ವಿವೇಕಾನಂದ ಪದವಿ ಕಾಲೇಜ್ ಹಾಗೂ ಲಯನ್ಸ್ ಕ್ಲಬ್ ವತಿಯಿಂದ ರಕ್ತದಾನ ಶಿಬಿರ ಹಾಗೂ ಜಾಗೃತಿ ಅಭಿಯಾನ
ಬೆಂಗಳೂರು: ವಿವೇಕಾನಂದ ಪದವಿ ಕಾಲೇಜು ಎನ್.ಎಸ್.ಎಸ್ ವಿಭಾಗ ರಾಜಾಜಿನಗರ , ಲಯನ್ಸ್ ಕ್ಲಬ್ ಬೆಂಗಳೂರು ಕ್ಯಾಪಿಟಲ್ ವತಿಯಿಂದ ರಕ್ತದಾನ ಹಾಗೂ ಜಾಗೃತಿ ಶಿಬಿರವನ್ನು ಲಯನ್ಸ್ ಹಾಗೂ ಸುಶ್ರುತ ರಕ್ತ ಕೇಂದ್ರ ಸಹಯೋಗದೊಂದಿಗೆ ವಿವೇಕಾನಂದ ಪದವಿ ಕಾಲೇಜು ಆವರಣದಲ್ಲಿ ಹಮ್ಮಿಕೊಳ್ಳಲಾಗಿತು. ಸುಮಾರು 250 ವಿದ್ಯಾರ್ಥಿಗಳು ಹಾಗೂ ಕಾಲೇಜಿನ ಸಿಬ್ಬಂದಿ ವರ್ಗದವರು ರಕ್ತದಾನ ಮಾಡಿದರು. ರಕ್ತದಾನದ ಶಿಬಿರದಲ್ಲಿ ರಕ್ತದಾನದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಕೂಡ ಹಮ್ಮಿಕೊಳ್ಳಲಾಗಿತ್ತು . ಪ್ರಾಂಶುಪಾಲರಾದ ಡಾ. ಕೆ ಶಶಿಕಲಾ ಕಾರ್ಯಕ್ರಮಕ್ಕೆ ಎಲ್ಲರನ್ನೂ ಸ್ವಾಗತಿಸಿದರು
Advertisement
ಜಾಹೀರಾತಿಗಾಗಿ ಸಂಪರ್ಕಿಸಿ 6362546216
ಶ್ರೀ ಹೆಚ್ ಜಿ ಬಾಲಗೋಪಾಲ್, ಕಾರ್ಯದರ್ಶಿ, ಜೆಇಎಸ್, ಬೆಂಗಳೂರು ಮತ್ತು ಲಯನ್ಸ್ ಚುನಾಯಿತ ಪ್ರಥಮ ಜಿಲ್ಲಾ ರಾಜ್ಯಪಾಲರಾದ ಜಿ ಮೋಹನ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ರಕ್ತದಾನಿಗಳು ಮತ್ತು ಸ್ವಯಂಸೇವಕರಿಗೆ ಕೃತಜ್ಞತೆ ಸಲ್ಲಿಸಿದರು, “ಈ ರಕ್ತದಾನ ಶಿಬಿರದ ಯಶಸ್ಸು ಸಮಾಜದ ಸಮರ್ಪಣೆಯನ್ನು ಪ್ರತಿಬಿಂಬಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ಜನತಾ ಶಿಕ್ಷಣ ಸಂಸ್ಥೆಯ ಸದಸ್ಯರಾದ ಐ. ನಾರಾಯಣ ರೆಡ್ಡಿ, ಶ್ರೀಮತಿ ಇಂದಿರಾ ಗೋಪಾಲಸ್ವಾಮಿ, ಹರೀಶ್ ಅಪ್ಪಾರೆಡ್ಡಿ, ಅನಿಲ್, ಲಯನ್ ಮನೋಜ್ ಕುಮಾರ್,ಲಯನ್ ರಾಮಚಂದ್ರ, ಕಾಲೇಜಿನ ಹಳೆಯ ವಿದ್ಯಾರ್ಥಿ ಲಯನ್ ಮುರಳಿ ಉಪಸ್ಥಿತರಿದ್ದರು. ಹಾಗೂ ಕಾಲೇಜಿನ ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿಗಳಾದ ಪ್ರೊಫೆಸರ್ ಎಂ ಆರ್ ಅಭಿಷೇಕ್, ಪ್ರೊಫೆಸರ್ ಛಾಯ ರವರು ಶಿಬಿರವನ್ನು ಅತ್ಯಂತ ಯಶಸ್ವಿ ರೀತಿಯಲ್ಲಿ ಆಯೋಜಿಸಿ ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ನೋಡಿಕೊಂಡರು.