ಬೆಂಗಳೂರು-ಕಾಸರಗೋಡು ಕನ್ನಡ ಸ್ನೇಹ ಮಿಲನ ಕಾರ್ಯಕ್ರಮ

ಬೆಂಗಳೂರು-ಕಾಸರಗೋಡು ಕನ್ನಡ ಸ್ನೇಹ ಮಿಲನ ಕಾರ್ಯಕ್ರಮ
ಜಾಹೀರಾತಿಗಾಗಿ ಸಂಪರ್ಕಿಸಿ 6362546216

ಕಾಸರಗೋಡು: ಬೇಕುಲ ಗೋಕುಲಂ ಗೋಶಾಲೆ ಸಭಾಂಗಣದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ (ರಿ.)ಮತ್ತು ವಿಕಾಸ ಟ್ರಸ್ಟ್ (ರಿ.) ಆಯೋಜಿಸುವ ಬೆಂಗಳೂರು-ಕಾಸರಗೋಡು ಕನ್ನಡ ಸ್ನೇಹ ಮಿಲನ ಕಾರ್ಯಕ್ರಮ

ಉದ್ಘಾಟನೆಯನ್ನು ವಿಕಾಸ ಟ್ರಸ್ಟ್ ಅಧ್ಯಕ್ಷರಾದ ರವಿನಾರಾಯಣ ಗುಣಾಜೆ, ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಎ.ಅಮೃತ್ ರಾಜ್ ರವರು ಮತ್ತು ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀಮತಿ ಶಿಲ್ಪಾ ದ್ಯಾವಯ್ಯ, ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕದ ಅಧ್ಯಕ್ಷರಾದ ಡಾ||ಜಯಪ್ರಕಾಶ್ ತೊಟ್ಟೆತ್ತೋಡಿ, ಬಿಬಿಎಂಪಿ ನೌಕರರ ಕನ್ನಡ ಸಂಘದ ಅಧ್ಯಕ್ಷರಾದ ಸಾಯಿಶಂಕರ್, ಖ್ಯಾತ ಜ್ಯೋತಿಷ್ಯರು,ಬೇಕಲ ಗೋಕುಲಂ ಗೋಶಾಲೆಯ ಸಂಸ್ಥಾಪಕರಾದ ವಿಷ್ಣುಪ್ರಸಾದ್ ರವರು ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು.

ಬಿಬಿಎಂಪಿ ನೌಕರರ ಸಾಂಸ್ಕೃತಿಕ ಸಂಘದ ಸದಸ್ಯರಿಗೆ ಕಾಸರಗೋಡು ಪ್ರಶಸ್ತಿ ಪ್ರದಾನ ಮಾಡಲಾಯಿತು ಮತ್ತು ಶ್ರೀಮತಿ ಅಪರ್ಣ ಕೆ. ಶರ್ಮ ಮತ್ತು ತಂಡವರಿಂದ ಶಾಸ್ತ್ರೀಯ ಸಂಗೀತ ಕಛೇರಿ ಏರ್ಪಡಿಸಲಾಗಿತ್ತು.