ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಪಿಒಪಿ ಗಣಪತಿ ಮೂರ್ತಿಗಳ ಜಪ್ತಿ
Seizure of POP Ganapati Idols by Pollution Control Board
ಬೆಂಗಳೂರು: ರಾಜ್ಯಾದ್ಯಂತ ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶ ವಿಗ್ರಹಗಳ ತಯಾರಿಕೆ ಮತ್ತು ಮಾರಾಟ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಆದರೂ, ಕೂಡ ಕೆಲವು ಕಡೆ ಅಕ್ರಮವಾಗಿ ತಯಾರಿಕೆ ಮತ್ತು ಮಾರಾಟ ಮಾಡಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಮಾವಳ್ಳಿ, ಆರ್‌ವಿ ರಸ್ತೆ, ಯಶವಂತಪುರ ಸೇರಿದಂತೆ ಹಲವೆಡೆ ಪಿಒಪಿ ಗಣೇಶ ವಿಗ್ರಹಗಳ ಮಾರಾಟ ಮಾಡಲಾಗುತ್ತಿತ್ತು. ಈ ವಿಚಾರ ತಿಳಿದ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು, ಪಿಒಪಿ ಗಣೇಶ ವಿಗ್ರಹ ಇರಿಸಿದ್ದ ಗೋದಾಮಿಗಳ ಮೇಲೆ ದಾಳಿ ಮಾಡಿ ಪಿಓಪಿ ಗಣೇಶ ವಿಗ್ರಹಗಳನ್ನು ಜಪ್ತಿ ಮಾಡಿದರು. ಮಾವಳ್ಳಿ ರಸ್ತೆ ಗಣೇಶ ಗೋಡನ್‌ಗಳಲ್ಲಿ ಒಟ್ಟು 23 ಪಿಓಪಿ ಗಣೇಶ ಮೂರ್ತಿಗಳು ವಶಕ್ಕೆ ಪಡೆದು, ಅವುಗಳನ್ನು ಪರಿಶೀಲನೆಗೆ ಕಳುಹಿಸಿದರು.
ನಗರದಲ್ಲಿ ಪಿಒಪಿ ಗಣೇಶ ವಿಗ್ರಹಗಳು ಬ್ಯಾನ್ ಆದರೂ ನಗರದ ಗಣೇಶ ಗೋಧಮುಗಳಲ್ಲಿ ಪಿಒಪಿ ಗಣೇಶ ಹೆಚ್ಚಾಗಿವೆ. ಇದೀಗ ಮಾಲಿನ್ಯ ನಿಯಂತ್ರಣ ಮಂಡಳಿ ಬಿಸಿ ಮುಟ್ಟಿಸಿದ್ದು, ಇನ್ಮುಂದೆಯದರೂ ಪಿಒಪಿ ಗಣೇಶ ವ್ಯಾಪಾರಸ್ಥರು ವಿಗ್ರಹಗಳನ್ನು ಮಾರಾಟ ಮಾಡುವುದನ್ನು ನಿಲ್ಲುಸ್ತಾರಾ ಕಾದುನೋಡಬೇಕಿದೆ.