ಕಲಬುರ್ಗಿ ಟ್ರಿಪಲ್ ಅಭಿವೃದ್ದಿ ಕಾಣಲಿದೆ - ಸಚಿವ ಪ್ರಿಯಾಂಕ್ ಖರ್ಗೆ

ಕಲಬುರ್ಗಿ ಟ್ರಿಪಲ್ ಅಭಿವೃದ್ದಿ ಕಾಣಲಿದೆ - ಸಚಿವ ಪ್ರಿಯಾಂಕ್ ಖರ್ಗೆ
ಜಾಹೀರಾತಿಗಾಗಿ ಸಂಪರ್ಕಿಸಿ 6362546216

ಚಿತ್ತಾಪುರ: ವಿಧಾನಸಭೆಯಲ್ಲಿ ನಾನಿದ್ದೇನೆ, ರಾಜ್ಯಸಭೆಯಲ್ಲಿ ಖರ್ಗೆ ಸಾಹೇಬರು ಇದ್ದಾರೆ, ಇನ್ನೂ ಲೋಕಸಭೆ ಮಾತ್ರ ಖಾಲಿ ಇದೆ. ರಾಧಾಕೃಷ್ಣ ಅವರನ್ನು ನೀವು ಆರಿಸಿಕಳಿಸಿದರೆ ಟ್ರಿಪಲ್ ಅಭಿವೃದ್ಧಿಯಾಗಲಿದೆ ಎಂದು ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಚಿತ್ತಾಪುರ ಪಕ್ಷದ ಕಚೇರಿಯಲ್ಲಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು ರಾಧಾಕೃಷ್ಣ ಅವರು ಲೋಕಸಭೆಗೆ ನಿಲ್ಲುವ ಆಲೋಚನೆಯಲ್ಲಿ ಇರಲಿಲ್ಲ. ಆದರೆ, ಪಕ್ಷದ ನಾಯಕರು ಒತ್ತಾಯದಿಂದ ಚುನಾವಣೆಗೆ ನಿಂತಿದ್ದಾರೆ. ಇಷ್ಟುದಿನ ತೆರೆಮರೆಯಲ್ಲಿ ಕೆಲಸ ಮಾಡಿದ್ದ ಅವ್ರು ಈಗ ನೇರವಾಗಿ ಚುನಾವಣೆಗೆ ಬಂದಿದ್ದಾರೆ. ಅವರನ್ನು ಆರಿಸಿ ಕಲಿಸುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದರು.

ಒಂದೇ ಮನೆಯಲ್ಲಿ ಮೂರು ಜನರಿಗೆ ಸೇವೆ ಮಾಡುವ ಅವಕಾಶ ನೀಡಿದ್ದೀರಿ. ನಿಮ್ಮ ಋಣ ಯಾವ ರೀತಿ ತೀರಿಸಬೇಕು ಎಂದು ಗೊತ್ತಾಗುತ್ತಿಲ್ಲ. ಆದ್ರೆ, ನಾವೆಲ್ಲ ಸೇರಿ ನಿಮ್ಮ ಸೇವೆ ಮಾಡುತ್ತೇವೆ ಎಂದ್ರು. ಸಂಸದ ಉಮೇಶ್ ಜಾಧವ್ ಅವರು ರಾತ್ರೋ ರಾತ್ರಿ ಇಲ್ಲಿಗೆ ಬಂದು ರೇಲ್ವೆ ಬ್ರಿಜ್ ಉದ್ಧಾಟನೆ ಮಾಡಿದ್ದಾರೆ. ಖರ್ಗೆ ಸಾಹೇಬ್ರ ಫೋಟೋ ಕೂಡ ಹಾಕಿಲ್ಲ. ವಿರೋಧ್ ಪಕ್ಷದ ಅಧ್ಯಕ್ಷರಾದ ಅವರನ್ನು ಪ್ರೋಟೋಕಾಲ್ ಪ್ರಕಾರ ಅವರ ಫೋಟೋ ಹಾಕಲೇಬೇಕು ಆದ್ರೂ ಜಾಧವ ಇದನ್ನು ತಿಳಿದುಕೊಳ್ಳಲಿ ಎಂದು ತಿಳಿಸಿದರು. 13 ಕ್ಷೇತ್ರದಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಗಳು ಚುನಾವಣೆಗೆ ನಿಲ್ಲಲಿದ್ದಾರೆ ಎಂದ ಸಚಿವರು, ಕಾಂಗ್ರೆಸ್ ಪಕ್ಷ ಈ ಸಲ ಪರವಾದ ವಾತಾವರಣವಿದೆ. ಕಲಬುರ್ಗಿಯಲ್ಲಿ ರಾಧಾಕೃಷ್ಣ ಗೆಲ್ಲಲಿದ್ದಾರೆ ಎಂದ್ರು.

ಈ ಸಂದರ್ಭದಲ್ಲಿ ಭೀಮಣ್ಣ ಸಾಲಿ, ಮಹೇಮುದ ಸೆಟ್, ರಮೇಶ್ ಮರಾಗೊಳ್, ನಾಗರೆಡ್ಡಿ ಪಾಟೀಲ್ ಕರದಾಲ, ಶಿವರುದ್ರ ಭೇನಿ, ಜಗಣಗೌಡ ಪೊಲೀಸ್ ಪಾಟೀಲ್ ಸೇರಿದಂತೆ ಹಲವರಿದ್ದರು.