ಸರಿಸುಮಾರು ಅರ್ಧದಷ್ಟು ಬೆಂಗಳೂರಿಗರು ಬೆಳಿಗ್ಗೆ ನಿತ್ರಾಣದಿಂದಲೇ ಏಳುತ್ತಾರೆ: ವೇಕ್‌ಫಿಟ್ ಗ್ರೇಟ್ ಇಂಡಿಯನ್ ಸ್ಲೀಪ್ ಸ್ಕೋರ್‌ಕಾರ್ಡ್ 2024

ಸರಿಸುಮಾರು ಅರ್ಧದಷ್ಟು ಬೆಂಗಳೂರಿಗರು ಬೆಳಿಗ್ಗೆ ನಿತ್ರಾಣದಿಂದಲೇ ಏಳುತ್ತಾರೆ: ವೇಕ್‌ಫಿಟ್ ಗ್ರೇಟ್ ಇಂಡಿಯನ್ ಸ್ಲೀಪ್ ಸ್ಕೋರ್‌ಕಾರ್ಡ್ 2024
ಜಾಹೀರಾತಿಗಾಗಿ ಸಂಪರ್ಕಿಸಿ 6362546216

ಬೆಂಗಳೂರು : ಭಾರತದ ಅತಿದೊಡ್ಡ ಡಿ2ಸಿ ನಿದ್ರೆ ಹಾಗೂ ಗೃಹ ಪರಿಹಾರಗಳ ಸರಬರಾಜು ಸಂಸ್ಥೆಗಳ ಪೈಕಿ ಒಂದಾದ ವೇಕ್‌ಫಿಟ್.ಕೊ(Wakefit.co), ತನ್ನ ಗ್ರೇಟ್ ಇಂಡಿಯನ್ ಸ್ಲೀಪ್ ಸ್ಕೋರ್‌ಕಾರ್ಡ್ (GISS) 2024ದ 7ನೆ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಈ ವರ್ಷದ ಸರ್ವೇಕ್ಷಣೆಯು, ಬೆಂಗಳೂರಿಗರ ನಿದ್ರಾ ಪ್ರವೃತ್ತಿಗಳು ಹಾಗೂ ಪ್ಯಾಟರ್ನ್‌ಗಳ ಸ್ಥಿತಿಗತಿಯ ಕುರಿತು ಅಚ್ಚರಿ ಮೂಡಿಸುವ ವಿವರಗಳನ್ನು ಬಹಿರಂಗಪಡಿಸಿದೆ. ಎದ್ದ ನಂತರವೂ ಬೆಚ್ಚಿಬೀಳಿಸುವ 46% ಮಂದಿಯಲ್ಲಿ ಹೊಸತನ ಇರುವುದಿಲ್ಲ ಎಂದು ವರದಿಯ ಶೋಧಗಳು ತಿಳಿಸುತ್ತವೆ. ಮಲಗುವ ಮುನ್ನ ತಮ್ಮ ಮೊಬೈಲ್‌ಗಳನ್ನು ಬಳಸುತ್ತೇವೆ ಎಂದು 90% ಪ್ರತಿಕ್ರಿಯಾದಾರರು ಸೂಚಿಸಿದ್ದಾರೆ ಎಂದೂ ವರದಿ ತಿಳಿಸುತ್ತದೆ. ಕೆಳಗೆ, ಬೆಂಗಳೂರಿನಿಂದ ಬಂದ ಹೆಚ್ಚಿನ ಶೋಧಗಳ ವಿವರಗಳನ್ನು ಒದಗಿಸಲಾಗಿದೆ. 

