ಛಲವಾದಿ ನಾರಾಯಣಸ್ವಾಮಿ ಅತ್ಯಂತ ಪ್ರಾಮಾಣಿಕರಂತೆ ವರ್ತಿಸುತ್ತಾರೆ : ಎಸ್ ಮನೋಹರ್

Chalavadi Narayanaswamy behaves as very honest : S Manohar

ಛಲವಾದಿ ನಾರಾಯಣಸ್ವಾಮಿ ಅತ್ಯಂತ ಪ್ರಾಮಾಣಿಕರಂತೆ ವರ್ತಿಸುತ್ತಾರೆ : ಎಸ್ ಮನೋಹರ್
ಜಾಹೀರಾತಿಗಾಗಿ ಸಂಪರ್ಕಿಸಿ 6362546216

ಬೆಂಗಳೂರು : ಬೆಂಗಳೂರು ಕಾಂಗ್ರೆಸ್ ಪ್ರಚಾರ ಸಮಿತಿ ವತಿಯಿಂದ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಯಣಸ್ವಾಮಿ ರವರ ವಿರುದ್ಧ ವಿನೂತನ ಪ್ರತಿಭಟನೆ ನಡೆಸಲಾಯಿತು.

ಈ ವೇಳೆ  ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್ ಮನೋಹರ್ ರವರು ಮಾತನಾಡಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಯಣಸ್ವಾಮಿ ಅವರು 2002-2004ರಲ್ಲಿ KHB ನಿರ್ದೇಶಕರಾಗಿದ್ದ ಸಂದರ್ಭದಲ್ಲಿ ಶಿಕ್ಷಣ ಸಂಸ್ಥೆ ನಡೆಸುವುದಾಗಿ ಸುಮಾರು 25,000 ಅಡಿಗಳಷ್ಟು ಕಾನೂನು ಬಾಹಿರವಾಗಿ ಸಿಎ ನಿವೇಶನ ಮಂಜೂರಾತಿ ಮಾಡಿಸಿಕೊಂಡು ಈ ನಿವೇಶನದಲ್ಲಿ ಆನಂದ್ ಧಮ್ ಬಿರಿಯಾನಿ ನಡೆಸುತ್ತಿರುವುದು ನಿಜಕ್ಕೂ ಖಂಡನೀಯ. ಭಾರತೀಯ ಜನತಾ ಪಕ್ಷ ಈಗ ಬಿರಿಯಾನಿ ಜನತಾ ಪಾರ್ಟಿ ರೂಪಾಂತರಗೊಂಡಿದೆ,

ಛಲವಾದಿ ನಾರಾಯಣಸ್ವಾಮಿ ರವರು ಅತ್ಯಂತ ಪ್ರಾಮಾಣಿಕರಂತೆ ವರ್ತಿಸುತ್ತಾರೆ ಮತ್ತು ಹೇಳಿಕೆ ನೀಡುತ್ತಾರೆ ಆದರೆ ಅವರು 25,000 ಅಡಿಗಳಷ್ಟು ಭೂಮಿಯನ್ನ ಮಂಜೂರಾತಿ ಪಡೆದು ಈಗ ಅಲ್ಲಿ ವಾಣಿಜ್ಯ ಮಳಿಗೆ ಕಟ್ಟಡ ನಿರ್ಮಿಸಿ ಧಮ್ ಬಿರಿಯಾನಿ ವ್ಯಾಪಾರ ನಡೆಸಲು ಅನುಮತಿ ನೀಡಿದ್ದಾರೆ,

ಶಿಕ್ಷಣ ಸಂಸ್ಥೆಯ ಹೆಸರಿನಲ್ಲಿ ಜಾಗ ಪಡೆದು ಬಿರಿಯಾನಿ ವ್ಯಾಪಾರ ಮಾಡುವ ಛಲವಾದಿ ನಾರಾಯಣಸ್ವಾಮಿಗೆ ಕಾಂಗ್ರೆಸ್ ಪಕ್ಷದ ಬಗ್ಗೆ ಟೀಕಿಸುವ ನೈತಿಕತೆ ಇಲ್ಲ ಎಂಬುದು ಮನಗಂಡು ಕೂಡಲೇ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು,

