ಇಪಿಎಫ್ಓ ಅಧಿಕಾರಿಗಳ ವಿರುದ್ಧ ಇಪಿಎಸ್ ಪಿಂಚಣಿದಾರರ ಬೃಹತ್ ಪ್ರತಿಭಟನೆ

ಇಪಿಎಫ್ಓ ಅಧಿಕಾರಿಗಳ ವಿರುದ್ಧ ಇಪಿಎಸ್ ಪಿಂಚಣಿದಾರರ ಬೃಹತ್ ಪ್ರತಿಭಟನೆ
ಜಾಹೀರಾತಿಗಾಗಿ ಸಂಪರ್ಕಿಸಿ 6362546216

ಬೆಂಗಳೂರು: ರಾಷ್ಟ್ರೀಯ ಸಂಘರ್ಷ ಸಮಿತಿ, ಬಿಎಂಟಿಸಿ & ಕೆಎಸ್‌ಆರ್‌ಟಿಸಿ ವತಿಯಿಂದ ಆಯೋಜಿಸಿದ್ದ, ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ನಗರದ ರಿಚ್ಮಂಡ್ ವೃತ್ತದಲ್ಲಿರುವ ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿ ಆವರಣದಲ್ಲಿ ಜರುಗಿತು.

     ಮಾರ್ಚ್ 27ರಂದು "ನಿಧಿ ಆಪ್ಕೆ ನಿಕಟ್" ಕಾರ್ಯಕ್ರಮದಲ್ಲಿ ಇಪಿಎಸ್ ಪಿಂಚಣಿದಾರರ ಎಲ್ಲ ಕುಂದು ಕೊರತೆಗಳನ್ನು ಬಗೆಹರಿಸಿಕೊಡುತ್ತೇವೆ ಎಂದು ಇಪಿಎಫ್ಓ ಅಧಿಕಾರಿಗಳು ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಅದರಂತೆ ನೂರಾರು ನಿವೃತ್ತರು ಈ ಕಚೇರಿ ಆವರಣದಲ್ಲಿ ಜಮಾಯಿಸಿ, ತಮ್ಮ ಕನಿಷ್ಠ ಹೆಚ್ಚುವರಿ ಪಿಂಚಣಿ ಬೇಡಿಕೆಯನ್ನು ಈಡೇರಿಸುವಂತೆ ಅಧಿಕಾರಿಗಳ ವಿರುದ್ಧ ಕೂಗಿದ ದಿಕ್ಕಾರದ ಘೋಷಣೆ ಮುಗಿಲು ಮುಟ್ಟಿತು.

 ಸಂಘದ ಪ್ರಧಾನ ಕಾರ್ಯದರ್ಶಿ ಡೋಲಪ್ಪನವರು ಎಲ್ಲ ಮುಖಂಡರು ಹಾಗೂ ಪ್ರತಿಭಟನಾಕಾರರನ್ನು ಸ್ವಾಗತಿಸಿ, ಹೋರಾಟದ ರೂಪುರೇಷೆ ಬಗ್ಗೆ ಸಂವಿಸ್ತಾರವಾಗಿ ಮಾತನಾಡಿದರು.

