ಶಂಕರ ಸೇವಾ ಸಮಿತಿ: ನಾಡಿನಲ್ಲಿ ಉತ್ತಮ ಮಳೆಗಾಗಿ ಗಾಯಿತ್ರಿ ಹೋಮ, ಪರ್ಜನ್ಯ ಹೋಮ

ಶಂಕರ ಸೇವಾ ಸಮಿತಿ: ನಾಡಿನಲ್ಲಿ ಉತ್ತಮ ಮಳೆಗಾಗಿ ಗಾಯಿತ್ರಿ ಹೋಮ, ಪರ್ಜನ್ಯ ಹೋಮ
ಜಾಹೀರಾತಿಗಾಗಿ ಸಂಪರ್ಕಿಸಿ 6362546216

ಬೆಂಗಳೂರು: ಶಂಕರ ಸೇವಾ ಸಮಿತಿ ಆಶ್ರಯದಲ್ಲಿ ಶ್ರೀ ಶಂಕರ ಜಯಂತಿ ಮಹೋತ್ಸವ ಮತ್ತು ಲೋಕಕಲ್ಯಾರ್ಣಾರ್ಥಕ್ಕಾಗಿ ಮಳೆಗಾಗಿ ಶ್ರೀ ಗಾಯಿತ್ರಿ ಹೋಮ, ಪರ್ಜನ್ಯ ಹೋಮ, ಪರ್ಜನ್ಯ ಜಪ ಕಾರ್ಯಕ್ರಮ. ಶಂಕರ ಸೇವಾ ಸಮಿತಿ ಅಧ್ಯಕ್ಷರಾದ ಆರ್.ಲಕ್ಷ್ಮಿಕಾಂತ್ ರವರು, ಕಾರ್ಯದರ್ಶಿ ರಾಮ್ ಪ್ರಸಾದ್ ಮತ್ತು ವೇದ ಬ್ರಹ್ಮ ತೇಜಸ್ವಿ ಭಾರದ್ವಾಜ್ ರವರ ನೇತೃತ್ವದಲ್ಲಿ ಹೋಮಕ್ಕೆ ಚಾಲನೆ ನೀಡಲಾಯಿತು.

ಶಂಕರಚಾರ್ಯರು ಜನ್ಮ ದಿನದ ಪ್ರಯುಕ್ತ ಶ್ರೀಶಂಕರ ಸೇವಾ ಸಮಿತಿಯಲ್ಲಿ ನಾಡಿನ ಒಳಿತಿಗಾಗಿ ಗಾಯಿತ್ರಿ ಹೋಮ ಪರ್ಜನ್ಯ ಹೋಮ ಆಯೋಜಿಸಲಾಗಿದೆ. ಶಂಕರಚಾರ್ಯರು ಭಾರತ ಕಂಡ ಶೇಷ್ಠ ದಾರ್ಶನಿಕರು. ಅದಿ ಶಂಕರಚಾರ್ಯರು ಕಾಲ್ನಿಡಿಗೆಯಲ್ಲಿ ದೇಶಾದ್ಯಂತ ಸನಾತನ ಧರ್ಮ ಉಳಿವಿಗಾಗಿ ಸಂಚಾರಿಸಿದರು. ಗಾಯಿತ್ರಿ ಹೋಮದಿಂದ ಮನುಷ್ಯನಲ್ಲಿ ಸುಖ,ಶಾಂತಿ ಮತ್ತು ನೆಮ್ಮದ್ದಿ ಲಭಿಸುತ್ತದೆ. ನಾಡಿನಲ್ಲಿ ಬಿಸಿಲಿನ ತಾಪದಿಂದ ಜನರು ಪರಿತಪ್ಪಿಸುತ್ತಿದ್ದಾರೆ. 

 Advertisement

ಜಾಹೀರಾತಿಗಾಗಿ ಸಂಪರ್ಕಿಸಿ 6362546216

ಪರ್ಜನ್ಯ ಹೋಮದಿಂದ ಸಕಾಲಕ್ಕೆ ಮಳೆಯಾಗಿ, ರೈತರಿಗೆ ಉತ್ತಮ ಬೆಳೆಯಾಗುತ್ತದೆ. ರೈತ ಸುಭೀಕ್ಷೆಯಾಗಿದ್ದಾರೆ, ದೇಶ ಸುಭದ್ರವಾಗಿರುತ್ತದೆ. ಆಹಾರ, ನೀರು ಇಲ್ಲದೇ ಬದುಕು ಸಾಧ್ಯವಿಲ್ಲ. ಜನರ ಸಂಕಷ್ಟಗಳು ನಿವಾರಣೆಯಾಗಲಿ ನಾಡಿನಲ್ಲಿ ಎಲ್ಲರಿಗೂ ಸುಖ, ಶಾಂತಿ ಸಿಗಲಿ ಎಂದು ಶಂಕರ ಸೇವಾ ಸಮಿತಿಯಲ್ಲಿ ಗಾಯಿತ್ರಿಹೋಮ, ಪರ್ಜನ್ಯ ಹೋಮ ನರವೆರಿಸಲಾಗುತ್ತಿದೆ ಎಂದು ಸಮಿತಿ ಹೇಳಿದರು.

ಶಂಕರ ಸೇವಾ ಸಮಿತಿ ಪದಾಧಿಕಾರಿಗಳಾದ ಹೆಚ್.ಕೆ.ನಾಗಭೂಷಣ್, ಕೆ.ಎಸ್.ಅಶೋಕ್ ಕುಮಾರ್, ಹೆಚ್.ಎಂ.ಹರಿಪ್ರಸಾದ್, ಕೆ.ಎಸ್.ನಾಗೇಂದ್ರಕುಮಾರ್, ಕೆ.ಎನ್.ರಾಘವೇಂದ್ರ, ಎನ್.ಶ್ಯಾಮ್ ಪ್ರಸಾದ್ ಮತ್ತು ನೂರಾರು ಭಕ್ತಾಧಿಗಳು ಹೋಮದಲ್ಲಿ ಪಾಲ್ಗೊಂಡಿದ್ದರು.