● ತಡವಾದ ರಾತ್ರಿಗಳು, ನಿತ್ರಾಣ ಬೆಳಗುಗಳು

ಬೆಂಗಳೂರಿನಲ್ಲಿ, 38% ಮಂದಿ, ರಾತ್ರಿ 11ರ ನಂತರ ನಿದ್ರಿಸುತ್ತಾರೆ. ನಿತ್ರಾಣಗೊಂಡು ಏಳುವ ಬೆಂಗಳೂರಿಗರ ಸಂಖ್ಯೆ 2023ದಲ್ಲಿ 34% ಇದ್ದದ್ದು, ಈ ವರ್ಷ 46%ಗೆ ಏರಿದೆ ಎಂದು ಕೂಡ ವರದಿಯು ಬಹಿರಂಗಪಡಿಸುತ್ತದೆ. ಆಸಕ್ತಿಕರ ವಿಷಯವೆಂದರೆ, 29% ಬೆಂಗಳೂರಿನ ನಿವಾಸಿಗಳು, ತಮ್ಮ ಭವಿಷ್ಯತ್ತಿನ ಬಗ್ಗೆ ಚಿಂತಿಸುತ್ತಾ ತಡರಾತ್ರಿಯವರೆಗೂ ಎದ್ದಿರುತ್ತಾರೆ. ಈ ನಗರದ ನಿವಾಸಿಗಳು, ತಡವಾದ ರಾತ್ರಿಗಳ ಕಾರಣದಿಂದಾಗಿ ತಮ್ಮ ನಿದ್ರಾ ಆರೋಗ್ಯದೊಂದಿಗೆ ರಾಜಿ ಮಾಡಿಕೊಳ್ಳುತ್ತಿರಬಹುದು, ಮತ್ತು ಇದು ಒಟ್ಟಾರೆ ಹಗಲಿನ ಉತ್ಪಾದಕತೆ ಮತ್ತು ಸ್ವಾಸ್ಥ್ಯವನ್ನು ಗಣನೀಯವಾಗಿ ಕಡಿಮೆ ಮಾಡುತ್ತಿರವಹುದು ಎಂಬುದನ್ನು ಇದು ಸೂಚಿಸುತ್ತದೆ. 

● ಅತಿಯಾದ ಸಮೂಹ ಮಾಧ್ಯಮ

ಗುಣಮಟ್ಟದ ನಿದ್ರೆಗೆ, ಮಲಗುವುದಕ್ಕೆ ಕನಿಷ್ಟ ಒಂದು ಘಂಟೆ ಮುಂಚಿತವಾಗಿಯಾದರೂ ಡಿಜಿಟಲ್ ಸಾಧನಗಳಿಂದ ಸಂಪರ್ಕ ಕಡಿದುಕೊಳ್ಳುವುದು ಸೂಕ್ತ ಎಂದು ಸಾಕಷ್ಟು ಸಂಶೋಧನೆಗಳು ತಿಳಿಸುತ್ತವೆ. ಆದರೂ, ಸಮೂಹ ಮಾಧ್ಯಮ ಹಾಗೂ OTTಯ ಆಕರ್ಷಣೆ, ಬೆಂಗಳೂರಿನ ಇರುಳು ಪದ್ಧತಿಗಳಿಗೆ ಕೊಡುಗೆ ಸಲ್ಲಿಸುತ್ತಿದ್ದು, 59% ನಿವಾಸಿಗಳು, ತಡರಾತ್ರಿಯವರೆಗೂ ತಾವು ಸ್ಕ್ರೀನ್‌ಗಳಿಗೆ ಅಂಟಿಕೊಂಡಿರುತ್ತೇವೆ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಇದಕ್ಕೆ ಸೇರಿದಂತೆ, ಬೆಚ್ಚಿಬೀಳಿಸುವ 90% ಬೆಂಗಳೂರು ನಿವಾಸಿಗಳು ಮಲಗುವ ಮುನ್ನ ತಮ್ಮ ಫೋನ್ ಬಳಸುವುದಾಗಿ ವರದಿ ಮಾಡಿದ್ದಾರೆ. ಡಿಜಿಟಲ್ ಸಾಧನಗಳ ಮೇಲಿನ ಅವಲಂಬನೆಯು, ಬೆಂಗಳೂರಿಗರ ಶಿಸ್ತಿನ ನಿದ್ರಾ ಅಭ್ಯಾಸಗಳನ್ನು ಹಾಳುಮಾಡುತ್ತಿರಬಹುದು ಎಂಬುದನ್ನು ಇದು ಸೂಚಿಸುತ್ತದೆ. 

