ಕುಶಲ್ಸ್ ಫ್ಯಾಶನ್ ಜ್ಯುವೆಲ್ಲರಿಯಿಂದ `ವರಮಹಾಲಕ್ಷ್ಮಿ ವೃತಂ ಸಂಗ್ರಹ ಅನಾವರಣ
Varamahalakshmi Vritham Collection Unveiled by Shuls Fashion Jewellery
ಬೆಂಗಳೂರು : ಕುಶಲ್ಸ್ ತನ್ನ ವರಮಹಾಲಕ್ಷ್ಮಿ ವೃತಂನ ಅಭಿಯಾನವನ್ನು ಆರಂಭಿಸಿದೆ. ನಿಮ್ಮಲ್ಲೇ ದೇವತೆಯನ್ನು ಆಚರಿಸಿ( Celebrate The Goddess In You ) ಎಂಬುದು ಈ ಅಭಿಯಾನದ ವಿಷಯವಾಗಿದೆ.
ಮಹಿಳೆಯಲ್ಲಿ ಅಡಗಿರುವ ಶಕ್ತಿ, ಸೌಂದರ್ಯ ಮತ್ತು ಆತ್ಮಬಲ, ಸಮೃದ್ಧಿ ಹಾಗೂ ಅನುಗ್ರಹವನ್ನು ಗುರುತಿಸಿ ಗೌರವಿಸುವುದು ಈ ಅಭಿಯಾನದ ಗುರಿಯಾಗಿದೆ.ಈ ಅಭಿಯಾನದ ಕೇಂದ್ರ ಬಿಂದುವೆAದರೆ ಡಿಜಿಟಲ್ ಫಿಲ್ಮ್. ಇದು ಮಹಿಳೆಯರಲ್ಲಿ ಸಾಕಾರಗೊಂಡಿರುವ ದೈವಿಕ ಗುಣಗಳನ್ನು ಆಚರಿಸುತ್ತದೆ. ಈ ಚಿತ್ರವು ಆಧುನಿಕ ಮಹಿಳೆಯ ಸ್ಥಿತಿಸ್ಥಾಪಕತ್ವ, ಸೊಬಗು ಮತ್ತು ಸಹಜಶಕ್ತಿಯನ್ನು ಎತ್ತಿ ತೋರಿಸುತ್ತದೆ. ಈ ಮೂಲಕ ಪೂಜ್ಯ ದೇವಿ ಲಕ್ಷ್ಮಿಗೆ ಸಮಾನಾಂತರವಾಗಿ ಚಿತ್ರಿಸುತ್ತದೆ.
ಈ ವರಮಹಾಲಕ್ಷ್ಮಿ ವೃತಂ ಸಂಗ್ರಹದಲ್ಲಿ ಅನೇಕ ಆಕರ್ಷಕ ಆಭರಣಗಳಿವೆ. ಅತ್ಯದ್ಭುತವಾದ ಟೆಂಪಲ್ ಜ್ಯುವೆಲ್ಲರಿಗಳು ಎಲ್ಲಾ ಮಹಿಳೆಯರನ್ನು ಕೈಬೀಸಿ ಕರೆಯುತ್ತವೆ. ಇವುಗಳನ್ನು ಆ್ಯಂಟಿಕ್ ಫಿನಿಶ್ ರೀತಿಯಲ್ಲಿ ಸಿದ್ಧಪಡಿಸಲಾಗಿದೆ. 92.5 ಬೆಳ್ಳಿಯಿಂದ ತಯಾರಿಸಲಾಗಿದೆ. ದೇವಿ ಲಕ್ಷ್ಮಿಯ ಕುಸುರಿಯು ಎಲ್ಲರಲ್ಲೂ ಭಕ್ತಿ ತರುವಂತೆ ಮಾಡುತ್ತದೆ. ಅದೇ ರೀತಿ, ತಾವರೆ, ಹಂಸ ಮತ್ತು ಕುಂಕುಮವು ದೈವಿಕ ಅನುಗ್ರಹವನ್ನು ನೀಡುತ್ತದೆ. ಈ ಸಂಗ್ರಹದಲ್ಲಿ 200 ಕ್ಕೂ ಹೆಚ್ಚು ಅತ್ಯದ್ಭುತವಾದ ವಿನ್ಯಾಸಗಳು ಇದ್ದು, ಚೋಕರ್ಸ್, ಶಾರ್ಟ್ ನೆಕ್ಲೇಸ್, ಲಾಂಗ್ ಹಾರ, ಮೆಡಲಿಯನ್ಸ್ ಮತ್ತು ಲೇಯರ್ಡ್ ಚೈನ್ ಗಳು ಆಕರ್ಷಿಸುತ್ತವೆ. ಆಭರಣದ ಪ್ರತಿಯೊಂದು ತುಣುಕ ಸಹ ಮಿನಿ ಪರ್ಲ್ಸ್, ಕಲರ್ಡ್ ಸ್ಟೋನ್ಸ್, ಗೋಲ್ಡನ್ ಬೀಡ್ಸ್ ಮತ್ತು ಝಿರ್ಕಾನ್ ಗಳನ್ನು ಒಳಗೊಂಡಿವೆ.
ಕುಶಲ್ಸ್ ಫ್ಯಾಶನ್ ಜ್ಯುವೆಲ್ಲರಿ ದೇಶಾದ್ಯಂತ 30 ನಗರಗಳಲ್ಲಿ 90 ಸ್ಟೋರ್ ಗಳನ್ನು ಹೊಂದಿದ್ದು, ಆಕರ್ಷಕ ಹೊಸ ಸಂಗ್ರಹಗಳನ್ನು ತನ್ನ ಗ್ರಾಹಕರಿಗೆ ಒದಗಿಸುತ್ತಲೇ ಬಂದಿದೆ. ದಕ್ಷಿಣ ಭಾರತದಲ್ಲಿ ಬೆಂಗಳೂರು, ಚೆನ್ನೈ, ಹೈದ್ರಾಬಾದ್, ತಿರುಪತಿ ಸೇರಿದಂತೆ ಇನ್ನಿತರೆ ನಗರಗಳಲ್ಲಿ ಸ್ಟೋರ್ ಗಳನ್ನು ಹೊಂದಿದೆ. ಆನ್ ಲೈನ್ ಮೂಲಕ ಖರೀದಿಸಲು ಬಯಸುವವರು ನೇರವಾಗಿ ಕುಶಲ್ಸ್ ನ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಬಹುದು ಅಥವಾ ಕುಶಲ್ಸ್ ವೆಬ್ ಸೈಟ್ www.kushals.com ಗೆ ಭೇಟಿ ನೀಡಬಹುದು.