ವಿನೋದ್‌ ಅಸೂಟಿ ಪರ ಸಚಿವ ಸಂತೋಷ್‌ ಲಾಡ್‌ ಸಭೆ

ವಿನೋದ್‌ ಅಸೂಟಿ ಪರ ಸಚಿವ ಸಂತೋಷ್‌ ಲಾಡ್‌ ಸಭೆ
ಜಾಹೀರಾತಿಗಾಗಿ ಸಂಪರ್ಕಿಸಿ 6362546216

ಧಾರವಾಡ : ಧಾರವಾಡ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ವಿನೋದ್‌ ಅಸೂಟಿ ಅವರ ಪರವಾಗಿ ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್‌ ಲಾಡ್‌ ಅವರು ಹಲವು ಸಭೆಗಳನ್ನು ನಡೆಸಿದರು. 

ಧಾರವಾಡ ಜಿಲ್ಲೆಯ ಎಲ್ಲಾ ಬ್ಲಾಕ್‌ ಅಧ್ಯಕ್ಷರು (ನಗರ ಮತ್ತು ಗ್ರಾಮೀಣ), ಧಾರವಾಡ ಜಿಲ್ಲಾ ಗ್ರಾಮೀಣದ ಮಹಿಳಾ ಬ್ಲಾಕ್‌ ಅಧ್ಯಕ್ಷರು ಹಾಗೂ ಧಾರವಾಡದ ಮಹಿಳಾ ಬ್ಲಾಕ್‌ ಅಧ್ಯಕ್ಷರು (ನಗರ ಮತ್ತು ಗ್ರಾಮೀಣ) ಜೊತೆ ಸಭೆ ನಡೆಸಲಾಯಿತು. 

ಲೋಕಸಭಾ ಚುನಾವಣೆಯ ಕಾರ್ಯತಂತ್ರ, ಪ್ರಚಾರ, ಹಮ್ಮಿಕೊಳ್ಳಬಹುದಾದ ಕಾರ್ಯಕ್ರಮಗಳು ಮತ್ತಿತರ ವಿಷಯಗಳ ಕುರಿತು ಸಭೆಯಲ್ಲಿ ಚರ್ಚಿಸಿದರು. 

ಅಭ್ಯರ್ಥಿ ವಿನೋದ್‌ ಅಸೂಟಿ ಸೇರಿದಂತೆ ಹಲವಾರು ಮುಖಂಡರು ಈ ಸಭೆಗಳಲ್ಲಿ ಭಾಗವಹಿಸಿದ್ದರು.