ಇವಿಎಂ ಯಂತ್ರಗಳನ್ನು ಸಾಗಿಸುತ್ತಿದ್ದ ಬಸ್ ಗೆ ಬೆಂಕಿ

ಇವಿಎಂ ಯಂತ್ರಗಳನ್ನು ಸಾಗಿಸುತ್ತಿದ್ದ ಬಸ್ ಗೆ ಬೆಂಕಿ
ಜಾಹೀರಾತಿಗಾಗಿ ಸಂಪರ್ಕಿಸಿ 6362546216

ಮಧ್ಯಪ್ರದೇಶ: ಲೋಕಸಭಾ ಚುನಾವಣೆ ಮತದಾನದ ಬಳಿಕ ಇವಿಎಂ ಯಂತ್ರಗಳು ಹಾಗೂ ಮತಗಟ್ಟೆ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಬಸ್‌ಗೆ ಬೆಂಕಿ ತಗುಲಿರುವ ಘಟನೆ ಬೇತುಲ್ ಜಿಲ್ಲೆಯ ಗೋಲಾ ಗ್ರಾಮದ ಬಳಿ ಮಂಗಳವಾರ ರಾತ್ರಿ 11 ಗಂಟೆಗೆ ಘಟನೆ ನಡೆದಿದೆ.

 ಈ ದುರಂತದಲ್ಲಿ ಯಾವುದೇ ಮತಗಟ್ಟೆ ಸಿಬ್ಬಂದಿ ಹಾಗೂ ಬಸ್ ಚಾಲಕನಿಗೆ ಗಾಯಗಳಾಗಿಲ್ಲ. ಬದಲಿಗೆ ಇವಿಎಂ ಯಂತ್ರಗಳಿಗೆ ಹಾನಿಯಾಗಿದೆ. ಬಸ್‌ನ ಮುಂಭಾಗದಲ್ಲಿ ಚಿಲಕ ಹಾಕಿದ್ದ ಕಾರಣ ಹಿಂಬಾಗಿಲು ಮತ್ತು ಕಿಟಕಿ ಒಡೆದು ಬಸ್‌ನಿಂದ ಸಿಬ್ಬಂದಿಗಳು ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆಂದು ಜಿಲ್ಲಾಧಿಕಾರಿ ನರೇಂದ್ರ ಸೂರ್ಯವಂಶಿ ತಿಳಿಸಿದ್ದಾರೆ. ಬೂತ್ ಸಂಖ್ಯೆ 275, 276, 277, 278,279, 280ಕ್ಕೆ ಸೇರಿದಂತೆ ನಾಲ್ಕು ಮತಗಟ್ಟೆಗಳ ಇವಿಎಂಗಳಿಗೆ ಹಾನಿಯಾಗಿದೆ. ಅಗ್ನಿಶಾಮಕ ದಳವು ಬೆಂಕಿಯನ್ನು ನಂದಿಸಿತು.

 Advertisement

ಜಾಹೀರಾತಿಗಾಗಿ ಸಂಪರ್ಕಿಸಿ 6362546216

​​​​​ಬಸ್ ಸಂಪೂರ್ಣವಾಗಿ ಹೊತ್ತಿ ಉರಿದಿದೆ. ಈ ವೇಳೆ ಬಸ್‌ನಲ್ಲಿ ಆರು ಮತಗಟ್ಟೆಗಳ ಇವಿಎಂಗಳು ಇದ್ದವು, ನಾಲ್ಕಕ್ಕೆ ಹಾನಿಯಾಗಿದೆ. ಎರಡು ಸುರಕ್ಷಿತವಾಗಿದೆ. ಪರಿಣಾಮ ನಾಲ್ಕು ಇವಿಎಂಗಳಲ್ಲಿ ಕಂಟ್ರೋಲ್ ಯೂನಿಟ್ ಅಥವಾ ಬ್ಯಾಲೆಟ್ ಯೂನಿಟ್‌ಗೆ ಹಾನಿಯಾಗಿದೆ.

ಘಟನೆಯಿಂದ ಇವಿಎಂಗಳಲ್ಲಿ ದಾಖಲಾದ ಮತ ಎಣಿಕೆಗಳ ಮೇಲೆ ಪರಿಣಾಮ ಬೀರಬಹುದೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾಧಿಕಾರಿ, ಈ ಕುರಿತು ಚುನಾವಣಾ ಆಯೋಗಕ್ಕೆ ತಮ್ಮ ವರದಿಯನ್ನು ಕಳಿಸಿಕೊಡಲಾಗುವುದು ಮತ್ತು ಹಾನಿಗೊಳಗಾದ ಮತಗಟ್ಟೆಗಳಲ್ಲಿ ಮರು ಮತದಾನದ ಬಗ್ಗೆ ಚುನಾವಣಾ ಸಂಸ್ಥೆ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಿದರು. ಬೇತುಲ್ ಲೋಕಸಭಾ ಶೇ.72.65ರಷ್ಟು ಮತದಾನವಾಗಿತ್ತು ಎಂದು ಚುನಾವಣಾ ಚುನಾವಣಾಧಿಕಾರಿಯೊಬ್ಬರು ತಿಳಿಸಿದ್ದಾರೆ