ತವರಿಗೆ ಮರಳಿದ ಭಾರತ ಹಾಕಿ ತಂಡಕ್ಕೆ ಭರ್ಜರಿ ಸ್ವಾಗತ

A grand welcome for the Indian hockey team back home

ತವರಿಗೆ ಮರಳಿದ ಭಾರತ ಹಾಕಿ ತಂಡಕ್ಕೆ ಭರ್ಜರಿ ಸ್ವಾಗತ
ಜಾಹೀರಾತಿಗಾಗಿ ಸಂಪರ್ಕಿಸಿ 6362546216

ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಐತಿಹಾಸಿಕ ಕಂಚಿನ ಪದಕ ತನ್ನದಾಗಿಸಿಕೊಂಡಿದ್ದ ಭಾರತ ಪುರುಷರ ಹಾಕಿ ತಂಡ ಇಂದು ತವರಿಗೆ ಬಂದಿಳಿದಿದೆ. ಶನಿವಾರ ಬೆಳಗ್ಗೆ ನವದೆಹಲಿಗೆ ಬಂದ ಹಾಕಿ ತಂಡ ವಿಮಾನ ನಿಲ್ದಾಣದಿಂದ ಹೊರಬರುತ್ತಿದ್ದಂತೆ ನೆರೆದಿದ್ದ ಕ್ರೀಡಾಭಿಮಾನಿಗಳು ಆಟಗಾರರಿಗೆ ಹಾರ, ಸಿಹಿ, ತಿನಿಸಿ ಅದ್ದೂರಿ ಸ್ವಾಗತ ಕೋರಿ ಸಂಭ್ರಮಿಸಿದರು. ಪ್ಯಾರಿಸ್‌ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಭಾರತ ಹಾಕಿ ತಂಡ 52 ವರ್ಷಗಳ ಬಳಿಕ ಸತತ 2 ಒಲಿಂಪಿಕ್ಸ್‌ಗಳಲ್ಲಿ ಕಂಚಿನ ಪದಕ ಗೆದ್ದು ಸಾಧನೆ ಮಾಡಿತ್ತು. ಭಾರತ ಈ ಮೊದಲು 1968ರ ಮೆಕ್ಸಿಕೋ ಹಾಗೂ 1972ರ ಮ್ಯೂನಿಚ್ ಒಲಿಂಪಿಕ್ಸ್‌ನಲ್ಲಿ ಸತತವಾಗಿ 2 ಕಂಚು ಗೆದ್ದಿತ್ತು. 2021ರ ಟೋಕಿಯೋ ಹಾಗೂ ಈ ಬಾರಿ ಪ್ಯಾರಿಸ್‌ನಲ್ಲಿ ಸ್ಪೇನ್ ವಿರುದ್ಧ 2-1 ಗೋಲುಗಳಿಂದ ಗೆದ್ದು ಕಂಚು ತನ್ನದಾಗಿಸಿಕೊಂಡಿತ್ತು.