ಕನ್ನಡ ರಾಜ್ಯೋತ್ಸವದ ಅಂಗವಾಗಿ ಸಚಿವ ಡಿ. ಸುಧಾಕರ್ ಧ್ವಜಾರೋಹಣ

ಚಿತ್ರದುರ್ಗ : ಕನ್ನಡ ರಾಜ್ಯೋತ್ಸವದ ಅಂಗವಾಗಿ ಚಿತ್ರದುರ್ಗದ ಪೋಲೀಸ್ ಕವಾಯತ್ತು ಮೈದಾನದಲ್ಲಿ ಜಿಲ್ಲಾ ಉಸ್ತುವಾರಿ ಸಾಂಖಿಕ ಯೋಜನಾ ಖಾತೆ ಸಚಿವ ಡಿ. ಸುಧಾಕರ್ ಧ್ವಜಾರೋಹಣ ಮಾಡಿದರು. ನಂತ್ರ ವಿವಿಧ ಪೊಲೀಸ್ ಸ್ಕೌಟ್ ಮತ್ತು ಇತರೆ ಇಲಾಖೆಗಳ ಗೌರವವಂದನೆ ಸ್ವೀಕರಿಸಿದರು. ಜಿಲ್ಲಾ ಮಟ್ಟದಲ್ಲಿ ವಿವಿವಧ ಕ್ಷೇತ್ರಗಳಲ್ಲಿ ಸಾಧನೆಗೈದ 20 ಮಂದಿ ಸಾಧಕರಿಗೆ ಸನ್ಮಾನ ಮಾಡಲಾಯಿತು. ಸಭಾ ಕಾರ್ಯಕ್ರಮದ ನಂತ್ರ ಸಚಿವ ಡಿ. ಸುಧಾಕರ್ , ಜಿಲ್ಲಾಧಿಕಾರಿ ಕಛೇರಿ ಆವರಣದಲ್ಲಿ ಹಲ್ಮಡಿ ಶಾಸನದ ಪ್ರತಿಕೃತಿ ಅನಾವರಣಗೊಳಿಸಿದರು.
ಸಭಾ ಕಾರ್ಯಕ್ರಮಕ್ಕೂ ಮೊದಲು ಚಿತ್ರದುರ್ಗದ ನೀಲಕಂಠೇಶ್ವರ ದೇವಸ್ಥಾನದಿಂದ ಪೋಲೀಸ್ ಕವಾಯತ್ತು ಮೈದಾನದ ವರೆಗೆ ಸ್ಥಬ್ದ ಚಿತ್ರಗಳ ಮೆರವಣಿಗೆಯನ್ನು ನಡೆಯಿತು, ಮೆರವಣಿಗೆಯನ್ನು ಚಿತ್ರದುರ್ಗದ ಜಿಲ್ಲಾಧಿಕಾರಿ ವೆಂಕಟೇಶ್ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪ ನಮಮದ ಮೂಲಕ ಚಾಲನೆ ನೀಡಿದರು.ಕನ್ನಡ ನಾಡುನುಡಿಯನ್ನು ಸಾರುವ ಸ್ಥಬ್ದ ಚಿತ್ರಗಳಿಗೆ ಹತ್ತಾರು ಕಲಾತಂಡಗಳು ಸಹಕರಿಸಿ ಮೆರಗನ್ನು ಹೆಚ್ಚಿಸಿದವು.