ಎಂ.ಇ.ಐ.ಸಂಸ್ಥೆ ವತಿಯಿಂದ ಕೊಡಗು, ಕೇರಳ ರಾಜ್ಯಕ್ಕೆ ಅಗತ್ಯ ವಸ್ತುಗಳು ರವಾನೆಗೆ ಸಚಿವರಾದ ರಾಮಲಿಂಗಾರೆಡ್ಡಿರವರು ಚಾಲನೆ

Minister Ramalinga Reddy initiated the dispatch of essential items to Kodagu and Kerala states on behalf of M.E.I.

ಎಂ.ಇ.ಐ.ಸಂಸ್ಥೆ ವತಿಯಿಂದ ಕೊಡಗು, ಕೇರಳ ರಾಜ್ಯಕ್ಕೆ ಅಗತ್ಯ ವಸ್ತುಗಳು ರವಾನೆಗೆ ಸಚಿವರಾದ ರಾಮಲಿಂಗಾರೆಡ್ಡಿರವರು ಚಾಲನೆ
ಜಾಹೀರಾತಿಗಾಗಿ ಸಂಪರ್ಕಿಸಿ 6362546216

ಬೆಂಗಳೂರು: ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟೃೀಸ್ ಲಿಮಿಟೆಡ್ ವತಿಯಿಂದ ಕೊಡಗು ಮತ್ತು ಕೇರಳ ಮಳೆ ಸಂತ್ರಸ್ತರಿಗೆ ಅಗತ್ಯ ಪರಿಹಾರ ಸಾಮಗ್ರಿಗಳ ರವಾನಿಸುತ್ತಿರುವ ಕಾರ್ಯಕ್ರಮಕ್ಕೆ ಚಾಲನೆ. ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿರವರು, ಸಂಸ್ಥೆಯ ಅಧ್ಯಕ್ಷರಾದ ಎಸ್.ಮನೋಹರ್ ರವರು, ವ್ಯವಸ್ಥಾಪಕ ನಿರ್ದೇಶಕರಾದ ಸಿ.ಎನ್.ಶ್ರೀಧರ್ ರವರು ಚಾಲನೆ ನೀಡಿದರು.

ಸಚಿವರಾದ ರಾಮಲಿಂಗಾರೆಡ್ಡಿರವರು ಮಾತನಾಡಿ ಬಿಜೆಪಿ ಸುಳ್ಳಿನ ಇತಿಹಾಸ ಸಾರ್ವಜನಿಕರಿಗೆ ತಿಳಿಸಲು ಜನಾಂದೋಲನ ಮಾಡಲಾಗುತ್ತಿದೆ. ಮುಡಾದಲ್ಲಿ ಮುಖ್ಯಮಂತ್ರಿ ಪತ್ನಿ ಹೆಸರಿನಲ್ಲಿ ಸೈಟ್ ನೀಡಿರುವುದು ತಪ್ಪು ಎಂದಾದರೆ ಅಂದಿನ ಬಿಜೆಪಿ ಸರ್ಕಾರದ ಮುಖ್ಯಮಂತ್ರಿಗಳು ತಪ್ಪು ಮಾಡಿದ್ದಾರೆ ಎಂದರ್ಥ. ರಾಜ್ಯಪಾಲರು ಮುಖ್ಯಮಂತ್ರಿಗಳಿಗೆ ನೋಟಿಸ್ ನೀಡಿರುವುದು ದೆಹಲಿ ನಾಯಕರ ಒತ್ತಡದಿಂದ. ಮೈಸೂರು ಎಲೆಕ್ಟ್ರಿಕಲ್ ಸಂಸ್ಥೆಯವರು ಕೊಡಗು, ಕೇರಳ ಸಂತ್ರತ್ತರಿಗೆ ಅಗತ್ಯ ವಸ್ತುಗಳನ್ನು ಕಳುಹಿಸಿಕೊಡುತ್ತಿದ್ದಾರೆ. ಸರ್ಕಾರ ಜೊತೆಯಲ್ಲಿ ಸಾರ್ವಜನಿಕರ ಸಹಕಾರ, ಸಹಾಯವಿದ್ದರೆ ಸಂಕಷ್ಟಗಳು ಪರಿಹಾರ ವೇಗವಾಗಿ ಆಗುತ್ತದೆ ಎಂದು ಹೇಳಿದರು.

ಅಧ್ಯಕ್ಷರಾದ ಎಸ್.ಮನೋಹರ್ ರವರು ಮಾತನಾಡಿ ಮನುಜಮತ ವಿಶ್ವಪಥ ರಾಷ್ಟ್ರ ಕವಿ ಕುವೆಂಪು ರವರ ಸಂದೇಶದಂತೆ, ಮನುಷ್ಯ, ಮನುಷ್ಯರಿಗೆ ಸಹಾಯ, ಸಹಕಾರ ನೀಡಿದಾಗ ಮಾತ್ರ ಮನುಷ್ಯ ಜನ್ಮ ಸಾರ್ಥಕ. ಮಳೆ ಪ್ರವಾಹದಿಂದ ಕೊಡಗು ಮತ್ತು ಕೇರಳ ರಾಜ್ಯಕ್ಕೆ ಅಗತ್ಯ ವಸ್ತುಗಳನ್ನು ಮೈಸೂರ್ ಎಲೆಕ್ಟ್ರಿಕಲ್ ಇಂಡಸ್ಟೃೀಸ್ ಲಿಮಿಟೆಡ್ ಸಂಸ್ಥೆ ವತಿಯಿಂದ ಅಂದಾಜು 15ಲಕ್ಷ ರೂಪಾಯಿ ಅಗತ್ಯ ವಸ್ತುಗಳನ್ನು ರವಾನೆ ಮಾಡಲಾಗುತ್ತಿದೆ. ನಮ್ಮ ಸಂಸ್ಥೆ ವತಿಯಿಂದ ಈಗಾಗಲೇ ರಾಜ್ಯ ಆರೋಗ್ಯ ಇಲಾಖೆಗೆ ಎರಡು ಅಂಬುಲೆನ್ಸ್ ಮತ್ತು ಬಿಟಿಎಂ ವಿಧಾನಸಭಾ ಕ್ಷೇತ್ರದ ಸರ್ಕಾರಿ ಶಾಲೆಯ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲಕ್ಕೆ ಎಲ್.ಇ.ಡಿ. ಬೃಹತ್ ಟಿ.ವಿ. ಉಚಿತವಾಗಿ ನೀಡಲಾಗಿದೆ ಎಂದು ಹೇಳಿದರು.