● ಕೆಲಸ, ಚಿಂತೆ ಮತ್ತು ನಿತ್ರಾಣ

28% ಬೆಂಗಳೂರು ಕಾರ್ಯಪಡೆಯು, ತಮ್ಮ ಕೆಲಸ ತಾವು ತಡರಾತ್ರಿಯವರೆಗೂ ಎದ್ದಿರುವಂತೆ ಮಾಡುತ್ತದೆ ಎಂಬುದನ್ನು ವರದಿ ಮಾಡಿದೆ. ಅರ್ಧಕ್ಕಿಂತ ಹೆಚ್ಚಿನ ನಗರದ ನಿವಾಸಿಗಳು, ಅಂದರೆ 55% ಮಂದಿ, ಕೆಲಸದ ವೇಳೆಗಳಲ್ಲಿ ನಿದ್ರೆ ಬರುವಂತಾಗುವುದರ ಬಗ್ಗೆ ದೂರಿದ್ದಾರೆ. ಕೆಲಸದ ಒತ್ತಡ, ಜೊತೆಗೆ, ಸಂಭಾವ್ಯ ಚಿಂತೆಗಳು ಹಾಗೂ ಒತ್ತಡಗಳು, ಹಗಲು ತೂಕಡಿಕೆಗೆ ಕಾರಣವಾಗುತ್ತಿರಬಹುದು ಎಂದು ಸೂಚಿಸುವ ಈ ಗಮನಿಕೆಯು, ನಿದ್ರೆಯ ಗುಣಮಟ್ಟ ಹಾಗೂ ಒಟ್ಟಾರೆ ಸ್ವಾಸ್ಥ್ಯವನ್ನು ಸುಧಾರಿಸಲು ಪರಿಹಾರಗಳ ಅಗತ್ಯವನ್ನು ಎತ್ತಿ ಹೇಳುತ್ತದೆ. 

● ಆರೋಗ್ಯಕರವಾದ ನಿದ್ರೆಯೆಡೆಗೆ ಹೆಜ್ಜೆ  

ನಿದ್ರೆಯ ಸವಾಲುಗಳಿಗೆ ಪರಿಹಾರ ಪಡೆದುಕೊಳ್ಳುವುದಕ್ಕೆ ಕುರಿತಂತೆ, ಬೆಂಗಳೂರಿನ 40% ಮಂದಿ, ನಿದ್ರೆಗೆ ಮುನ್ನ ಡಿಜಿಟಲ್ ಸಾಧನಗಳ ಬಳಕೆಯನ್ನು ತಪ್ಪಿಸುವುದರಿಂದ ನಿದ್ರೆಯ ಗುಣಮಟ್ಟ ಹೆಚ್ಚಾಗುತ್ತದೆ ಎಂದು ನಂಬಿದ್ದಾರೆ. ಮೇಲಾಗಿ, ನಿದ್ರೆಯ ಆರೋಗ್ಯದಲ್ಲಿ ಹಾಸಿಗೆಗಳ ಪಾತ್ರಕ್ಕೆ ಕುರಿತಾದ ಪರಿಕಲ್ಪನೆಯಲ್ಲೂ ಗಣನೀಯವಾದ ಬದಲಾವಣೆ ಏರ್ಪಟ್ಟಿದ್ದು, ಸುಧಾರಿತ ನಿದ್ರೆಗಾಗಿ ಉತ್ತಮ ಹಾಸಿಗೆಗಳ ಪ್ರಾಮುಖ್ಯತೆಯನ್ನು 23% ಮಂದಿ ಒಪ್ಪಿಕೊಂಡಿದ್ದಾರೆ. ನಿದ್ರಾ ನೈರ್ಮಲ್ಯ ಹಾಗೂ ಮಲಗುವ ಕೋಣೆಯ ಪರಿಸರವು, ಒಟ್ಟಾರೆ ನಿದ್ರಾ ಗುಣಮಟ್ಟದ ಮೇಲೆ ಪ್ರಭಾವ ಬೀರುವುದರ ಕುರಿತು ಬೆಂಗಳೂರಿಗರಲ್ಲಿ ಜಾಗೃತಿ ಹೆಚ್ಚಾಗುತ್ತಿದೆ ಎಂಬುದನ್ನು ಈ ಶೋಧಗಳು ಕಂಡುಕೊಂಡಿವೆ. 

