ಮಹಾರಾಷ್ಟ್ರದಲ್ಲಿ ಭೂಕಂಪನ
Earthquake in Maharashtra
ಮುಂಬೈ: ಮಹಾರಾಷ್ಟ್ರದ ಹಿಂಗೋಲಿಯಲ್ಲಿ ಇಂದು ಬೆಳಗ್ಗೆ 7.15ಕ್ಕೆ ಭೂಕಂಪದ ಅನುಭವವಾಗಿದೆ.
ಇದರ ತೀವ್ರತೆಯನ್ನು ರಿಕ್ಟರ್ ಮಾಪಕದಲ್ಲಿ 4.5 ಎಂದು ಅಳೆಯಲಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಈ ಮಾಹಿತಿ ನೀಡಿದೆ.
ಪರ್ಭಾನಿ ಮತ್ತು ನಾಂದೇಡ್‌ನಲ್ಲಿಯೂ ಭೂಕಂಪನದ ಅನುಭವವಾಗಿದೆ. ಯಾವುದೇ ಪ್ರಾಣ ಅಥವಾ ಆಸ್ತಿ ನಷ್ಟದ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ. ಈ ಹಿಂದೆ ಮಾ.21ರಂದು ಕೂಡ ಹಿಂಗೋಲಿಯಲ್ಲಿ ಭೂಕಂಪ ಸಂಭವಿಸಿತ್ತು 10 ನಿಮಿಷಗಳ ಅವಧಿಯಲ್ಲಿ ಭೂಮಿ ಎರಡು ಬಾರಿ ಕಂಪಿಸಿತ್ತು. ಬೆಳಗ್ಗೆ 6.08ಕ್ಕೆ ಮೊದಲ ಭೂಕಂಪನ ಸಂಭವಿಸಿದ್ದು, 6.19ಕ್ಕೆ ಎರಡನೇ ಕಂಪನದ ಅನುಭವವಾಗಿದೆ. ಮೊದಲ ಭೂಕಂಪದ ತೀವ್ರತೆ 4.5 ದಾಖಲಾಗಿದ್ದರೆ, ಎರಡನೇ ಭೂಕಂಪದ ತೀವ್ರತೆಯನ್ನು ರಿಕ್ಟರ್ ಮಾಪಕದಲ್ಲಿ 3.6 ಎಂದು ಅಳೆಯಲಾಗಿದೆ. ಭೂಕಂಪನದ ಅನುಭವವಾದಾಗ ಹೆಚ್ಚಿನ ಜನರು ಮಲಗಿದ್ದರು.