ರಾಜಾಜಿನಗರ ವಿಧಾನಸಭಾ ಡೆಂಗ್ಯೂ ನಿಯಂತ್ರಣ ಬಿಬಿಎಂಪಿ ಅಧಿಕಾರಿಗಳ ಕ್ರಮಕ್ಕೆ ಎಸ್.ಸುರೇಶ್ ಕುಮಾರ್ ಪ್ರಶಂಸೆ
S. Suresh Kumar praises the action of BBMP officials in Rajajinagar assembly dengue control
ಬೆಂಗಳೂರು: ಬೇಸಿಗೆ ಬಿರು ಬಿಸಿಲು ಮುಕ್ತಯವಾಗಿ ಮಳೆಗಾಲ ಆರಂಭವಾಗಿದೆ , ಮಳೆ ನೀರು ಮತ್ತು ಮನೆಗಳಲ್ಲಿ ನೀರು ನಿಲ್ಲುವುದರಿಂದ ಸೊಳ್ಳೆಗಳ ಬೆಳವಣಿಗೆಗೆ ಸಹಕಾರಿಯಾಗಿದೆ. ಸ್ವಚ್ಚತೆ ಇಲ್ಲದೇ ಇರುವುದು ಮತ್ತು ಡ್ರಮ್, ನೀರು ತುಂಬಿದ ಬಿಂದಿಗೆ, ವಾಟರ್ ಸಂಪ್ ಗಳು ನೀರಿನ ಮೇಲೆ ಸೊಳ್ಳೆಗಳ ವಂಶಾಭಿವೃದ್ದಿಗೆ ಸಹಕಾರಿಯಾಗಿದೆ. ಈಜಿಪ್ಪೈ ಹೆಣ್ಣು ಸೊಳ್ಳೆ ಹಗಲು ಹೊತ್ತಿನಲ್ಲಿ ಕಚ್ಚುವುದರಿಂದ ಡೆಂಗ್ಯೂ ಜ್ವರ ಬರುತ್ತದೆ ರಕ್ತಕಣಗಳು ಕಡಿಮೆಯಾಗುತ್ತದೆ ಸೂಕ್ತ ಚಿಕಿತ್ಯೆ ಸಿಗದೇ ಇದ್ದರೆ ಪ್ರಾಣಪಾಯ ಸಂಭವಿಸುವ ಸಾಧ್ಯತೆ ಇರುತ್ತದೆ.
ಮಾಜಿ ಶಿಕ್ಷಣ ಸಚಿವರು, ಶಾಸಕರಾದ ಎಸ್.ಸುರೇಶ್ ಕುಮಾರ್ ರವರ ನೇತೃತ್ವದಲ್ಲಿ ಆರೋಗ್ಯ ಮುಖ್ಯಧಿಕಾರಿ ಡಾ||ರಾಮುರವರು, ಹೆಲ್ತ್ ಸೂಪರ್ ವೈಸರ್ ಸುಬ್ರಮಣ್ಯಪದಕಿ, ಸಿನೀಯರ್ ಹೆಲ್ತ್ ಇನ್ನ್ ಪೆಕ್ಟರ್ ಸಂಧ್ಯಾ, ಶ್ರೀ ರಾಮಮಂದಿರ ಸಬ್ ಡಿವಿಷನ್ ಹೆಲ್ತ್ ಇನ್ಸ್ ಪೆಕ್ಟರ್ ರಾಜೇಶ್ವರಿ, ಸಿನೀಯರ್ ಹೆಲ್ತ್ ಇನ್ನ್ ಪೆಕ್ಟರ್ ಶಿಲ್ಪರವರು ಸಿಬ್ಬಂದಿಗಳ ಡೆಂಗ್ಯೂ ಕಾರ್ಯಪಡೆ ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಆರಂಭಿಸಲಾಯಿತು.
ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಡೆಂಗ್ಯೂ_ನಿಯಂತ್ರಣ ಕುರಿತಂತೆ ಇದುವರೆಗೂ ಕೈಗೊಂಡಿರುವ ಕ್ರಮಗಳು:
1)ರಾಜಾಜಿನಗರ ಕ್ಷೇತ್ರದ ಡೆಂಗ್ಯೂ ನಿಯಂತ್ರಣ ಸಭೆಯನ್ನು ಆಯೋಜಿಸಿ, ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಕಾರ್ಯ_ಪಡೆ ರಚನೆ. 2) ಮನೆ ಮನೆ ಸಮೀಕ್ಷೆಯ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು. 3) ಹೆಚ್ಚಿನ ಅಪಾಯ ಎಂದೆನಿಸುವ ಪ್ರದೇಶಗಳಲ್ಲಿ ಇದುವರೆಗೂ 23160 ಮನೆಗಳನ್ನು ಭೇಟಿ ಮಾಡಿ, ನಾಗರಿಕರಲ್ಲಿ ಅರಿವನ್ನು ಮೂಡಿಸಲಾಗಿದೆ.