 ಎನ್ಎಸಿ ಮುಖ್ಯ ಸಂಯೋಜಕರಾದ ರಮಾಕಾಂತ ನರಗುಂದರವರು ಮಾತನಾಡಿ, ಇಪಿಎಸ್ ನಿವೃತ್ತರ ಹೋರಾಟ ಎಂದಿಗೂ ವ್ಯರ್ಥವಾಗುವುದಿಲ್ಲ, ನಮ್ಮ ಕನಿಷ್ಠ ಹೆಚ್ಚುವರಿ ಪಿಂಚಣಿ ಬೇಡಿಕೆಯ ಕಡತ ಈಗಾಗಲೇ ಎರಡು ಹಂತಗಳನ್ನು ದಾಟಿ, ಕೇಂದ್ರ ಹಣಕಾಸು ಸಚಿವಾಲಯದಲ್ಲಿ ಅಂತಿಮ ಮುದ್ರೆಗೆ ಬಾಕಿ ಇದ್ದು, ಚುನಾವಣಾ ಫಲಿತಾಂಶಕ್ಕೂ ಮುನ್ನ ಇತ್ಯರ್ಥವಾಗಲಿದೆ ಎಂಬ ಆಶಾ ಭಾವನೆ ವ್ಯಕ್ತಪಡಿಸಿರುತ್ತಾರೆ. ಕಾರ್ಯಾಧ್ಯಕ್ಷರಾದ ನಂಜುಂಡೇಗೌಡ ಮಾತನಾಡಿ,ಸೆಪ್ಟೆಂಬರ್ 1, 2014 ಪೂರ್ವ ಅಥವಾ ನಂತರ ನಿವೃತ್ತರಾದ ನೌಕರರಿಗೆ ಸಂಬಂಧಿಸಿದಂತೆ ಇಪಿಎಫ್ಓ ಅಧಿಕಾರಿಗಳು ತಾರತಮ್ಯ ಎಸಗಲು ಬರುವುದಿಲ್ಲ, ಅಧಿಕಾರಿಗಳು ತಳೆದಿರುವ ವಿಳಂಬ ನೀತಿಯ ಬಗ್ಗೆ ಅಕ್ರೋಶ ವ್ಯಕ್ತಪಡಿಸಿರುತ್ತಾರೆ. ಅಧ್ಯಕ್ಷರಾದ ಶಂಕರ್ ಕುಮಾರ್ ಮಾತನಾಡಿ, ಇಷ್ಟು ವರ್ಷಗಳಿಂದ ಹೋರಾಟ ಮಾಡಿರುವ ನಮಗೆ ಪ್ರತಿಫಲ ಸಿಕ್ಕೆ ಸಿಗುತ್ತದೆ, ನಾವೆಲ್ಲರೂ ಸಂಘಟಿತರಾಗಿ ಹೋರಾಟ ಮುಂದುವರಿಸಿದಲ್ಲಿ ಜಯ ಶತಸಿದ್ಧ ಎಂದಿರುತ್ತಾರೆ.

   ಎನ್‌ಎಸಿ ಖಜಾಂಚಿವರಾದ ಕುಲಕರ್ಣಿಯವರು ಮಾತನಾಡಿ, ನಿವೃತ್ತಿದಾರರ ಎಲ್ಲ ಬೇಡಿಕೆಗಳನ್ನು ಕೂಡಲೇ ಬಗೆಹರಿಸಬೇಕು ಎಂದಿರುತ್ತಾರೆ. ಶ್ರೀನಿವಾಸ ನಾಯಕ್, ಕರಾರಸಾ ಸಂಸ್ಥೆ, ಚಿಕ್ಕಬಳ್ಳಾಪುರ ರವರು ಮಾತನಾಡಿ, ಪಿಂಚಣಿದಾರರ ಸಮಸ್ಯೆಯನ್ನು ಕೇಂದ್ರ ಸರ್ಕಾರ ಕೂಡಲೇ ಬಗೆಹರಿಸಬೇಕೆಂದು ಆಗ್ರಹಿಸಿರುತ್ತಾರೆ. ರಾಷ್ಟ್ರೀಯ ಸಂಘರ್ಷ ಸಮಿತಿ, ಬಿಎಂಟಿಸಿ & ಕೆಎಸ್ಆರ್‌ಟಿಸಿ ವತಿಯಿಂದ ನೀಡಿದ ಮನವಿ ಪತ್ರವನ್ನು ಸ್ವೀಕರಿಸಿ, ಇದಕ್ಕೆ ಪ್ರತಿಕ್ರಿಸಿದ ಅಧಿಕಾರಿಗಳು ಇಪಿಎಸ್ ನಿವೃತ್ತರ ಬೇಡಿಕೆಗೆ ಸಂಬಂಧಿಸಿದಂತೆ ಎಲ್ಲ ಪ್ರಯತ್ನ ಮಾಡುವುದಾಗಿ ತಿಳಿಸಿರುತ್ತಾರೆ.

  ಇಂದಿನ ಸಭೆಯ ನಿರ್ವಹಣೆಯನ್ನು ಪದಾಧಿಕಾರಿಗಳಾದ ನಾಗರಾಜು ಹಾಗು ರುಕ್ಮಿಶ್ ರವರು ಯಶಸ್ವಿಯಾಗಿ ನಿರ್ವಹಿಸಿಕೊಟ್ಟರು. ಇಂದಿನ ಪ್ರತಿಭಟನಾ ಸಭೆ ಅತ್ಯಂತ ಆವೇಶಭರಿತವಾಗಿದ್ದು, ಕೇಂದ್ರ ಸರ್ಕಾರಕ್ಕೆ ಇದೊಂದು ಎಚ್ಚರಿಕೆಯ ಗಂಟೆ ಆಗಿರುತ್ತದೆ ಎಂದು ನಂಜುಂಡೇಗೌಡ ರವರು ತಿಳಿಸಿದರು.