ಬಸವ ಬಿಲ್ವ ಭಕ್ತರ ಬಳಗದ ವತಿಯಿಂದ ಜಗಜ್ಯೋತಿ ಶ್ರೀ ಬಸವೇಶ್ವರ ಜಯಂತಿ

ಬಸವ ಬಿಲ್ವ ಭಕ್ತರ ಬಳಗದ ವತಿಯಿಂದ ಜಗಜ್ಯೋತಿ ಶ್ರೀ ಬಸವೇಶ್ವರ ಜಯಂತಿ
ಜಾಹೀರಾತಿಗಾಗಿ ಸಂಪರ್ಕಿಸಿ 6362546216

ಬೆಂಗಳೂರು: ಹೊಂಬೇಗೌಡನಗರ ಬಾಲಕರ ಪ್ರೌಢಶಾಲೆ ಸಭಾಂಗಣದಲ್ಲಿ ಬಸವ ಬಿಲ್ವ ಭಕ್ತರ ಬಳಗದ ವತಿಯಿಂದ ಜಗಜ್ಯೋತಿ ಶ್ರೀ ಬಸವೇಶ್ವರ ಜಯಂತಿ ಅಚರಣೆ.

 ಚಿಕ್ಕಮಗಳೂರು, ಬಸವ ಕೇಂದ್ರದ ಶ್ರೀ ಶ್ರೀ ಶ್ರೀ ಶಿವಯೋಗಿ ಪ್ರಭುಗಳು, ಶಾಸಕರಾದ ಉದಯ್ ಗರುಡಾಚಾರ್, ಶ್ರೀಮತಿ ಮೇದಿನಿ ಗರುಡಾಚಾರ್ ರವರು, ವೀರಶೈವ ಅಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷರಾದ ಬಿ.ಎಸ್.ಪರಮಶಿವಯ್ಯ, ದಕ್ಷಿಣ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಶ್ರೀಮತಿ ಭಾಗ್ಯವತಿ ಅಮರೇಶ್, ಮಾಹಿತಿ ಹಕ್ಕು ಅಧ್ಯಯನ ಸಂಸ್ಥೆಯ ಟ್ರಸ್ಟಿ ಅಮರೇಶ್(ಅಂಬರೀಶ್)ರವರು, ಬಸವ ಬಿಲ್ವ ಬಳಗದ ಅಧ್ಯಕ್ಷರಾದ ಎಚ್.ಚಂದ್ರಶೇಖರ್, ಗೌರವಾಧ್ಯಕ್ಷರಾದ ಬಿ.ಸಿ.ಸದಾಶಿವಯ್ಯ, ಕಾರ್ಯದರ್ಶಿ ಸುಭಾಷ್ ಚಂದ್ರ,ಕ್ರಾಂತಿಯೋಗಿ ಬಸವೇಶ್ವರರ ಬಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ದೀಪ ಬೆಳಗಿಸಿ ಜಯಂತಿ ಅಚರಣೆಗೆ ಚಾಲನೆ ನೀಡಿದರು.

 Advertisement

ಜಾಹೀರಾತಿಗಾಗಿ ಸಂಪರ್ಕಿಸಿ 6362546216

ಶ್ರೀ ಶ್ರೀ ಶ್ರೀ ಶಿವಯೋಗಿ ಪ್ರಭುಗಳು ಮಾತನಾಡಿ ಮಹಿಳೆಯರನ್ನ ಸಮಾಜ ಕಡೆಗಣಿಸಿ ನೋಡುತ್ತಿತ್ತು ಅದರೆ ವಿಶ್ವದಲ್ಲಿ ಮೊಟ್ಟ ಮೊದಲ ಬಾರಿಗೆ ಮಹಿಳೆಯರಿಗೆ ಸಮಾನತೆ, ಧಾರ್ಮಿಕ ಹಕ್ಕು ಹಾಗೂ ಸ್ವಾತಂತ್ರ್ಯ ನೀಡಿದ್ದು ಕಾಯಕಯೋಗಿ ಬಸವೇಶ್ವರರು. ಬಸವಾದಿ ಶರಣರ ತತ್ವ, ಸಿದ್ದಾಂತ ಆಳವಡಿಸಿಕೊಂಡರೆ ಅದೇ ಅನುಭವ ಮಂಟಪವಾಗುತ್ತದೆ. ಬಸವಾದಿ ಶರಣರು ನಾಡಿನ ನೆಲದ ಕನ್ನಡ ಭಾಷೆಯನ್ನ ದೇವ ಭಾಷೆಯಾಗಿ ಮಾಡಿ ಕನ್ನಡದಲ್ಲಿ ವಚನಗಳನ್ನು ರಚಿಸಿದರು. ಅಫಾನಿಸ್ತಾನ್ ನಿಂದ ಮರುಳು ಶಂಕರದೇವ, ಕಾಶ್ಮಿರದಿಂದ ಮೋಡಿಗೆ ಮಾರಯ್ಯ, ತಮಿಳುನಾಡಿನಿಂದ ಮಾದರ ಚನ್ನಯ್ಯ ಶರಣರು, ಕೇರಳ ದೂಪದ ಗೋಗಯ್ಯ ಶರಣರು ಅನುಭವ ಮಂಟಪಕ್ಕೆ ಬಂದು ಕನ್ನಡ ಭಾಷೆ ಕಲಿತು, ಕನ್ನಡದಲ್ಲಿ ವಚನ ಬರೆಯುತ್ತಾರೆ. ಕನ್ನಡ ಭಾಷೆಯನ್ನು ವಿಶ್ವಕ್ಕೆ ಪರಿಚಯಿಸಲು ಶ್ರೀಮಂತಗೊಳಿಸಿದವರು ಬಸವೇಶ್ವರರು.

ಶೋಷಿತರು, ಮಹಿಳೆಯರನ್ನ ಸಮಾಜದ ಮುಖ್ಯ ವಾಹಿನಿ ತರಲು ಜಗತ್ತನ್ನ ಉದ್ದರಿಸಲು ಬಂದ ಮಹಾನ್ ಶಕ್ತಿ ಅಣ್ಣ ಬಸವಣ್ಣನವರು. ವೇದ ಓದಿದರೆ ಡೊಡ್ಡವರಲ್ಲ ಸತ್ಯ ಶುದ್ದವಾಗಿ ಕಾಯಕ ಮಾಡುವವರು ಸಹ ಡೊಡ್ಡವರು ಎಂದು ಸಂದೇಶ ಸಾರಿದರು ಎಂದು ಹೇಳಿದರು. ಸಾಹಿತ್ಯ, ಸಂಗೀತ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕ, ಸಾಧಕಿಯರಿಗೆ ಗೌರವಿಸಿ, ಸನ್ಮಾನಿಸಲಾಯಿತು. ವಚನಜ್ಯೋತಿ ಬಳಗದ ವತಿಯಿಂದ ವಚನಗಳ ಗಾಯನ ಕಾರ್ಯಕ್ರಮ ಆಯೋಜಿಸಲಾಗಿತ್ತು.