ಕುಟುಂಬ ಸಮೇತರಾಗಿ ಹಾಸನಾಂಬೆ ದರ್ಶನ ಪಡೆದ ಕೇಂದ್ರ ಸಚಿವ ವಿ ಸೋಮಣ್ಣ
Union Minister V Somanna visited Hassanambe along with his family
ಹಾಸನ : ಕೇಂದ್ರ ಸಚಿವ ವಿ ಸೋಮಣ್ಣನವರು ಕುಟುಂಬ ಸದಸ್ಯರೊಂದಿಗೆ ಹಾಸನಾಂಬೆ ದೇವಸ್ಥಾನಕ್ಕೆ ಭೇಟಿ ನೀಡಿ, ತಾಯಿಗೆ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.
ಈ ವೇಳೆ ವಿ ಸೋಮಣ್ಣನವರು ಮಾತನಾಡಿ ಹಾಸನಾಂಬೆ ದೇವಸ್ಥಾನದ ಬಾಗಿಲು ವರ್ಷಕ್ಕೊಮ್ಮೆ ತೆರೆಯುವುದು ದೀಪಾವಳಿ ಸಂದರ್ಭದಲ್ಲಿ ಮಾತ್ರ. ಸಾವಿರಾರು ವರ್ಷಗಳ ಐತಿಹಾಸಿಕ ಹಿನ್ನೆಲೆಯುಳ್ಳ ಹಾಸನಾಂಬೆ ದೇವಿಯ ಆಶೀರ್ವಾದ ಸಿಕ್ಕಿರುವುದು ಸಂತಸ ತಂದಿದೆ. ಇಂದು ಕುಟುಂಬ ಸಮೇತ ಹಾಸನಾಂಬ ದೇವಾಲಯಕ್ಕೆ ಭೇಟಿ ನೀಡಿದ್ದು ಪುಣ್ಯ ತಂದಿದೆ. ದೈವಿಕ ತಾಯಿಗೆ ಪ್ರಾರ್ಥನೆ ಸಲ್ಲಿಸುವುದು ಮತ್ತು ತಾಯಿಯ ಆಶೀರ್ವಾದವನ್ನು ಪಡೆಯುವುದು ನಿಜವಾಗಿಯೂ ಆಧ್ಯಾತ್ಮಿಕ ಅನುಭವವಾಗಿದೆ. ದೀಪಾವಳಿಯ ಸಂದರ್ಭದಲ್ಲಿ ವರ್ಷಕ್ಕೊಮ್ಮೆ ತೆರೆದಿರುವ ದೇವಾಲಯವನ್ನು ವೀಕ್ಷಿಸಲು ಇದು ಅಪರೂಪದ ಅವಕಾಶವಾಗಿದೆ ಎಂದರು.