ಕರ್ನಾಟಕ ಮಹಿಳಾ ಸಾಧಕ ಪ್ರಶಸ್ತಿ 2024, ಭಾರತೀಯ ಮಹಿಳಾ ಸಾಧಕ ಪ್ರಶಸ್ತಿ 2024 ಸಮಾರಂಭ
Karnataka women achievers Award 2024, Indian women achievers Award 2024 Ceremony
ಬೆಂಗಳೂರು : ಮಹಿಳಾ ಸಾಧಕೀಯರಿಗೆ ಗೌರವ ಸಲ್ಲಿಸುವ ಮೂಲಕ ಮತ್ತಷ್ಟು ಸಾಧನೆಯತ್ತ ಮುನ್ನುಗ್ಗಲು ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ರಾಜಮಾತೆ ಡಾ.ಪ್ರಮೋದಾ ದೇವಿ ಒಡೆಯರ್ ಹೇಳಿದರು.
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 60 ಮಹಿಳೆಯರಿಗೆ ದೇಶದ ಪ್ರತಿಷ್ಠಿತ ಮತ್ತು ಹೆಸರಾಂತ ಆಭರಣ ಮಳಿಗೆಯಾದ ಸಿ. ಕೃಷ್ಣಯ್ಯ ಚೆಟ್ಟಿ ಗ್ರೂಫ್ ಆಫ್ ಜುವೆಲ್ಲರ್ಸ್ ವತಿಯಿಂದ ಆಯೋಜಿಸಲಾಗಿದ್ದ 'ಕರ್ನಾಟಕ ಮಹಿಳಾ ಸಾಧಕ ಪ್ರಶಸ್ತಿ ಮತ್ತು ಭಾರತೀಯ ಮಹಿಳಾ ಸಾಧಕ ಪ್ರಶಸ್ತಿ-2024' ಸಮಾರಂಭವನ್ನು ರಾಜಮಾತೆ ಡಾ.ಪ್ರಮೋದಾ ದೇವಿ ಒಡೆಯರ್, ಅಶ್ವಿನಿ ಪುನೀತ್ ರಾಜಕುಮಾರ್, ಸಿ.ಕೃಷ್ಣಯ್ಯ ಚೆಟ್ಟಿ ಸಮೂಹದ ನಿರ್ದೇಶಕ, ವ್ಯವಸ್ಥಾಪಕ ನಿರ್ದೇಶಕರಾದ ಡಾ. ಸಿ ವಿನೋದ್ ಹಯಗ್ರೀವ್, ಕಾರ್ಯನಿರ್ವಾಹಕ ನಿರ್ದೇಶಕರಾದ ಸಿ ತ್ರಿವೇಣಿ ವಿನೋದ್ ರವರು ಚಾಲನೆ ನೀಡಿದರು.
ಈ ವೇಳೆ ರಾಜಮಾತೆ ಡಾ.ಪ್ರಮೋದಾ ದೇವಿ ಒಡೆಯರ್ ರವರು ಮಾತನಾಡಿ 21ನೇ ಶತಮಾನದ ಮಹಿಳೆಯರು ಸಾಕಷ್ಟು ಸಾಧಿಸಿದ್ದಾರೆ. ಎಲ್ಲಾ ಮಹಿಳೆಯರಿಗೂ ತಮ್ಮ ಹಕ್ಕುಗಳ ಬಗೆಗಿನ ಅರಿವು ಅತೀ ಅಗತ್ಯ. ಅಂತಹ ಅರಿವು ಮಹಿಳೆಯರಲ್ಲಿ ಆತ್ಮವಿಶ್ವಾಸವನ್ನು ಹುಟ್ಟು ಹಾಕುತ್ತದೆ. ಅಂತಹ ಆತ್ಮವಿಶ್ವಾಸವನ್ನು ಇನ್ನು ಹೆಚ್ಚು ಗೊಳಿಸಲು ಇಂತಹ ಸನ್ಮಾನ ಸಮಾರಂಭ ಸಹಕಾರಿಯಾಗಲಿದೆ ಎಂದರು.
ಬಳಿಕ ಡಾ. ಸಿ ವಿನೋದ್ ಹಯಗ್ರೀವ್ ರವರು ಮಾತನಾಡಿ ಈ ಬಾರಿ ಪ್ರಶಸ್ತಿಗೆ 2 ಸಾವಿರಕ್ಕೂ ಹೆಚ್ಚಿನ ನಾಮನಿರ್ದೇಶನಗಳು ಬಂದಿದ್ದವು. ಅದರಲ್ಲಿ 12 ಜನರ ಆಯ್ಕೆ ಸಮಿತಿ ಸದಸ್ಯರು ಅಂತಿಮವಾಗಿ 60 ಮಂದಿಯನ್ನು ಆಯ್ಕೆ ಮಾಡಿದ್ದಾರೆ ಎಂದು ಹೇಳಿದರು.
ವಯಸ್ಸು, ವರ್ಗ, ಜಾತಿ ಅಥವಾ ಧರ್ಮವನ್ನು ಮೀರಿದ ಪ್ರತಿಯೊಬ್ಬ ಮಹಿಳೆಯನ್ನು ಗುರುತಿಸಿ ಗೌರವಿಸುವುದು ಈ ಪ್ರಶಸ್ತಿ ಸಮಾರಂಭದ ಏಕೈಕ ಗುರಿಯಾಗಿದೆ. ತನ್ನ ಆಯ್ಕೆ ಕ್ಷೇತ್ರದ ಮೂಲಕ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ಉಂಟು ಮಾಡುವಲ್ಲಿ ಪ್ರತಿ ಮಹಿಳೆಯ ಅನನ್ಯ ಕೊಡುಗೆಯನ್ನು ಶ್ಲಾಘಿಸಿ, ಭವಿಷ್ಯದ ಪೀಳೆಗೆಗೆ ದಾರಿದೀಪವಾಗಿ ಈ ಪ್ರಶಸ್ತಿ ನಿಲ್ಲಲಿದೆ ಎಂದು ತಿಳಿಸಿದರು. ಸಂಸ್ಥೆಯ ನಿರ್ದೇಶಕಿ ತ್ರಿವೇಣಿ ವಿನೋದ್ ಮಾತನಾಡಿ, ವರ್ಷದಿಂದ ವರ್ಷಕ್ಕೆ ನಮ್ಮ ಪ್ರಶಸ್ತಿಯು ಕರ್ನಾಟಕದ ಗಡಿಯನ್ನು ಮೀರಿದೆ. ಭಾರತೀಯ ಮಹಿಳಾ ಸಾಧಕ ಪ್ರಶಸ್ತಿ ದೇಶಾದ್ಯಂತ ತಲುಪುತ್ತಿದೆ. ಈ ಅದ್ಭುತ ಕಾರ್ಯಕ್ರಮವು ತಮ್ಮ ಜೀವನದಲ್ಲಿ ಗಮನಾರ್ಹ ಮಹಿಳೆಯರನ್ನು ಗುರುತಿಸುತ್ತಿದೆ ಮತ್ತು ಈ ಬದಲಾವಣೆಗೆ ಕಾರಣರಾದವರು ಜಾಗತಿಕ 5 ಮನ್ನಣೆಗೆ ಅರ್ಹವಾಗಿದ್ದಾರೆ ಎಂದರು. ಈ ಸಮಾರಂಭದಲ್ಲಿ ನಟಿ ಪೂಜಾ ಗಾಂಧಿ ಸ್ಫೂರ್ತಿ ವಿಶ್ವಾಸ್ ಸೇರಿದಂತೆ ಇತರರು ಭಾಗವಹಿಸಿದ್ದರು.