ಗ್ರೇಟ್ ಇಂಡಿಯನ್ ಸ್ಲೀಪ್ ಸ್ಕೋರ್‌ಕಾರ್ಡ್ ಒಂದು ನಿರಂತರವಾಗಿ ನಡೆಯುತ್ತಿರುವ ಸರ್ವೇಕ್ಷಣೆಯಾಗಿದ್ದು, 2024ರ ಆವೃತ್ತಿಯು, ಮಾರ್ಚ್ 2023ದಿಂದ ಫೆಬ್ರವರಿ 2024 ವರೆಗೆ 10,000+ ಪ್ರತಿಕ್ರಿಯೆಗಳನ್ನು ಪಡೆದುಕೊಂಡು ದಾಖಲಿಸಿತ್ತು. ಇದು, ಎಲ್ಲಾ ಭಾರತೀಯ ನಗರಗಳು, ವಿವಿಧ ವಯೋಗುಂಪುಗಳು ಹಾಗೂ ಹಲವಾರು ಭೌಗೋಳಿಕ ಪ್ರದೇಶಗಳ ಪ್ರತಿಕ್ರಿಯಾದಾರರನ್ನು ಒಳಗೊಂಡಿದೆ. ಸಂಸ್ಥೆಯು ಇತ್ತೀಚೆಗೆ ದಿ ಹ್ಯಾಪ್ಪಿ ಹೋಮ್ ಇಂಡೆಕ್ಸ್ ಕೂಡ ಪ್ರಾರಂಭಿಸಿದ್ದು, ಒಂದು ಸಂತೋಷಕರವಾದ ಹಾಗೂ ಸುರಕ್ಷಿತವಾದ ವಾಸಸ್ಥಳ ಮಾಡುವುದಕ್ಕೆ ಕೊಡುಗೆ ಸಲ್ಲಿಸುವ ಹಲವಾರು ಅಂಶಗಳ ನಡುವಿನ ಅಂತರಸಂಬಂಧವನ್ನು ಅರ್ಥಮಾಡಿಕೊಳ್ಳುವುದಕ್ಕಾಗಿ ಇದನ್ನು ವಿನ್ಯಾಸಗೊಳಿಸಲಾಗಿತ್ತು. ಭಾರತದಾದ್ಯಂತ ನಿದ್ರೆ ಹಾಗೂ ಗೃಹ ಪರಿಹಾರಗಳ ಕುರಿತು ತನ್ನ ಶ್ರೋತೃಗಳಿಗೆ ಅರಿವು ಮೂಡಿಸಿ ಅರ್ಥಪೂರ್ಣ ಸಂವಾದಗಳನ್ನು ಸೃಷ್ಟಿಸುವ ಗುರಿಯಿರುವಂತಹ ಆಲೋಚನಾ ನಾಯಕತ್ವ-ನಿರ್ದೇಶಿತ ಕಂಟೆಂಟ್ ಸೃಷ್ಟಿಸಲು Wakefit.co ಶ್ರಮಿಸುತ್ತಿದೆ.