ಆರ್ ವಿ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್, ಜಯನಗರ ಬೆಂಗಳೂರು 26ನೇ ಬ್ಯಾಚ್/ನಾಲ್ಕನೇ ಸ್ವಾಯತ್ತ ಬ್ಯಾಚ್ 2024-2026 ಉದ್ಘಾಟನಾ ಸಮಾರಂಭ
RV Institute of Management, Jayanagar Bangalore 26th Batch/Fourth Autonomous Batch 2024-2026 inaugural Ceremony
ಬೆಂಗಳೂರು : ಆರ್ ವಿ ಕಾಲೇಜಿನ MBA ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ರಾಷ್ಟ್ರೀಯ ಶಿಕ್ಷಣ ಸಮಿತಿ ಟ್ರಸ್ಟ್ ನ ಆರ್ ವಿ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ವತಿಯಿಂದ ನಾಲ್ಕನೇ ವರ್ಷದ ಎಂಬಿಎ ವಿದ್ಯಾರ್ಥಿಗಳ ವೆಲ್ಕಮ್ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಜೆಪಿ ನಗರದ ಡಿಎಪಿಎಂ ಡೆಂಟಲ್ ಕಾಲೇಜಿನ ಆಡಿಟೋರಿಯಮ್ ನಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಈ ವರುಷ ರ್ಯಾಂಕಿಂಗ್ ಆಧಾರದ ಮೇಲೆ ಕಾಲೇಜಿಗೆ ಅಡ್ಮಿಷನ್ ಆಗಿರುವ 180 ಎಂಬಿಎ ವಿದ್ಯಾರ್ಥಿಗಳಿಗೆ ಕಾಲೇಜು ಆಡಳಿತ ಮಂಡಳಿ ಸ್ವಾಗತ ಕೋರಿತು. ಉತ್ತಮ ರ್ಯಾಂಕ್ ಪಡೆದು ಸಾಧನೆ ಮಾಡಿದ ಮೊದಲ 15 ಎಂಬಿಎ ವಿದ್ಯಾರ್ಥಿಗಳಿಗೆ ಕಾಲೇಜು ಕಡೆಯಿಂದ ತಲಾ 50 ಸಾವಿರ ಸ್ಕಾಲರ್ ಶಿಪ್ ನೀಡಲಾಯಿತು. ಕಾರ್ಯಕ್ರಮದ ಅತಿಥಿಗಳಾಗಿ ಡಾ ಪವನ್ ಸೋನಿ, ಸಿಎ ಡಾ ವಿಷ್ಣುಭರತ್ ಆಗಮಿಸಿದ್ದರು. ಕಾಲೇಜಿನ ಡಾ ಪುರುಷೋತ್ತಮ, ಡಾ ಎವಿಎಸ್ ಮೂರ್ತಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.