ಗೋಕಲ್ ದಾಸ್ ಎಕ್ಸಪೋರ್ಟ್ಸ್ ಚಾರಿಟೇಬಲ್ ಫೌಂಡೇಶನ್ ವತಿಯಿಂದ ವೈದ್ಯಕೀಯ ಉಪಕರಣಗಳ ಕೊಡುಗೆ
ಬೆಂಗಳೂರು: ಗೋಕಲ್ ದಾಸ್ ಎಕ್ಸಪೋರ್ಟ್ಸ್ ಚಾರಿಟೇಬಲ್ ಫೌಂಡೇಶನ್ ಬೆಂಗಳೂರು ವತಿಯಿಂದ ಬಿಬಿಎಂಪಿ ರೆಫರಲ್ ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಅಂದಾಜು ರೂ.50 ಲಕ್ಷ ಮೌಲ್ಯದ ವೈದ್ಯಕೀಯ ಉಪಕರಣಗಳನ್ನು ಕೊಡುಗೆಯಾಗಿ ವಿತರಿಸಲಾಯಿತು.
ಉಪಕರಣಗಳನ್ನು ವಿತರಿಸಿ ಮಾತನಾಡಿದ ಕಂಪನಿಯ ಉಪಾಧ್ಯಕ್ಷರಾದ ಮೊಯ್ದೀನ್ KEI ರವರು, ನಮ್ಮ ನಡಿಗೆ ಸಾಮಾಜಿಕ ಜವಾಬ್ದಾರಿಗಳ ಕಡೆಗೆ... ಸಮಾಜದ ಪ್ರತಿಯೊಬ್ಬರಿಗೂ ಗುಣಮಟ್ಟದ ವೈದ್ಯಕೀಯ ಚಿಕಿತ್ಸೆಗಳು ದೊರಕಬೇಕು ಎಂಬುವುದು ನಮ್ಮ ಕಂಪನಿಯ ಕನಸು ಹಾಗು ಈ ನಿಟ್ಟಿನಲ್ಲಿ ನಾವು ಈ ವರ್ಷ ಸುಮಾರು ಸರ್ಕಾರಿ ಆಸ್ಪತ್ರೆಗಳಿಗೆ ಸಿಎಸ್ಆರ್ ಅಡಿಯಲ್ಲಿ ವೈದಕೀಯ ಉಪಕರಣಗಳನ್ನು ಕೊಟ್ಟಿದ್ದೇವೆ ಎಂದರು.
ರೂ.50 ಲಕ್ಷ ಮೌಲ್ಯದ ಅಲ್ಟ್ರಾಸೌಂಡ್ ಮಶೀನ್ ಮತ್ತು 15 ಫೆಟಲ್ ಮಾನಿಟರಿಂಗ್ ಡಿವೈಸಸ್ ಗಳನ್ನು ಬಿಬಿಎಂಪಿ ಸ್ಪೆಷಲ್ ಕಮಿಷನರ್ (ಆರೋಗ್ಯ) ಶ್ರೀ ಸುರಲ್ಕರ್ ವಿಕಾಸ್ ಕಿಶೋರ್ ಐಎಎಸ್ ಮತ್ತು ವೈದ್ಯಕೀಯ ಸಿಬ್ಬಂದಿಯವರಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಬಿಬಿಎಂಪಿ ಸ್ಪೆಷಲ್ ಕಮಿಷನರ್ ಆದ ಕಿಶೋರ್ ರವರು ಹೃದಯಪೂರ್ವಕ ಅಭಿನಂದನೆಗಳನ್ನು ತಿಳಿಸುತ್ತಾ ಇದೇ ರೀತಿ ಬರುವ ದಿನಗಳಲ್ಲಿ ಗೋಕಲ್ ದಾಸ್ ಕಂಪನಿಯು ಇನ್ನು ಉತ್ತಮ ಮಟ್ಟಕ್ಕೆ ಬೆಳೆಯಿಲಿ ಹಾಗು ಸಮಾಜಕ್ಕೆ ಸಹಾಯವನ್ನು ಮಾಡಲಿ ಎಂದು ಆಶಿಸುತ್ತೇವೆ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಕಂಪನಿಯ ಸಿಎಸ್ಆರ್ ನ ಡಿಜಿಎಂ ಮಹಾಂತೇಶ ಬಂಗಾರಿ, ಜನರಲ್ ಮ್ಯಾನೇಜರ್ ರೂಪಾ ಬಿಕೆ, ಸಿದ್ದೇಶ್ವರಗೌಡಾ ಉಪಸ್ಥಿತರಿದ್ದರು..