ಸುಮಾರು 40ಕ್ಕೂ ಹೆಚ್ಚಿನ ಶಾಲೆಗಳಲ್ಲಿ ಡೆಂಗ್ಯೂ ನಿಯಂತ್ರಣ ಅರಿವು ಕಾರ್ಯ ಮಾಡಲಾಗಿದೆ. ವಿದ್ಯಾರ್ಥಿಗಳ ಹಾಗೂ ನೆರೆಹೊರೆಯ ಮನೆಗಳ ಸಮೀಪದಲ್ಲಿ ಸೊಳ್ಳೆ ಉತ್ಪಾದನಾ ಮೂಲಗಳನ್ನು ಕಂಡುಹಿಡಿಯಲು ಮತ್ತು ನಿರ್ಮೂಲನ ಮಾಡಲು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲಾಗಿದೆ. ಮಕ್ಕಳಿಗೆ ಪ್ರಶಸ್ತಿಯನ್ನು ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಡೆಂಗ್ಯೂ_ವಾರಿಯರ್ಸ್ ಎಂಬ ಈ ಪ್ರಯತ್ನ ಫಲಪ್ರದವಾಗಿದೆ.
ಪ್ರಕರಣಗಳ ಆರಂಭಿಕ ಪತ್ತೆ - ನಮ್ಮ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬರುವ ರೋಗ ಲಕ್ಷಣದ ರೋಗಿಗಳನ್ನು ಡೆಂಗ್ಯೂ ಎನ್ಎಸ್ 1 ಪರೀಕ್ಷಿಸಲಾಗುತ್ತಿದೆ ಹಾಗೂ ಚಿಕಿತ್ಸೆ ನೀಡಲಾಗುತ್ತಿದೆ. ಖಾಸಗಿ ಆಸ್ಪತ್ರೆಯಲ್ಲಿ ಯಾವುದಾದರೂ ಪ್ರಕರಣ ದಾಖಲಾದರೆ ಆ ರೋಗಿಗಳ ಮನೆಗಳಿಗೆ ಭೇಟಿ ನೀಡಿ ನಿಯಂತ್ರಣ ಕ್ರಮಗಳನ್ನು ಅನುಸರಿಸಲಾಗುತ್ತಿದೆ. ನಿಗದಿತ ಪ್ರದೇಶಗಳಲ್ಲಿ ಮಳೆ ನೀರು ನಿಲ್ಲುವಂತಹ ಜಾಗಗಳಲ್ಲಿ ರಾಸಾಯನಿಕ ನಿಯಂತ್ರಣ ಸಿಂಪರಣೆ ನಿರಂತರವಾಗಿ ನಿಗದಿತವಾಗಿ ಮಾಡಲಾಗುತ್ತಿದೆ. ಈವರೆಗೆ ನಮ್ಮ ಕ್ಷೇತ್ರದಿಂದ ಆರು ಡೆಂಗ್ಯೂ ಪ್ರಕರಣಗಳು ದಾಖಲಾಗಿದ್ದು, ಆ ಆರೂ ಜನ ಗುಣಮುಖರಾಗಿದ್ದಾರೆ. ಡೆಂಗ್ಯೂ ನಿಯಂತ್ರಣ ಕ್ರಮಗಳ ಕಾಲಕಾಲಕ್ಕೆ ಪರಿಶೀಲನಾ ಸಭೆ.
ಈ ಕಾರ್ಯದಲ್ಲಿ ಸಾಮಾಜಿಕ ಕಾರ್ಯಕರ್ತರು ಕೈಜೋಡಿಸಲು ಮನವಿ. ಡೆಂಗ್ಯೂ ವಿರುದ್ದ ಸಮರ ಸಾರಿರುವ ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಶಾಸಕರು ಮತ್ತು ಬಿಬಿಎಂಪಿ ಅರೋಗ್ಯ ಅಧಿಕಾರಿ ಮತ್ತು ಸಿಬ್ಬಂದಿಗಳು ಕಾರ್ಯ ಶಾಘ್ರನೀಯ