ಡಾ.ಬಿ.ಆರ್.ಅಂಬೇಡ್ಕರ್ ರವರು ಜ್ಞಾನ ಸಂಪಾದನೆ ಮತ್ತು ಶಿಕ್ಷಣ ಎಂಬ ಮೂಲ ಮಂತ್ರ ನೀಡಿದ್ದಾರೆ- ನ್ಯಾಯಮೂರ್ತಿಗಳಾದ ಡಿ.ದೇವದಾಸ್

ಡಾ.ಬಿ.ಆರ್.ಅಂಬೇಡ್ಕರ್ ರವರು ಜ್ಞಾನ ಸಂಪಾದನೆ ಮತ್ತು ಶಿಕ್ಷಣ ಎಂಬ ಮೂಲ ಮಂತ್ರ ನೀಡಿದ್ದಾರೆ- ನ್ಯಾಯಮೂರ್ತಿಗಳಾದ ಡಿ.ದೇವದಾಸ್
ಜಾಹೀರಾತಿಗಾಗಿ ಸಂಪರ್ಕಿಸಿ 6362546216

O: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ಪುಟ್ಟಣ್ಣಚೆಟ್ಟಿ ಪುರಭವನ(ಟೌನ್ ಹಾಲ್) ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರ 133ನೇ ಜನ್ಮ ದಿನಾಚರಣೆ ಮತ್ತು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಾಧಕ/ಸಾಧಕಿಯರಿಗೆ ಮತ್ತು ಬಿಬಿಎಂಪಿ ಅಧಿಕಾರಿ, ನೌಕರರಿಗೆ ಡಾ||ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ ಪ್ರಧಾನ ಸಮಾರಂಭ.

ಕರ್ನಾಟಕ ಉಚ್ಛ ನ್ಯಾಯಲಯದ ಮಾನ್ಯ ನ್ಯಾಯಮೂರ್ತಿಗಳಾದ ಶ್ರೀ ಆರ್.ದೇವದಾಸ್ ರವರು, ಅಧ್ಯಕ್ಷತೆಯನ್ನು ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್, ಮತ್ತು ಸಚಿವಾಲಯ ನೌಕರರ ಸಂಘ ಅಧ್ಯಕ್ಷರಾದ ರಮೇಶ್ ಸಂಘ ಮತ್ತು ಸುಮಂಗಲಿ ಸೇವಾ ಆಶ್ರಮದ ಅಧ್ಯಕ್ಷೆ ಡಾ||ಎಸ್.ಜಿ.ಸುಶೀಲಮ್ಮ, ಚಲನಚಿತ್ರ ನಟರಾದ ಶರಣ್, ಬಿಬಿಎಂಪಿ ಕಂದಾಯ ವಿಭಾಗ ಜಂಟಿ ಆಯುಕ್ತರಾದ ಶ್ರೀಮತಿ ಲಕ್ಷ್ಮಿದೇವಿರವರು, ಅಧ್ಯಕ್ಷರಾದ ಎ.ಅಮೃತ್ ರಾಜ್ ರವರು ದೀಪ ಬೆಳಗಿಸಿ, ಡಾ.ಬಿ.ಆರ್.ಅಂಬೇಡ್ಕರ್ ಬಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ನ್ಯಾಯಮೂರ್ತಿಗಳಾದ ಆರ್.ದೇವದಾಸ್ ರವರು ಮಾತನಾಡಿ ಡಾ.ಬಿ.ಆರ್.ಅಂಬೇಡ್ಕರ್ ರವರ ಮುಖ್ಯವಾದ ಮೂಲ ಮಂತ್ರವೆಂದರೆ ಜ್ಞಾನ ಸಂಪಾದನೆ ಮತ್ತು ಶಿಕ್ಷಣ ಎಂಬ ಮಂತ್ರ ಎಲ್ಲರಿಗೂ ಹಾಕಿಕೊಟ್ಟರು. ಮಕ್ಕಳಿಗೆ ಉತ್ತಮ ವಿದ್ಯಾರ್ಜನೆ ಮತ್ತು ಜ್ಞಾನ ಸಂಪಾದನೆಗೆ ತಂದೆ, ತಾಯಂದಿರು ಸಹಕಾರ ನೀಡಬೇಕು. ನ್ಯಾಯಾಂಗ ಇಲಾಖೆಯಲ್ಲಿ ಸಿವಿಲ್ ನ್ಯಾಯಧೀಶರ ನೇಮಕಾತಿ ಆಯ್ಕೆಯಲ್ಲಿ ಎಸ್.ಸಿ.ಮತ್ತು ಎಸ್.ಟಿ. ವಿದ್ಯಾರ್ಥಿ ಹೆಚ್ಚು ಆಯ್ಕೆಯಾಗುತ್ತಿದ್ದಾರೆ 

ಮೇರಿಟ್ ಮೇಲೆ ಎಸ್.ಸಿ.ಮತ್ತು ಎಸ್.ಟಿ ವಿದ್ಯಾರ್ಥಿಗಳು ವೈದ್ಯಕೀಯ, ಇಂಜನಿಯರಿಂಗ್ ಸೀಟ್ ಪಡೆಯುತ್ತಿದ್ದಾರೆ ಅವರ ಸಹ ಸಮಾಜದ ಮುಖ್ಯವಾಹಿನಿಗೆ ಬರುತ್ತಿದ್ದಾರೆ. ಡಾ.ಬಿ.ಆರ್.ಅಂಬೇಡ್ಕರ್ ರವರ ಕಂಡ ಕನಸು ನನಸು ಮಾಡುತ್ತಿದ್ದಾರೆ. ಸಮ ಸಮಾಜ ನಿರ್ಮಾಣವಾಗಿ ಜಾತಿ ವ್ಯವಸ್ಥೆ ನಿರ್ಮೂಲನೆಯಾಗಬೇಕು. ಅಂಕಗಳಿಗೆ ಹೆಚ್ಚು ಪಡೆದಾಗ ಮಾತ್ರ ಉತ್ತಮ ಕಾಲೇಜಿನಲ್ಲಿ ಅವಕಾಶ ದೊರೆಯುತ್ತದೆ. ಡಾ.ಬಿ.ಆರ್.ಅಂಬೇಡ್ಕರ್ ಅವರ ಕೊಟ್ಟ ಸಂವಿಧಾನ ಬಲದಿಂದ ಜ್ಞಾನದ ಅರಿವು ಬೆಳಸಿಕೊಳ್ಳಬೇಕು ಎಂದು ಹೇಳಿದರು.

ಚಲನಚಿತ್ರ ನಟ ಶರಣ್ ರವರು ಮಾತನಾಡಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರ ಆದರ್ಶ ಸಿದ್ದಾಂತವನ್ನು ಎಲ್ಲರ ಜೀವನದಲ್ಲಿ ಆಳವಡಿಸಿಕೊಳ್ಳಿ. ಪ್ರಪಂಚ ಕಂಡ ಅಮೂಲ್ಯರತ್ನ ಅಂಬೇಡ್ಕರ್ ರವರು, ಅವರ ಹುಟ್ಟಿದ ನಾಡಿನಲ್ಲಿ ನಾವು ಹುಟ್ಟಿರುವುದು ಪುಣ್ಯ ಮಾಡಿದ್ದೇನೆ. ಇತಿಹಾಸ ಅರಿವಿಲ್ಲದವರು, ಇತಿಹಾಸ ಸೃಷ್ಟಿಸಲಾರ ಎಂದು ಹೇಳಿದ್ದರು. ಅಪ್ರತಿಮವಾದ ಶಕ್ತಿ ಅಂಬೇಡ್ಕರ್ ರವರು ಆಗಿದ್ದರು. ಬಿಬಿಎಂಪಿ ಮಮತೆ ಇರುವ ಸಂಸ್ಥೆಯಾಗಿದೆ ಎಂದು ಹೇಳಿದರು.

ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕ/ಸಾಧಕಿಯರಿಗೆ ಡಾ||ಬಿ.ಆರ್.ಅಂಬೇಡ್ಕರ್ ಪ್ರಶಸ್ತಿಯನ್ನು ವಕೀಲರು, ಸಮಾಜ ಸೇವಕರಾದ ಎ.ರಾಜೇಶ್, ಹಿರಿಯ ಚಲನಚಿತ್ರ ನಟ ರಥಸಪ್ತಮಿ ಅರವಿಂದ್, ನಟಿ ಪದ್ಮನಿ, ಮಿಸೆಸ್ ಯೂನಿರ್ವಸ್ ಶ್ರೀಮತಿ ಎಂ.ಸುಧಾ, ಪೌರ ಕಾರ್ಮಿಕ ಮುಖಂಡರಾದ ತ್ಯಾಗರಾಜ, ಅದಿ ಜಾಂಬವ ಸಂಘರ್ಷ ಸಮಿತಿ ರಾಜ್ಯ ಸಂಚಾಲಕರಾದ ನಾರಯಣಸ್ವಾಮಿ ಮತ್ತು ಬಿಬಿಎಂಪಿ ಕಾರ್ಯನಿರ್ವಹಿಸುತ್ತಿರುವ 18 ಅಧಿಕಾರಿ/ನೌಕರರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಕುರಿತು ಗೀತೆಗಾಯನ ಆಯೋಜಿಸಲಾಗಿತ್ತು.

ಸಂಘದ ಪದಾಧಿಕಾರಿಗಳಾದ ಸಾಯಿಶಂಕರ್, ಎ.ಜಿ.ಬಾಬಣ್ಣ, ಸೋಮಶೇಖರ್, ಕೆ.ನರಸಿಂಹ, ಹೆಚ್.ಕೆ.ತಿಪ್ಪೇಶ್, ರೇಣುಕಾಂಬ, ಕೆ.ಮಂಜೇಗೌಡ, ಎಸ್.ಜಿ.ಸುರೇಶ್, ಡಾ.ಶೋಭಾ,ಮಂಜುನಾಥ್, ಉಮೇಶ್.ವಿ, ಸಂತೋಷ್ ಕುಮಾರ್ ನಾಯ್ಕ್, ಹೆಚ್.ಬಿ.ಹರೀಶ್, ರವರು ಉಪಸ್ಥಿತರಿದ್ದರು.