ಸಿದ್ದರಾಮಯ್ಯನವರೇ ಹುಷಾರ್ ಡಿಕೆಶಿ ಬಳಿ ಸಿಡಿ ವಿಶ್ವವಿದ್ಯಾಲಯವಿದೆ: ರಾಜು ಗೌಡ

ಸಿದ್ದರಾಮಯ್ಯನವರೇ ಹುಷಾರ್ ಡಿಕೆಶಿ ಬಳಿ ಸಿಡಿ ವಿಶ್ವವಿದ್ಯಾಲಯವಿದೆ: ರಾಜು ಗೌಡ
ಜಾಹೀರಾತಿಗಾಗಿ ಸಂಪರ್ಕಿಸಿ 6362546216

ಸುರಪುರ: ಡಿ.ಕೆ. ಶಿವಕುಮಾರ್ ಪೆನ್ ಡ್ರೈವ್, ಸಿಡಿ ವಿಶ್ವವಿದ್ಯಾಲಯ ತೆರೆದಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆಗೆ ಎದುರಾಳಿಗಳನ್ನು ಹೇಗೆ ಬಗ್ಗು ಬಡಿಯಬೇಕು ಎಂದು ಗೊತ್ತಿದೆ. ಕೆಲವರಿಗೆ ಬೆದರಿಕೆಯ ಅಸ್ತ್ರ, ಕೆಲವರಿಗೆ ಸಿಡಿ ಅಸ್ತ್ರ ಬಳಸುತ್ತಾರೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಸುರಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜು ಗೌಡ ವಾಗ್ದಾಳಿ ನಡೆಸಿದ್ದಾರೆ.

ಯಾದಗಿರಿ ಜಿಲ್ಲೆಯ ಹುಣಸಗಿ ಪಟ್ಟಣದಲ್ಲಿ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಹೀಗೆ ಮಾಡಿ ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರ ಸಿಡಿ ತಯಾರಿಸಿಕೊಂಡು ಮನೆಗೆ ಕಳುಹಿಸಿದರು. ಸಮಯ ಬಂದಾಗ ಎದುರಾಳಿಗೆ ಏನು ಕೊಡಬೇಕು ಅದನ್ನು ಕೊಡುತ್ತಾರೆ. ಈಗ ಪ್ರಜ್ವಲ್, ರಮೇಶ್ ಜಾರಕಿಹೊಳಿ ವಿರುದ್ಧ ಸಿಡಿ ಅಸ್ತ್ರ ಪ್ರಯೋಗಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಡಿಕೆ ಶಿವಕುಮಾರ ಸಿಡಿ ಮಾಡೋದ್ರಲ್ಲಿ ಎಕ್ಸ್‌ಪರ್ಟ್ ಇಂತಹವರನ್ನು ಪಕ್ಕದಲ್ಲಿ ಕರೆದುಕೊಂಡು ಓಡಾಡಬೇಡಿ ಸಿದ್ದರಾಮಯ್ಯ ನೀವು ಹುಷಾರಾಗಿರಿ ಡಿ.ಕೆ. ಶಿವಕುಮಾರ್ ವಿರುದ್ಧ ರಾಜು ಗೌಡ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಡಿಕೆಶಿ ಅಣ್ಣನಿಗೆ ಸಿಎಂ ಆಗಬೇಕಿದೆ. ಡಿ.ಕೆ. ಶಿವಕುಮಾರ್ ಗೆ ನಿಮ್ಮ ಕುರ್ಚಿಯ ಮೇಲೆ ಕಣ್ಣು ಇದೆ. ಮುಖ್ಯಮಂತ್ರಿ ಆಗಲು ಸಿದ್ದರಾಮಯ್ಯನವರನ್ನು ಕುರ್ಚಿಯಿಂದ ಇಳಿಸಬೇಕು. ಹೀಗಾಗಿ ಡಿಕೆ ಏನು ಬೇಕಾದರೂ ಮಾಡೋಕೆ ಸಿದ್ದರಿದ್ದಾರೆ. ಬೇಕಾದ್ರೆ ಯತೀಂದ್ರ ಅವರದ್ದು ಒಂದು ಸಿಡಿ ಬಿಡುತ್ತಾರೆ. ಭ್ರಷ್ಟಾಚಾರದ್ದೋ ಅಥವಾ ಇನ್ಯಾವುದೋ ಒಂದು ಸಿಡಿ ಬಿಡುತ್ತಾರೆ ಎಂದು ಹೇಳಿದ್ದಾರೆ.