ವಾಲ್ಮೀಕಿ ಮಹಾಸಂಸ್ಥಾನ ಗುರುಪೀಠಕ್ಕೆ ವಿನೋದ್ ಅಸೂಟಿ ಭೇಟಿ
ಧಾರವಾಡ: ಧಾರವಾಡ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ವಿನೋದ್ ಅಸೂಟಿ ಅವರು, ಇಂದು ಹರಿಹರ ತಾಲೂಕಿನ ಶ್ರೀ ಮಹರ್ಷಿ ವಾಲ್ಮೀಕಿ ಮಹಾಸಂಸ್ಥಾನ ಗುರುಪೀಠ ರಾಜನಹಳ್ಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಇದೇ ವೇಳೆ ಜಗದ್ಗುರು ಶ್ರೀ ಪ್ರಸನ್ನಾನಂದಪುರಿ ಮಹಾಸ್ವಾಮಿಗಳು ಹಾಗೂ ಮಡಿವಾಳ ಗುರುಪೀಠದ ಶ್ರೀ ಬಸವ ಮಾಚಿದೇವ ಮಹಾಸ್ವಾಮಿಯವರಿಗೆ ನಮನ ಸಲ್ಲಿಸಿ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಚಂದ್ರಶೇಖರ್ ಜುಟ್ಟಲ್, ಮೌನೇಶ ಗುಡಸಲಮನಿ, ಮಂಜುನಾಥ ವೀರಪ್ಪನವರ, ಯಲ್ಲಪ್ಪ ದಾಸರ, ಮಂಜುನಾಥ ಹುಡೇದ, ಬಿ ಎಚ್ ಅಶೋಕ, ಆಕಾಶ ಕೊನೇರಿ, ಮಂಜು ಜಾಧವ, ಗುರುಶಾಂತ ಪಾಟೀಲ, ಮಂಜುನಾಥ ಭೋವಿ ಮತ್ತು ಪಕ್ಷದ, ಇತರ ಸಮಾಜದ ಹಿರಿಯ ಮುಖಂಡರು ಉಪಸ್ಥಿತರಿದ್ದರು.