ಗೌರವಾನ್ವಿತ ರಾಜ್ಯಪಾಲರು ಕುತಂತ್ರಕ್ಕೆ ತಲೆಬಾಗಿ ಅನುಮತಿ ನೀಡಿರುವುದು ಅತ್ಯಂತ ದುರದೃಷ್ಟಕರ : ಎಸ್ ಮನೋಹರ್

It is very unfortunate that the Hon'ble Governor bowed down to the trick and allowed it: S Manohar

ಗೌರವಾನ್ವಿತ ರಾಜ್ಯಪಾಲರು ಕುತಂತ್ರಕ್ಕೆ ತಲೆಬಾಗಿ ಅನುಮತಿ ನೀಡಿರುವುದು ಅತ್ಯಂತ ದುರದೃಷ್ಟಕರ : ಎಸ್ ಮನೋಹರ್
ಜಾಹೀರಾತಿಗಾಗಿ ಸಂಪರ್ಕಿಸಿ 6362546216

ಬೆಂಗಳೂರು: ದೇಶದ ರಾಜಕೀಯ ಇತಿಹಾಸದಲ್ಲೇ ಗೌರವಾನ್ವಿತ ರಾಜ್ಯಪಾಲರು ಪ್ರಾಮಾಣಿಕ ಮುಖ್ಯಮಂತ್ರಿ ಹಾಗೂ ನಿರಪರಾಧಿಯನ್ನ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಕುತಂತ್ರಕ್ಕೆ ತಲೆಬಾಗಿ ಅನುಮತಿ ನೀಡಿರುವುದು ಅತ್ಯಂತ ದುರದೃಷ್ಟಕರ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್ ಮನೋಹರ್ ರವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರಿಂದ ನಡೆಸಲಾದ ಪ್ರತಿಭಟನೆಯ ವೇಳೆ ಎಸ್ ಮನೋಹರ್ ರವರು  ಮಾತನಾಡಿ ಮೈಸೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಭ್ರಷ್ಟಾಚಾರ ನಡೆಸಿರುವವರು ಬಿಜೆಪಿ ಸರ್ಕಾರದವರು ಮಂತ್ರಿಗಳು, ಶಾಸಕರು, ಹಾಗೂ ಈ ಹಿಂದೆ ಆಡಳಿತ ನಡೆಸಿದ್ದ ಜನತಾದಳದವರು,

ಆದರೆ ಮುಖ್ಯಮಂತ್ರಿಗಳ ಹೆಸರಿಗೆ ಕಳಂಕ ತರಲು ಪ್ರಾಮಾಣಿಕ ಮುಖ್ಯಮಂತ್ರಿ ಎಂಬುವ ಹೆಗ್ಗಳಿಕೆಯನ್ನು ಗಳಿಸಿರುವ ಶ್ರೀ ಸಿದ್ದರಾಮಯ್ಯನವರನ್ನ ಈ ಪ್ರಕರಣದಲ್ಲಿ ಸಿಲುಕಿಸಲು ರಾಜಭವನ ದುರ್ಬಳಕೆ ಮಾಡಿಕೊಂಡಿರುವುದು ಇಂದು ಸಾಬೀತಾಗಿದೆ,

ಯಾವುದೇ ಪ್ರಕರಣದಲ್ಲೂ ಹಾಗೂ ಹಗರಣದಲ್ಲಿ ಇಲ್ಲಿಯವರೆಗೂ ಭಾಗಿಯಾಗದೆ ಪ್ರಾಮಾಣಿಕವಾಗಿ ಆಡಳಿತ ನಡೆಸಿರುವ ಶ್ರೀ ಸಿದ್ದರಾಮಯ್ಯನವರನ್ನು ಕಳಂಕಿತರನ್ನಾಗಿ ಮಾಡಲು ಕೇಂದ್ರ ಸರ್ಕಾರ ಬಿಜೆಪಿ ಪಕ್ಷ ನಡೆಸಿರುವ ಕುತಂತ್ರ ರಾಜ್ಯಪಾಲರ ಮೂಲಕ ಇಂದು ಬಹಿರಂಗವಾಗಿದೆ,

ರಾಜ್ಯಪಾಲರು ಬಿಜೆಪಿಯ ಅನೇಕ ಹಿಂದಿನ ಮಂತ್ರಿಗಳ ವಿರುದ್ಧ ತನಿಖೆಗೆ ಅನುಮತಿ ನೀಡಿಲ್ಲ ಹಾಗೂ ಎಚ್ ಡಿ ಕುಮಾರಸ್ವಾಮಿ ವಿರುದ್ಧ ತನಿಖೆಗೆ ಅನುಮತಿ ನೀಡಿಲ್ಲ ಉದ್ದೇಶ ಪೂರ್ವಕವಾಗಿ ಬಿಜೆಪಿ ಜನತಾದಳದ ನಾಯಕರ ಒತ್ತಾಯದ ಮೇರೆಗೆ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸುವ ಒಂದು ಅಂಶದ ಕಾರ್ಯಕ್ರಮವನ್ನು ರಾಜ್ಯಪಾಲರು ಹಮ್ಮಿಕೊಂಡಿರುವುದು ಇಂದು 
ಜಗ್ಜಾಹಿರವಾಗಿದೆ, ರಾಜ್ಯಪಾಲರು ಸಂವಿಧಾನದ ಮುಖ್ಯಸ್ಥರು ಕರ್ನಾಟಕದಲ್ಲಿ ಕರ್ನಾಟಕ ಸರಕಾರವನ್ನು ಅಸ್ಥಿರಗೊಳಿಸಲು ವಾಮ ಮಾರ್ಗದಲ್ಲಿ ನಡೆಸುತ್ತಿರುವ ಪ್ರಯತ್ನಕ್ಕೆ ರಾಜ್ಯದ ಜನ ತಕ್ಕ ಉತ್ತರವನ್ನು ನೀಡಲಿದ್ದಾರೆ,

ರಾಜಪಾಲರು ನಿಷ್ಪಕ್ಷಪಾತವಾಗಿ ತನಿಖೆ ನಡೆಸುವ ಬಗ್ಗೆ ಗಮನ ಹರಿಸಬೇಕಾಗಿತ್ತು. ಇದು ಕೇವಲ ಬಿಜೆಪಿಯ ಒತ್ತಾಸೆಯಿಂದ ತನಿಖೆಗೆ ಆದೇಶ ನೀಡಿರುವುದು ಮೇಲ್ನೋಟಕ್ಕೆ ಸಾಬೀತಾಗಿದ್ದು

ಈ ಕ್ರಮ ಸಂವಿಧಾನಕ್ಕೆ ಎಸೆದ ಅಪಚಾರವಾಗಿದೆ ಎಂದರು. ಈ ಪ್ರತಿಭಟನೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಎಸ್. ಮನೋಹರ್ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರಾದ ಜನಾರ್ಧನ್, ವಕ್ತಾರರಾದ ಆನಂದ್,ಪ್ರಕಾಶ್, ರವಿಕುಮಾರ್ ,ಉಮೇಶ್ ಹೇಮರಾಜ್, ನವೀನ್, ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮುಖಂಡರು ಭಾಗವಹಿಸಿದ್ದರು.