ಚಾಮರಾಜಪೇಟೆಯಲ್ಲಿ ವೈಭವದ ಕನ್ನಡ ರಾಜ್ಯೋತ್ಸವ: ಗಮನ ಸೆಳೆದ ಹುಲಿವೇಷ, 800 ಕ್ಕೂ ಅಧಿಕ ಕಲಾವಿದರು ಭಾಗಿ
ಬೆಂಗಳೂರು : ಚಾಮರಾಜಪೇಟೆ ನಾಡಹಬ್ಬ ಕನ್ನಡ ರಾಜ್ಯೋತ್ಸವ ಸಮಿತಿಯಿಂದ 69 ನೇ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಸಾಮಾಜ ಸೇವರು, ಮಾಜಿ ಪಾಲಿಕೆ ಸದಸ್ಯರಾದ ಚಂದ್ರಶೇಖರ್ ಅಪ್ಪೋಡು ನೇತೃತ್ವದಲ್ಲಿ ಕನ್ನಡದ ಕಹಳೆ ಮೊಳಗಿತು. ಕೋಕಿಲಾ ಚಂದ್ರಶೇಖರ್ ಧ್ವಜಾರೋಹಣ ಮಾಡಿದರು. ಬೆಂಗಳೂರು ಕೇಂದ್ರ ಯುವ ಕಾಂಗ್ರೆಸ್ ಘಟಕದ ಪ್ರಧಾನ ಕಾರ್ಯದರ್ಶಿ ಸಿ. ರಾಜೀವ್ ನೇತೃತ್ವದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು.
ಚಿಕ್ಕಪೇಟೆ ಕ್ಷೇತ್ರದ ಮಾಜಿ ಶಾಸಕರಾದ ಆರ್.ವಿ. ದೇವರಾಜ್, ರಾಜಹನ್ಸ್ ಮುದ್ರಣಾಲಯದ ಮಾಲೀಕರಾದ ಬಾಲಚಂದ್ರ, ಮಹಾವೀರ್ ಸೇಲ್ಸ್ ಕಾರ್ಪೊರೇಷನ್ ಮಾಲೀಕರಾದ ಬೆಹರುಲ್, ವಿನೋದ್ ಜೈನ್, ಮತ್ತಿತರರು ಭಾಗವಹಿಸಿದ್ದರು.
ನಾಗಮಂಗಲ ಮಹದೇವಪ್ಪನವರ ನೇತೃತ್ವದಲ್ಲಿ ವೀರಗಾಸೆ, ಪೂಜಾ ಕುಣಿತ, ಪಟದ ಕುಣಿತ, ಡೊಳ್ಳು ಕುಣಿತ, ದಕ್ಷಿಣ ಕನ್ನಡದ ಬಂಟ್ವಾಳದ ಚಿಲಿಪಿಲಿ ತಂಡ, ಹುಲಿವೇಷ ಹಾಗೂ ವಿವಿಧ ಜಾನಪದ ಪ್ರಕಾರಗಳ 800 ಮಂದಿ ಕಲಾವಿದರು ಚಾಮರಾಜಪೇಟೆಯಲ್ಲಿ ಕನ್ನಡ ಕಲೆ, ಸಂಸ್ಕೃತಿಯನ್ನು ಅನಾವರಣಗೊಳಿಸಿದರು. ಕಲಾ ತಂಡಗಳು ಮೆರವಣಿಗೆ ಮೂಲಕ ಕನ್ನಡ ಭಾಷೆ, ಸಂಸ್ಕೃತಿಯನ್ನು ಅನಾಚರಣ ಗೊಳಿಸಿದವು.