ಕೆಐಎಡಿಬಿ ಮೂಲಕ ಮಂಜೂರಾತಿ ಪಡೆದು ಅಲ್ಲೂ ಸಹ ಸರ್ಕಾರಿ ಭೂಮಿಯನ್ನು ಪಡೆದಿದ್ದಾರೆ ಇವರು ಮಾತನಾಡುವುದನ್ನು ನೋಡಿದರೆ ಇವರು ನಿರ್ಗತಿಕರಂತೆ ಮಾತನಾಡುತ್ತಾರೆ ಆದರೆ ಅವರ ಆಸ್ತಿ ಮೌಲ್ಯವನ್ನು ಗಮನಿಸಿದಾಗ ಸರಕಾರದಿಂದ ಪಡೆದಿರುವ ಭೂಮಿಯ ಮೌಲ್ಯವನ್ನು ಮಾಹಿತಿಯನ್ನು ಅವರು ಬಹಿರಂಗಪಡಿಸಲಿ ಅಥವಾ ಅದನ್ನ ಅವರು ಬಡವರಿಗೆ ದಾನ ಮಾಡುತ್ತಾರೆಯೇ?
 ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾಗಿ ನೀಡುವ ಹೇಳಿಕೆಗೆ ಗಾಂಭೀರ್ಯತೆ ಇರಬೇಕು ಆದರೆ ಕೇವಲ ವಿರೋಧ ಮಾಡಿಕೊಂಡು ಸರ್ಕಾರವನ್ನು ಹಾಗೂ ಮುಖ್ಯಮಂತ್ರಿಯನ್ನು ಟೀಕಿಸುವ ಇವರು ನಿಜವಾದ ಭ್ರಷ್ಟರನ್ನು ಬೆಂಬಲಿಸುವವರು ಎಂಬುದು ಈಗ ಸಾಬೀತಾಗಿದೆ,

ದಮ್ ಬಿರಿಯಾನಿ ವ್ಯಾಪಾರಕ್ಕೆ ಅವಕಾಶ ಕಲ್ಪಿಸಿ ಕೊಟ್ಟಿರುವ ಬಿಜೆಪಿಯ ಬಿರಿಯಾನಿ ಪಕ್ಷದವರು ಇನ್ನ ಮುಂದೆ ಶಿಕ್ಷಣ ಸಂಸ್ಥೆಯಲ್ಲಿ ಜನರಿಗೆ ವಂಚಿಸಿರುವ ಪ್ರಕರಣಗಳು ಒಂದೊಂದೇ ಬೆಳಕಿಗೆ ಬರುತ್ತಿದ್ದು ಕೂಡಲೇ ಬಿಜೆಪಿಯವರು ತಾವು ಪಡೆದಿರುವ ಎಲ್ಲಾ ಭೂಮಿಯನ್ನು ಸರ್ಕಾರಕ್ಕೆ ಹಿಂದಕ್ಕೆ ನೀಡಬೇಕೆಂದು ಈ ಪ್ರತಿಭಟನೆ ಮೂಲಕ ಆಗ್ರಹಪಡಿಸಲಾಗುತ್ತಿದೆ ಎಂದರು.

ಈ ಪ್ರತಿಭಟನೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಎಂಇಐ ಅಧ್ಯಕ್ಷರಾದ ಎಸ್.ಮನೋಹರ್ , ಮುಖಂಡರುಗಳಾದ ಎ.ಆನಂದ್ , ಜಿ ಪ್ರಕಾಶ್, ಹೇಮರಾಜ್ , ಆನಂದ್ ಕುಮಾರ್, ಉಮೇಶ್, ಚಂದ್ರಶೇಖರ್, ಪುಟ್ಟರಾಜು ನವೀನ್ ಸಾಯಿ ರವಿಕುಮಾರ್ ಸೇರಿದಂತೆ ಹಲವರು ಭಾಗವಹಿಸಿದ್ದರು.