ಕೆ ಶೋಭಾ ಕರಂದ್ಲಾಜೆ ಪ್ರಕರಣಕ್ಕೆ ಸಾಕ್ಷಿಯಾಗಿದೆ,

 ಶೋಭಾ ಕರಂದ್ಲಾಜೆ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಾಜಿ ಸಚಿವ ಕಟ್ಟಾ ಸುಬ್ರಮಣಿ ನಾಯ್ಡು ಹಾಗೂ ಅವರ ಪುತ್ರ ಜಗದೀಶ್ ಕಟ್ಟಾ ಅವರ ವಿರುದ್ಧ ಭ್ರಷ್ಟಾಚಾರದ ಹಗರಣದ ದಾಖಲಾಗಿ ಸುಮಾರು 10 ವರ್ಷ ಕಳೆದಿದೆ ಹಿಂದಿನ ಈ ಪ್ರಕರಣದಲ್ಲಿ ತನಿಖೆ ನಡೆದರೂ ಇಲ್ಲಿಯವರೆಗೂ ಶೋಭಾ ಕರಂದ್ಲಾಜೆ ರವರನ್ನು ಬಂಧಿಸಿಲ್ಲ ಯಾಕೆ ಎಂಬುದನ್ನು ಇಡೀ ಇಲಾಖೆ ಸ್ಪಷ್ಟಪಡಿಸಬೇಕು,

 ದೇಶದಲ್ಲಿ ಅತಿ ಹೆಚ್ಚು ಭ್ರಷ್ಟಾಚಾರ ಮಾಡಿರುವ ಬಿಜೆಪಿ ನಾಯಕರನ್ನು ಬಂಧಿಸುತ್ತಿಲ್ಲ ಕೇವಲ ತನ್ನ ವಿರೋಧಿಗಳನ್ನ ಬಂಧಿಸಲು ಮಾತ್ರ ಶ್ರೀ ನರೇಂದ್ರ ಮೋದಿ ತನ್ನ ಅಧಿಕಾರವನ್ನು ದುರುಪಯೋಗ ಪಡೆದುಕೊಳ್ಳುತ್ತಿದ್ದಾರೆ ಎಂಬುದಕ್ಕೆ ಭ್ರಷ್ಟ ಕೇಂದ್ರ ಬಿಜೆಪಿ ಸರ್ಕಾರದ ಈ ಬಗ್ಗೆ ನೀತಿ ಎತ್ತಿ ತೋರುತ್ತಿದೆ,

 ಭ್ರಷ್ಟಾಚಾರದ ಹಗರಣದಲ್ಲಿ ಆರೋಪ ಹೊತ್ತು ಇಡೀ ತನಿಖೆಯನ್ನು ಎದುರಿಸುತ್ತಿರುವ ಶೋಭಾ ಕರಂದ್ಲಾಜೆಯನ್ನು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದಂತೆ ಸೂಕ್ತ ಕ್ರಮವನ್ನು ಚುನಾವಣಾ ಆಯೋಗವು ಸಹ ಕೈಗೊಳ್ಳಬೇಕು ಚುನಾವಣಾ ಆಯೋಗಕ್ಕೆ ಮಾಹಿತಿ ಮುಚ್ಚಿಟ್ಟಿರುವ ಹಿನ್ನೆಲೆಯಲ್ಲಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನೆ ನಡೆಸಲಾಯಿತು ಎಂದರು.

 ಈ ಪ್ರತಿಭಟನೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳು ಹಾಗೂ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ನ ಅಧ್ಯಕ್ಷರಾದ ಎಸ್ ಮನೋಹರ್ ರವರು ಕಾಂಗ್ರೆಸ್ ಪಕ್ಷದ ಮುಖಂಡರಾದ ಎ.ಆನಂದ್ ಪ್ರಕಾಶ್ ಜಿ. ಹೇಮರಾಜು, ಬಾಲಕೃಷ್ಣ, ಪರಿಸರ ರಾಮಕೃಷ್ಣ, ಪುಟ್ಟರಾಜು, ರಂಜಿತ್, ಚಂದ್ರಶೇಖರ್, ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.