ಕಿಡ್ನಾಪ್ ಆರೋಪ ಅಲ್ಲಗೆಳೆದ ಭವಾನಿ ರೇವಣ್ಣ

ಕಿಡ್ನಾಪ್ ಆರೋಪ ಅಲ್ಲಗೆಳೆದ ಭವಾನಿ ರೇವಣ್ಣ
ಜಾಹೀರಾತಿಗಾಗಿ ಸಂಪರ್ಕಿಸಿ 6362546216

ಬೆಂಗಳೂರು: ಮೈಸೂರಿನ ಕೆ.ಆರ್.ನಗರದ ಮಹಿಳೆ ಅಪಹರಣ ಪ್ರಕರಣದಲ್ಲಿ ಬಂಧನದ ಭೀತಿಯಲ್ಲಿದ್ದ ಹೆಚ್.ಡಿ. ರೇವಣ್ಣ ಪತ್ನಿ ಭವಾನಿ ರೇವಣ್ಣ ಅವರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಹಲವು ಷರತ್ತುಗಳನ್ನು ವಿಧಿಸಿ ಹೈಕೋರ್ಟ್ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಿದೆ. ನಿನ್ನೆ ಭವಾನಿ ರೇವಣ್ಣ ವಿಚಾರಣೆಗೆ ಹಾಜರಾಗಿದ್ದು, ನಾನು ಕಿಡ್ನಾಪ್ ಮಾಡಿಸಿಲ್ಲ, ಎಲ್ಲವೂ ಷಡ್ಯಂತ್ರ ಎಂದು ಅಧಿಕಾರಿಗಳಿಗೆ ತಿಳಿಸಿದ್ದಾರೆ. ಎಸ್‌ಐಟಿ ಅಧಿಕಾರಿಗಳ ವಿಚಾರಣೆ ವೇಳೆ ಕಿಡ್ನಾಪ್ ಆರೋಪವನ್ನು ಅಲ್ಲಗೆಳೆದಿದ್ದಾರೆ. ಸಂತ್ರಸ್ತೆ ನಮ್ಮ ಮನೆಯಲ್ಲಿ ಕೆಲಸ ಮಾಡ್ತಿದ್ದವರು. ನಾನು ಕಿಡ್ನಾಪ್ ಮಾಡಿಸಿಲ್ಲ, ಎಲ್ಲವೂ ಷಡ್ಯಂತ್ರ ಎಂದು ಭವಾನಿ ರೇವಣ್ಣ ಅವರು ಎಸ್‌ಐಟಿ ಅಧಿಕಾರಿಗಳಿಗೆ ತಿಳಿಸಿದ್ದಾರೆಂದು ಗೊತ್ತಾಗಿದೆ.

ಈ ವೇಳೆ ಇಬ್ಬರು ಆರೋಪಿಗಳ ನಡುವಿನ ಆಡಿಯೋ ಸಂಭಾಷಣೆ ಇಟ್ಟು ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಸತೀಶ್ ಬಾಬಣ್ಣ ಹಾಗೂ ರಾಜಗೋಪಾಲ್ ನಡುವಿನ ಆಡಿಯೋ ಸಂಭಾಷಣೆ ಇಟ್ಟು ವಿಚಾರಣೆ ಮಾಡಿದ್ದು ನಾನು ಯಾರನ್ನೂ ಕರೆದುಕೊಂಡು ಬರಲು ಹೇಳಿಲ್ಲ. ನನಗೂ ಈ ಪ್ರಕರಣಕ್ಕೂ ಸಂಬಂಧ ಇಲ್ಲ ಎಂದು ಭವಾನಿ ರೇವಣ್ಣ ಅವರು ವಿಚಾರಣೆ ವೇಳೆ ತಿಳಿಸಿದ್ದಾರೆ. ನಾಲ್ಕು ಗಂಟೆಗಳ ಕಾಲ ವಿಚಾರಣೆ ನಡೆದಿದ್ದು ಇಂದು ಮತ್ತೆ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ.