ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ವಿವಿಧ ಅಕಾಡಮಿ ಮತ್ತು ಪ್ರಾಧಿಕಾರಗಳ ಸಮಾಲೋಚನೆ ಸಭೆ
Consultation meeting of various academies and authorities in Kannada Sahitya Parishad
ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಇಂದು ಹೊಸ ಅಧ್ಯಾಯವೊಂದಕ್ಕೆ ವೇದಿಕೆ ಸಜ್ಜಾಯಿತು. ಸರ್ಕಾರದಿಂದ ಅನುದಾನ ಪಡೆಯುವ ವಿವಿಧ ಅಕಾಡಮಿ ಮತ್ತು ಪ್ರಾಧಿಕಾರಗಳ ಅಧ್ಯಕ್ಷರ ಸಭೆ ನಡೆದು ಪರಸ್ಪರರ ನಡುವೆ ಸ್ನೇಹ ವಿಶ್ವಾಸದಿಂದ ಕನ್ನಡ-ಕನ್ನಡಿಗ- ಕರ್ನಾಟಕದ ಕೆಲಸಗಳನ್ನು ಸ್ನೇಹ, ಸಮಾಲೋಚನೆ, ಸಮನ್ವಯತೆ ಹಾಗೂ ಪರಸ್ಪರ ನಂಬಿಕೆಯಿಂದ ನಡೆಸುವ ಮೂಲಕ ಭುವನೇಶ್ವರಿಯ ರಥವನ್ನು ಒಟ್ಟಾಗಿ ಎಳೆಯಲು ಸಂಕಲ್ಪಿಸಲಾಯಿತು.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ಪ್ರಸ್ತಾವಿಕವಾಗಿ ಮಾತನಾಡಿ ಕರ್ನಾಟಕ ಸರ್ಕಾರದಿಂದ ಅನುದಾನ ಪಡೆಯುವ ಒಟ್ಟು 59 ಸಂಸ್ಥೆಗಳಿವೆ. ಇವುಗಳಲ್ಲಿ ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ಸಂಬಂಧಿಸಿದಂತೆ 12, ಸಂಸ್ಕೃತಿ, ಕಲೆ, ಜಾನಪದ, ಚಲನಚಿತ್ರಕ್ಕೆ ಸಂಬಂಧಿಸಿದಂತೆ 10 , ಟ್ರಸ್ಟ್ ಮತ್ತು ಪ್ರತಿಷ್ಟಾನಗಳು 25, ಆರು ರಂಗಾಯಣಗಳು, ಅನುದಾನ ಸಂಹಿತೆಗೆ ಒಳ ಪಟ್ಟ ಸಂಸ್ಥೆಗಳು ಕನ್ನಡ ಸಾಹಿತ್ಯ ಪರಿಷತ್ತೂ ಸೇರಿ ಐದು ಹಾಗು ಗಡಿ ವಿಚಾರಕ್ಕೆ ಸಂಬಂಧ ಪಟ್ಟ ಹಾಗೆ ಗಡಿ ಅಭಿವೃದ್ಧಿ ಪ್ರಾಧಿಕಾರವಿದೆ.
ಇವುಗಳ ನಡುವೆ ಹೊಂದಾಣಿಕೆ ಹೆಚ್ಚಾಗ ಬೇಕಾದ ಅಗತ್ಯ ಈಗ ಉಂಟಾಗಿದ್ದು ಕನ್ನಡ ಸೇವೆಯಲ್ಲಿ ಸಹಯೋಗ ಹಾಗೂ ಸಮಾಲೋಚನೆಯ ಮಹತ್ವ ಈಗ ಹೆಚ್ಚಾಗಿದೆ, ಈ ಹಿನ್ನೆಲೆಯಲ್ಲಿ ಕನ್ನಡಿಗರೆಲ್ಲರ ಮಾತೃಸಂಸ್ಥೆಯಾಗಿ ಶತಮಾನಕ್ಕೂ ಹೆಚ್ಚು ಇತಿಹಾಸವನ್ನು ಹೊಂದಿರುವ ಕನ್ನಡ ಸಾಹಿತ್ಯ ಪರಿಷತ್ತು ಎಲ್ಲಾ ಸಂಸ್ಥೆಗಳನ್ನು ಒಂದೇ ವೇದಿಕೆಗೆ ತರುವ ಪ್ರಯತ್ನವನ್ನು ಮಾಡಿದೆ ಎಂದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಕರ್ನಾಟಕ ಅಲ್ಪ ಸಂಖ್ಯಾತ ಅಯೋಗದ ಅಧ್ಯಕ್ಷರಾದ ನಿಸಾರ್ ಅಹಮದ್ ಇಂತಹ ಪ್ರಯತ್ನದ ಮಹತ್ವವನ್ನು ಒತ್ತಿ ಹೇಳಿ ಇದರ ನೇತೃತ್ವವನ್ನು ವಹಿಸಿರುವ ನಾಡೋಜ ಡಾ.ಮಹೇಶ ಜೋಶಿಯವರ ಸದಾಶಯವನ್ನು ಸ್ವಾಗತಿಸಿ ಮುಂದಿನ ಇಂತಹ ಸಭೆಯ ನೇತೃತ್ವವನ್ನು ವಹಿಸಲು ತಮ್ಮ ಅಯೋಗ ಸಿದ್ದವಿದೆ ಎಂದು ಹೇಳಿದರು.
ಸಭೆಯಲ್ಲಿ ಮಾತನಾಡಿದ ವಿವಿಧ ಅಕಾಡಮಿ ಮತ್ತು ಪ್ರಾಧಿಕಾರಗಳು ಇಂತಹ ಪ್ರಯತ್ನ ಕೈಗೊಂಡ ನಾಡೋಜ ಡಾ.ಮಹೇಶ ಜೋಶಿಯವರ ದೂರದರ್ಶಿತ್ವವನ್ನು ಶ್ಲಾಘಿಸಿದರು. ಕನ್ನಡದ ಕೆಲಸದಲ್ಲಿ ಪರಸ್ಪರ ಹೊಂದಾಣಿಕೆಯಿಂದ ಕೆಲಸ ಮಾಡಲು ತಾವೆಲ್ಲರೂ ಸಿದ್ದವೆಂದರು. ಅಕ್ಕರೆಯ ನಾಡು ಸಕ್ಕರೆಯ ಬೀಡು ಮಂಡ್ಯದಲ್ಲಿ ಅಯೋಜಿತವಾಗಿರುವ 87ನೆಯ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಂಪೂರ್ಣ ಸಹಕಾರ ನೀಡುವುದರ ಜೊತೆಗೆ ವಹಿಸುವ