ಕುಮಾರಸ್ವಾಮಿ, ಬಿ.ವೈ.ವಿಜಯೇಂದ್ರ, ಆರ್.ಅಶೋಕ್, ಸಿ.ಟಿ.ರವಿಯವರಿಗೆ ಮಾನಸಿಕ ಚಿಕಿತ್ಸೆ ಕೊಡಿಸಬೇಕು: ಎಸ್ ಮನೋಹರ್
ಬೆಂಗಳೂರು: ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ, ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ, ಸಿ.ಟಿ.ರವಿ ರವರಿಗೆ ಮಾನಸಿಕ ಚಿಕಿತ್ಸೆ ಕೊಡಿಸಬೇಕು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್ ಮನೋಹರ್ ಹೇಳಿದರು.
ಕಾಂಗ್ರೆಸ್ ಭವನ ಮಹಾತ್ಮ ಗಾಂಧಿ ಪ್ರತಿಮೆ ಮುಂಭಾಗದಲ್ಲಿ ಮುಡಾ ಪ್ರಕರಣದಲ್ಲಿ ಮಾನ್ಯ ಮುಖ್ಯಮಂತ್ರಿಗಳ ಹಾಗೂ ಉಪ ಮುಖ್ಯಮಂತ್ರಿಗಳ ಕುರಿತು ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅತ್ಯಂತ ಕೀಳು ಪದ ಬಳಸಿ ಟೀಕೆ ಮಾಡಿದ್ದಾರೆಂದು ಆರೋಪಿಸಿ ಅವರ ವಿರುದ್ಧ ಬೆಂಗಳೂರು ಕಾಂಗ್ರೆಸ್ ಪ್ರಚಾರ ಸಮಿತಿ ಕಾರ್ಯಕರ್ತರು ವಿನೂತನ ಪ್ರತಿಭಟನೆ ಮಾಡಿದರು.
ಇದೇ ಸಂದರ್ಭದಲ್ಲಿ ಎಸ್.ಮನೋಹರ್ ರವರು ಮಾತನಾಡಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಮಗ ಎಂದು ಹೇಳುವ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ರವರು ಮಾನಸಿಕವಾಗಿ ಸೀಮಿತ ಕಳೆದುಕೊಂಡಿದ್ದಾರೆ, ಅಧಿಕಾರವಿದ್ದಾಗ ತಾಜ್ ವೆಸ್ಟಂಡ್ ನಲ್ಲಿ ವಾಸ ಮಾಡಿ ನಾಡಿನ ಜನರಿಗೆ ದ್ರೋಹ ಬಗೆದ ವಿಷಕಾರಿ ಹಾವು ಕುಮಾರಸ್ವಾಮಿ ಎಂದರೆ ತಪ್ಪಾಗಲಾರಾದು.
ಆರ್.ಟಿ.ಜಿ.ಎಸ್.ಲಂಚ ಸ್ವೀಕಾರ ಮಾಡಿದ ಕೀರ್ತಿ ಹೊಂದಿರುವ ಕುಟುಂಬ ಎಂದರೆ ಬಿ.ಎಸ್.ಯಡಿಯೂರಪ್ಪ ಮತ್ತು ಬಿ.ವೈ.ವಿಜಯೇಂದ್ರ ರವರಿಗೆ ಸಲ್ಲುತ್ತದೆ. ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್ ರವರ ವಿರುದ್ದ ಬಗರ್ ಹುಕುಂ ಪ್ರಕರಣ ಸುಪ್ರಿಂಕೋರ್ಟ್ ನಲ್ಲಿ ದಾಖಲಾಗಿದೆ. ಸಿ.ಟಿ.ಲೂಟಿ ಎಂದರೆ ಚಿಕ್ಕಮಗಳೂರಿನಲ್ಲಿ ಲೂಟಿ ರವಿ ಎಂದು ಸಾರ್ವಜನಿಕರು ಕರೆಯುತ್ತಾರೆ.
ಪ್ರಧಾನಿ ನರೇಂದ್ರಮೋದಿರವರು ಕೊಡಲೆ ಕುಮಾರಸ್ವಾಮಿ, ಬಿ.ವೈ.ವಿಜಯೇಂದ್ರ, ಆರ್.ಅಶೋಕ್, ಸಿ.ಟಿ.ರವಿಯವರಿಗೆ ಮಾನಸಿಕ ಚಿಕಿತ್ಸೆ ಕೊಡಿಸಬೇಕು ಎಂದು ಹೇಳಿದರು.
ಈ ವಿನೂತನ ಪ್ರತಿಭಟನೆಯಲ್ಲಿ ಕೆಪಿಸಿಸಿ ಮಾಧ್ಯಮ ಮುಖ್ಯಸ್ಥರಾದ ರಮೇಶ್ ಬಾಬು ರವರು ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳು ಕಾಂಗ್ರೆಸ್ ಮುಖಂಡರಾದ ಎ ಆನಂದ್ ಜಿ ಪ್ರಕಾಶ್ ಹೇಮರಾಜು ಚೇತನ್ನು ರಂಜಿತ್ ಉಮೇಶ್ ನವೀನ್ ರವಿಶೇಖರ್ ಹಾಗೂ ಮಹಿಳಾ ಕಾಂಗ್ರೆಸ್ ನ ಜಯಶ್ರೀ ಗೌಡ ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು.