ದೇಶದ ಜ್ವಲಂತ ಸಮಸ್ಯೆ ನಿರುದ್ಯೋಗ ಯುವಕ/ಯುವತಿಯರಿಗೆ ಉದ್ಯೋಗ ಸಿಗಬೇಕು ನಿರುದ್ಯೋಗ ನಿವಾರಣೆಯಾಗಬೇಕು- ಎನ್.ಆರ್.ರಮೇಶ್

The problem of the country is unemployment, youth/women should get jobs, unemployment should be eliminated - N.R.Ramesh

ದೇಶದ ಜ್ವಲಂತ ಸಮಸ್ಯೆ ನಿರುದ್ಯೋಗ ಯುವಕ/ಯುವತಿಯರಿಗೆ ಉದ್ಯೋಗ ಸಿಗಬೇಕು ನಿರುದ್ಯೋಗ ನಿವಾರಣೆಯಾಗಬೇಕು- ಎನ್.ಆರ್.ರಮೇಶ್
ಜಾಹೀರಾತಿಗಾಗಿ ಸಂಪರ್ಕಿಸಿ 6362546216

ಬೆಂಗಳೂರು: ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ಆಡಳಿತ ಪಕ್ಷದ ಮಾಜಿ ನಾಯಕರು, ಭ್ರಷ್ಟಾಚಾರ ವಿರೋಧಿ ವೇದಿಕೆ(ರಿ) ಅಧ್ಯಕ್ಷರಾದ ಎನ್.ಆರ್.ರಮೇಶ್ ರವರು ಎಮ್.ಎಲ್.ಆರ್ ಫ್ಯಾಮಿಲಿ ಸಹಯೋಗದಲ್ಲಿ ಆಗಸ್ಟ್ 17ರಂದು ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ ಇದರ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದರು.

ಎನ್.ಆರ್.ರಮೇಶ್ ರವರು ಮಾತನಾಡಿ ನಮ್ಮ ದೇಶದಲ್ಲಿ ಹೆಚ್ಚಾಗಿ ಕಾಡುತ್ತಿರುವ ಜ್ವಲಂತ ಸಮಸ್ಯೆ ನಿರುದ್ಯೋಗ. ನಿರುದ್ಯೋಗ ಸಮಸ್ಯೆ ಸಣ್ಣ ಪ್ರಮಾಣದಲ್ಲಿಯಾದರು ಬಗೆಹರಿಸಬೇಕು ಎಂದ ಉದ್ದೇಶದಿಂದ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ.

ನಮ್ಮ ಸುತ್ತಮುತ್ತಲಿನ ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶ ಸಿಗಬೇಕು ಎಂದು, ರಾಜಕೀಯ ಕ್ಷೇತ್ರ ಹೊರತುಪಡಿಸಿ ಎಂ.ಎಲ್.ಆರ್. ಫ್ಯಾಮಿಲಿ ವತಿಯಿಂದ ಉದ್ಯೋಗ ಮೇಳ ಆಯೋಜಿಸಲಾಗಿದೆ.

ಎಸ್.ಎಸ್.ಎಲ್.ಸಿ ಮತ್ತತು ದ್ವಿತೀಯ ಪಿಯಸಿ , ಪದವಿ, ಸ್ನಾತಕೋತ್ತರ ಪದವಿ ಉತ್ತೀರ್ಣ ಮತ್ತು ಅನುತ್ತೀರ್ಣರಾಗಿರುವ ಐ.ಟಿ.ಐ.ಮತ್ತು ಡಿಪ್ಲೊಮ ವ್ಯಾಸಂಗ , ಇಂಜನಿಯರ್ ಪದವಿ ವ್ಯಾಸಂಗ ಪೊರೈಸಿರುವ ಯುವಕ/ ಯುವತಿಯರಿಗೆ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದು.

ಉದ್ಯೋಗ ಮೇಳದಲ್ಲಿ ನೋಂದಾಣಿಗಾಗಿ ಪ್ರವೇಶ ಶುಲ್ಕವಿಲ್ಲ ಸಂಪೂರ್ಣ ಉಚಿತವಾಗಿರುತ್ತದೆ. 100ಕ್ಕೂ ಹೆಚ್ಚು ಪ್ರತಿಷ್ಟಿತ ಸಂಸ್ಥೆಗಳು ಭಾಗವಹಿಸಲಿದೆ ಮತ್ತು 3000ಸಾವಿರಕ್ಕೂ ಹೆಚ್ಚು ಯುವಕ/ಯುವತಿಯಿಗೆ ಸ್ಥಳದಲ್ಲಿಯೆ ಉದ್ಯೋಗ ಲಭ್ಯತೆಯಾಗಲಿದೆ.

ವಿಕಲಚೇತರಿಗೆ ಮತ್ತು ಅಂಧರು, ಭಾಗಶಃ ಅಂಧರಿಗೆ ಉದ್ಯೋಗ ಮೇಳದಲ್ಲಿ ಉದ್ಯೋಗಕ್ಕಾಗಿ ಉದ್ಯೋಗಕ್ಕಾಗಿ ಮೇಳ ಭಾಗವಹಿಸಬಹುದು. ಸರ್ಕಾರದ ಯೋಜನೆಗಳಲ್ಲಿ ಸ್ವಯಂ ಉದ್ಯೋಗ, ಸಾಲಸೌಲಭ್ಯಗಳಿಗೆ ಅರ್ಜಿ ಸಲ್ಲಿಸುವವರಿಗೆ ಸಮರ್ಪಕವಾಗಿ ಮಾಹಿತಿ ನೀಡಿ ಯೋಜನೆಯ ಲಾಭ ಸಿಗುವಂತೆ ತಜ್ಞರಿಂದ ಮಾರ್ಗದರ್ಶನ.

ದಿನಾಂಕ ಆಗಸ್ಟ್ 17ನೇ ಬೆಳಗ್ಗೆ 10ಗಂಟೆಗೆ ಪದ್ಮನಾಭನಗರ ದೇವೇಗೌಡ ಪೆಟ್ರೋಲ್ ಬಂಕ್ ಸಮೀಪ, ಕಾರ್ಮಲ್ ಶಾಲೆಯ ಪಕ್ಕದ ಪುಟ್ಟಲಿಂಗಯ್ಯ ಆಟದ ಮೈದನಾದಲ್ಲಿ ಉದ್ಘಾಟನೆಯನ್ನು ಇನ್ ಪೋಸಿಸ್ ಸಂಸ್ಥಾಪಕಿ ಶ್ರೀಮತಿ ಸುಧಾಮೂರ್ತಿ, ನಿರ್ಮಾಪಕಿ ಶ್ರೀಮತಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಉದ್ಘಾಟಿಸಲಿದ್ದಾರೆ. ಸ್ನೇಹ ಮನೋಭಾವನೆಯಿಂದ ಉದ್ಯೋಗ ಮೇಳ ಆಯೋಜಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಮೊಬೈಲ್: 9844159891/ 9108636275/ 990227401 ದಿನಾಂಕ ಆಗಸ್ಟ್ 10ನೇ ತಾರೀಖು ನೋಂದಾವಣೆಗೆ ಕೊನೆಯ ದಿನವಾಗಿದೆ.