ಬಿಬಿಎಂಪಿ ಅಧಿಕಾರಿ, ನೌಕರರ ಹಿತರಕ್ಷಣೆ ಮತ್ತು ಸಾರ್ವಜನಿಕ ಸೇವೆಗೆ ಅಧ್ಯಕ್ಷರಾದ ಎ.ಅಮೃತ್ ರಾಜ್ ರವರಿಗೆ ಜಿ.ಕನ್ನಡ ಅಚೀವರ್ಸ್ ಅವಾರ್ಡ್-2025 ಪ್ರಧಾನ

Zee Kannada Achievers Award-2025

ಬಿಬಿಎಂಪಿ ಅಧಿಕಾರಿ, ನೌಕರರ ಹಿತರಕ್ಷಣೆ ಮತ್ತು ಸಾರ್ವಜನಿಕ ಸೇವೆಗೆ ಅಧ್ಯಕ್ಷರಾದ ಎ.ಅಮೃತ್ ರಾಜ್ ರವರಿಗೆ ಜಿ.ಕನ್ನಡ ಅಚೀವರ್ಸ್ ಅವಾರ್ಡ್-2025 ಪ್ರಧಾನ
ಜಾಹೀರಾತಿಗಾಗಿ ಸಂಪರ್ಕಿಸಿ 6362546216

ಬೆಂಗಳೂರು: ದಿ ರಿಟ್ಸ್ ಕಾರ್ಲಟನ್ ಹೋಟೆಲ್ ಸಭಾಂಗಣದಲ್ಲಿ ಜಿ. ಕನ್ನಡ ನ್ಯೂಸ್ 3ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷರಾದ ಎ.ಅಮೃತ್ ರಾಜ್ ರವರಿಗೆ ಜಿ ಕನ್ನಡ ನ್ಯೂಸ್ ಅಚೀವರ್ಸ್ ಅವಾರ್ಡ್-2025 ಪ್ರಶಸ್ತಿ ಪ್ರಧಾನ ಸಮಾರಂಭ.

ಅದಿಚುಂಚನಗಿರಿ ಪೀಠಾಧಿಪತಿಗಳಾದ ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿರವರು, ಮಾಜಿ ಮುಖ್ಯಮಂತ್ರಿಗಳಾದ ಸದಾನಂದಗೌಡರವರು, ನಿರ್ಮಾಪಕ ಗೋವಿಂದಗೌಡರವರು, ಸಂಪಾದಕರಾದ ರವಿ.ಎಸ್.ರವರು ಅಚೀವರ್ಸ್ ಅವಾರ್ಡ್-2025ಆನ್ನು ಎ.ಅಮೃತ್ ರಾಜ್ ರವರಿಗೆ ಪ್ರಧಾನ ಮಾಡಿದರು.

ಎ.ಅಮೃತ್ ರಾಜ್ ರವರು ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಅಧ್ಯಕ್ಷರಾಗಿ ಮತ್ತು ಬಿಬಿಎಂಪಿ ಸಹಕಾರ ಸಂಘದ ಅಧ್ಯಕ್ಷರಾಗಿ ಮತ್ತು ರಾಜ್ಯ ಮಹಾನಗರ ಪಾಲಿಕೆ ರಾಜ್ಯಾಧ್ಯಕ್ಷರಾಗಿ ಅಧಿಕಾರಿ ಮತ್ತು ನೌಕರರ ಸಮಸ್ಯೆಗಳಿಗೆ ನಿರಂತರ ಹೋರಾಟ ಮತ್ತು ಸಂಘಟನೆ ಮಾಡಿರುವ ಕಾರಣ..ಸಂಘದ ವತಿಯಿಂದ ಸಾರ್ವಜನಿಕ ಸೇವೆಯಲ್ಲಿ ಎ.ಅಮೃತ್ ರಾಜ್ ರವರು ನಿರತರಾಗಿದ್ದಾರೆ.

ಕೊಡಗು, ಉತ್ತರ ಕರ್ನಾಟಕ ಮತ್ತು ಕೇರಳದಲ್ಲಿ ಪ್ರವಾಹ ಸಂತಸ್ಥರಿಗೆ ಸಹಾಯಹಸ್ತ ಮತ್ತು ಕುಡಿಯುವ ನೀರಿನ ಸಮಸ್ಯೆ ಎದುರಿಸಿದ್ದ ಧರ್ಮಸ್ಥಳದಲ್ಲಿ 1ಲಕ್ಷ ಲೀಟರ್ ಕುಡಿಯುವ ನೀರು ರವಾನೆ ಮಾಡಿದರು.

ಪರಿಸರ ದಿನಾಚರಣೆ ಮತ್ತು ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜನೆ. ಕನ್ನಡ ಭಾಷೆ ಉಳಿಸಿ, ಬೆಳಸಲು ಕಾಶಿ ಮತ್ತು ಹರಿದ್ವಾರದಲ್ಲಿ ರಾಷ್ಟ್ರೀಯ ಕರ್ನಾಟಕ ರಾಜ್ಯೋತ್ಸವ ಮತ್ತು ನೇಪಾಳದಲ್ಲಿ ಅಂತರಾಷ್ಟ್ರೀಯ ಕರ್ನಾಟಕ ರಾಜ್ಯೋತ್ಸವ ಅಚರಣೆ ಮಾಡಿದರು.

ಎ.ಅಮೃತ್ ರಾಜ್ ರವರು ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಹಾಗೂ ಸಾರ್ವಜನಿಕರ ಸೇವೆಯನ್ನು ಗುರುತಿಸಿ ಜಿ.ಕನ್ನಡ ಅಚೀವರ್ಸ್ ಅವಾರ್ಡ್-2025ರವರ ಪ್ರಧಾನ ಮಾಡಲಾಯಿತು.