ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಆಳಿಲು ಸೇವೆ ಸಂಸ್ಥೆ ಮತ್ತು ಯುವ ಧ್ವನಿ ಸಾಮಾಜಿಕ ಸೇವಾ ಸಂಘಟನೆ ಇ-ವೇಸ್ಟ್ ಸಂಗ್ರಹ ಅಭಿಯಾನ

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಆಳಿಲು ಸೇವೆ ಸಂಸ್ಥೆ ಮತ್ತು ಯುವ ಧ್ವನಿ ಸಾಮಾಜಿಕ ಸೇವಾ ಸಂಘಟನೆ ಇ-ವೇಸ್ಟ್ ಸಂಗ್ರಹ ಅಭಿಯಾನ
ಜಾಹೀರಾತಿಗಾಗಿ ಸಂಪರ್ಕಿಸಿ 6362546216

ಬೆಂಗಳೂರು: ಆಳಿಲು ಸೇವೆ ಮತ್ತು ಯುವ ಧ್ವನಿ ಸಂಘಟನೆ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಸಾರ್ವಜನಿಕರಿಂದ ಇ-ವೇಸ್ಟ್ ಸಂಗ್ರಹ ಅಭಿಯಾನ ಕಾರ್ಯಕ್ರಮ. ಆಳಿಲು ಸೇವೆ ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ ಶ್ರೀಮತಿ ಭಾಗ್ಯವತಿ ಅಮರೇಶ್, ಮಾಹಿತಿ ಹಕ್ಕು ಅಧ್ಯಯನ ಸಂಸ್ಥೆಯ ಟ್ರಸ್ಟಿ ಅಮರೇಶ್(ಅಂಬರೀಶ್) ಮತ್ತು ಯುವ ಧ್ವನಿ ಸಂಘಟನೆಯ ಶ್ರವಣ್ ಸೂರಜ್ ಮತ್ತು ಬಿಜೆಪಿ ಮುಖಂಡರಾದ ರಾಜು, ಅಜಿತ್ ರವರು ಮತ್ತು ಸ್ವಯಂ ಸೇವಕರು ಇ-ವೇಸ್ಟ್ ಸಂಗ್ರಹ ಅಭಿಯಾನಕ್ಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

 Advertisement

ಜಾಹೀರಾತಿಗಾಗಿ ಸಂಪರ್ಕಿಸಿ 6362546216

ಅಮರೇಶ್ ರವರು ಮಾತನಾಡಿ ನಮ್ಮ ಭವಿಷ್ಯದ ಪೀಳಿಗೆಗೆ ಅರೋಗ್ಯಕರ ಮತ್ತು ಸಂತಸದಾಯಕ ವಾತಾವರಣ ನೀಡುವ ಜವಾಬ್ದಾರಿ ನಮ್ಮ ನಿಮ್ಮ ಮೇಲಿದೆ. ಸುಂದರ ಪರಿಸರ ಫಲವತ್ತಾದ ಮಣ್ಣು ನಿರ್ಮಾಣಕ್ಕೆ ಪಣ ತೊಡೋಣ. ಈ ಹಿನ್ನಲೆಯಲ್ಲಿ ನಮ್ಮ ಅಳಿಲು ಸೇವೆ ಮತ್ತು ಯುವಧ್ವನಿ ಜಂಟಿಯಾಗಿ ನಿಮ್ಮ ಮನೆಯಲ್ಲಿ, ನಿಮ್ಮ ಆಫೀಸಿನಲ್ಲಿ, ಅಂಗಡಿ ಮುಂಗಟ್ಟು ನಲ್ಲಿ ಇರುವ ಇ-ವೇಸ್ಟ್ (E-Waste) ಸಂಗ್ರಹಿಸಲಾಗುತ್ತಿದೆ.

 ನಿಮ್ಮಲ್ಲಿರುವ ಬಳಕೆಯಾಗದ ಕೆಟ್ಟು ಹೋಗಿರುವ ಸಿ.ಡಿ. ಪೆನ್ ಡ್ರೈವ್, ಚಾರ್ಜರ್, ರಿಮೋಟ್ ಮತ್ತು ಹಳೆಯ ಎಲ್ಲಾ ರೀತಿಯ ಕೆಟ್ಟು ಹೋಗಿರುವ ನಿರುಪಯೋಗಿ ಎಲೆಕ್ಟ್ರಾನಿಕ್ ವಸ್ತುಗಳನ್ನು ನಮ್ಮ ಇ-ವೇಸ್ಟ್ ಗಳನ್ನು ನೀಡಬಹುದು. ಪರಿಸರ ಉಳಿದರೆ ಮಾನವ, ಪ್ರಾಣಿ ಪಕ್ಷಿಗಳು ಜೀವಿಸಲು ಸಾಧ್ಯ, ಪರಿಸರ ಹಾಳಾದರೆ ಮನುಕುಲವೆ ನಾಶ. ಪ್ರತಿಯೊಬ್ಬರು ಪರಿಸರ ಉಳಿಸಿ, ಬೆಳಸಲು ಕೈಜೋಡಿಸಬೇಕು ಮತ್ತು ಪ್ರತಿ ಮನೆ ಸಸಿ ನೆಟ್ಟು ಪೋಷಣೆ ಮಾಡಿ ಎಂದು ಹೇಳಿದರು.