ಆಗಸ್ಟ್ 4ರಂದು ಲಾಲ್ ಬಾಗ್ ಆವರಣದಲ್ಲಿ 79ನೇ ಇಪಿಎಸ್ ಪಿಂಚಣಿದಾರರ ಮಾಸಿಕ ಸಭೆ
79th EPS Pensioners Monthly Meeting at Lal Bagh on 4th August
ಬೆಂಗಳೂರು: ಆಗಸ್ಟ್ 04, 2024 ರ ಭಾನುವಾರದಂದು ಲಾಲ್ ಬಾಗ್ ಆವರಣದಲ್ಲಿ 79ನೇ ಇಪಿಎಸ್ ಪಿಂಚಿಣಿದಾರರ ಮಾಸಿಕ ಸಭೆ ಜರುಗಲಿದೆ ಎಂದು ಬಿಎಂಟಿಸಿ & ಕೆಎಸ್‌ಆರ್‌ಟಿಸಿ ನಿವೃತ್ತ ನೌಕರರ ಸಂಘಟನೆಯ ಕಾರ್ಯಾಧ್ಯಕ್ಷರಾದ ನಂಜುಂಡೇಗೌಡ ರವರು ತಿಳಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು ರಾಷ್ಟ್ರೀಯ ಸಂಘರ್ಷ ಸಮಿತಿ ಅಧ್ಯಕ್ಷರಾದ ಕಮಾಂಡರ್ ಶ್ರೀ ಅಶೋಕ್ ರಾವತ್ ರವರ ನೇತೃತ್ವದಲ್ಲಿ ಜುಲೈ 31 ಮತ್ತು ಆಗಸ್ಟ್ ಒಂದರಂದು ನವದೆಹಲಿಯ ಜಂತರ್ ಮಂತರ್ ನಲ್ಲಿ ಬೃಹತ್ ಪ್ರತಿಭಟನಾ ಸಭೆ ಜರುಗಿದ್ದು, ಈ ಸಭೆಗೆ ದೇಶಾದ್ಯಂತ ಇರುವ ಈಪಿಎಸ್ ಪಿಂಚಣಿದಾರರು ಆಗಮಿಸಿ, ಭಾಗವಹಿಸಿದ್ದನ್ನು ತಾವೆಲ್ಲರೂ ದೃಶ್ಯ ಮಾಧ್ಯಮಗಳಲ್ಲಿ ವೀಕ್ಷಿಸಿರುತ್ತೀರಿ. ಈ ಹಿಂದೆ ನಡೆದ ಹೋರಾಟಕ್ಕೂ ನೆನ್ನೆ ನಡೆದ ಹೋರಾಟಕ್ಕೂ ಅಜಗಜಾಂತರ ವ್ಯತ್ಯಾಸವಿರುವುದನ್ನು ತಾವು ಸಹ ಗಮನಿಸಿದ್ದೀರಿ. ಈ ಪ್ರತಿಭಟನಾ ಸಭೆಗೆ ದೇಶದ ವಿವಿಧ ಭಾಗಗಳಿಂದ ಸಾವಿರಾರು ನಿವೃತ್ತರು ಆಗಮಿಸಿದ್ದು, ಅವರ ಆಕ್ರೋಶದ (akroshada) ಕಟ್ಟೆ ಒಡೆದಿತ್ತು. ನಿವೃತ್ತರ ಜೇಂಕಾರದ ಘೋಷಣೆ, ಜಂತರ್ ಮಂತರ್ ಆವರಣದಲ್ಲಿ ಮಾರ್ಧನಿಸಿತು. ಪ್ರತಿಭಟನಾ ಸಭೆಗೆ ಸುಮಾರು 11 ಜನ ವಿವಿಧ ಪಕ್ಷಗಳ ಸಂಸದರು ಪಕ್ಷ ಭೇದ ಮರೆತು ಸಭೆಯಲ್ಲಿ ಭಾಗವಹಿಸಿ, ಮಾತನಾಡಿರುವುದು ಈಪಿಎಸ್ ನಿವೃತ್ತರಲ್ಲಿ ಸಂತಸ ಮೂಡಿಸಿದೆ. ಹಿಂದಿನ ಭರವಸೆಗಳೆಲ್ಲ ಫೋಳ್ಳಾಗಿದ್ದು, ಈಗಾಗಲೇ ಭರವಸೆ ನೀಡಿದ್ದವರ ಅರ್ಧ ಅಧಿಕಾರ ಹೋಗಿದ್ದು, ಮತ್ತೆ ನಮ್ಮನ್ನು ನಿರ್ಲಕ್ಷಿಸಿದರೆ, ಇದೇ 2024 ರಲ್ಲಿ ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆ ನಡೆಯಲಿದ್ದು, ಇವರು ತಮ್ಮ ಪೂರ್ಣ ಅಧಿಕಾರವನ್ನು ಕಳೆದುಕೊಳ್ಳಬೇಕಾಗುತ್ತದೆ. ಈ ಪ್ರತಿಭಟನಾ ಸಭೆಯಲ್ಲಿ ನಾಲ್ಕು ರಾಜ್ಯಗಳಿಂದ ಆಗಮಿಸಿದ್ದ ನಿವೃತ್ತರು ವೇದಿಕೆಯಲ್ಲಿ ಶಾಪತ ಮಾಡಿದ್ದು, ಈಗಾಗಲೇ ಕೇಂದ್ರ ಸರ್ಕಾರಕ್ಕೆ ಈ ಸಂದೇಶ ರವಾನೆಯಾಗಿದೆ.
ನವದೆಹಲಿಯ ಜಂತರ್ ಮಂತರ್ ನಲ್ಲಿ ನಡೆದ ಪ್ರತಿಭಟನೆಯ ಸಂಪೂರ್ಣ ವಿವರವನ್ನು ಈ ಮಾಸಿಕ ಸಭೆಯಲ್ಲಿ ಚರ್ಚಿಸಲಾಗುವುದು. ಮಾತ್ರವಲ್ಲದೆ ಕನಿಷ್ಠ ಪಿಂಚಣಿ ಹಾಗೂ ಹೆಚ್ಚುವರಿ ಪಿಂಚಣಿ ಈ ಎರಡು ಅಂಶಗಳ ಬಗ್ಗೆ ವಿವರವನ್ನು ನೀಡಲಾಗುವುದು. ಎನ್ಎಸಿ ಮುಖ್ಯ ಸಂಯೋಜಕರಾದ ಶ್ರೀ ರಮಾಕಾಂತ್ ನರಗುಂದ ಹಾಗು ಶ್ರೀ ಜಿಎಸ್‌ಎಮ್ ಸ್ವಾಮಿರವರು ಇಪಿಎಸ್ ನಿವೃತ್ತರ ಮುಂದಿನ ಹೋರಾಟದ ರೂಪುರೇಷೆ ಬಗ್ಗೆ ತಿಳಿಸಲಿದ್ದಾರೆ.
ತಾವೆಲ್ಲರೂ ವಿಶ್ವ ಪಾರಂಪರಿಕ ಲಾಲ್ ಬಾಗ್ ಹೂತೋಟದಲ್ಲಿ ವಾಯು ವಿಹಾರ ನಡೆಸಿ, ತಮ್ಮ ಹಳೆಯ ಸ್ನೇಹಿತರ ಭೇಟಿ, ವಿಚಾರ ವಿನಿಮಯ ಹಾಗೂ ಈ ಮೇಲ್ಕಂಡ ಎಲ್ಲಾ ಅಂಶಗಳ ಬಗ್ಗೆ ಚರ್ಚಿಸೋಣ. ಎಲ್ಲ ನಿವೃತ್ತ ನೌಕರರು ದಿನಾಂಕ 04/08/2024 ರಂದು ಬೆಳಗ್ಗೆ 08:00 ಗಂಟೆಗೆ ಹಾಜರಾಗಿ ಭಾಗವಹಿಸಬೇಕೆಂದು ವಿನಂತಿಸಿಕೊಂಡಿದ್ದಾರೆ.