ಸ್ವಸ್ಥ ಕರ್ನಾಟಕ ಮೆಗಾ ಹೆಲ್ತ್ ಎಕ್ಸ್ಪೋ ಕಾರ್ಯಕ್ರಮಕ್ಕೆ ಸಚಿವ ದಿನೇಶ್ ಗುಂಡೂರಾವ್ ರವರು ಚಾಲನೆ

Minister Dinesh Gundurao inaugurated the Swasta Karnataka Mega Health Expo program

ಸ್ವಸ್ಥ ಕರ್ನಾಟಕ ಮೆಗಾ ಹೆಲ್ತ್ ಎಕ್ಸ್ಪೋ ಕಾರ್ಯಕ್ರಮಕ್ಕೆ ಸಚಿವ ದಿನೇಶ್ ಗುಂಡೂರಾವ್ ರವರು ಚಾಲನೆ
ಜಾಹೀರಾತಿಗಾಗಿ ಸಂಪರ್ಕಿಸಿ 6362546216

ಬೆಂಗಳೂರು : ನಗರದ ಅರಮನೆ ಮೈದಾನದಲ್ಲಿ ಪ್ರತಿಧೀ ಫೌಂಡೇಶನ್ ಆಯೋಜಿಸಿರುವ ಎರಡು ದಿನಗಳ ಸ್ವಸ್ಥ ಕರ್ನಾಟಕ ಮೆಗಾ ಹೆಲ್ತ್ ಎಕ್ಸ್ಪೋ ಕಾರ್ಯಕ್ರಮಕ್ಕೆ ಸಚಿವ ದಿನೇಶ್ ಗುಂಡೂರಾವ್ ರವರು ಚಾಲನೆ ನೀಡಿದರು.

 ಈ ವೇಳೆ ಸಚಿವ ದಿನೇಶ್ ಗುಂಡೂರಾವ್ ರವರು ಮಾತನಾಡಿ ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವವರು ತಮ್ಮ ಕೆಲಸದ ಜೊತೆಗೆ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಸಮಾಜಕ್ಕೆ ಏನಾದರೂ ಸೇವೆ ನೀಡಬೇಕು ಎಂದುಕೊಂಡಾಗ ಇಂತಹ ಫೌಂಡೇಶನ್‌ಗಳು ರಚನೆಯಾಗುತ್ತವೆ. 

ಸಾರ್ವಜನಿಕರಿಗೆ ನೆರವಾಗುವ ನಿಟ್ಟಿನಲ್ಲಿ ಅತ್ಯುತ್ತಮ ಆಸ್ಪತ್ರೆಗಳನ್ನು ಒಂದೆಡೆ ಸೇರಿಸಿ ಪ್ರತಿಧೀ ಫೌಂಡೇಶನ್‌ ಆಯೋಜಿಸಿರುವ ಈ ಬೃಹತ್‌ ಹೆಲ್ತ್‌ ಎಕ್ಸ್ಫೋ ಸಾವಿರಾರು ಜನರಿಗೆ ನೆರವಾಗಲಿ ಎಂದು ಆಶಿಸುತ್ತೇನೆ ಎಂದರು.