ಸೊನಾಲಿಕಾದಿಂದ ಟ್ರಾಕ್ಟರ್ ಉದ್ಯಮದ ಪ್ರಥಮ ಉಪಕ್ರಮ, ‘ಒಂದು ದೇಶ, ಒಂದು ಟ್ರಾಕ್ಟರ್ ಬೆಲೆ’ಗೆ ಚಾಲನೆ

ಸೊನಾಲಿಕಾದಿಂದ ಟ್ರಾಕ್ಟರ್ ಉದ್ಯಮದ ಪ್ರಥಮ ಉಪಕ್ರಮ, ‘ಒಂದು ದೇಶ, ಒಂದು ಟ್ರಾಕ್ಟರ್ ಬೆಲೆ’ಗೆ ಚಾಲನೆ
ಜಾಹೀರಾತಿಗಾಗಿ ಸಂಪರ್ಕಿಸಿ 6362546216

ಬೆಂಗಳೂರು: ಭಾರತದ ನಂ.1 ಟ್ರಾಕ್ಟರ್ ರಫ್ತು ಬ್ರಾಂಡ್ ಸೊನಾಲಿಕಾ ಟ್ರಾ‍ಕ್ಟರ್ಸ್ ಕೃಷಿ ಯಾಂತ್ರೀಕರಣದಲ್ಲಿ ಪರಿವರ್ತನೀಯ ಹೆಜ್ಜೆ ಇರಿಸಲು ಉತ್ಸುಕವಾಗಿದೆ ಮತ್ತು ತನ್ನ `ಒಂದು ದೇಶ, ಒಂದು ಟ್ರಾಕ್ಟರ್’ ಅನ್ನು ಒಂದೇ ಬೆಲೆಯಲ್ಲಿ ನೀಡುವ ಹೊಚ್ಚಹೊಸ ಉಪಕ್ರಮ ಪ್ರಾರಂಭಿಸಿದೆ. ತನ್ನ ಹೆವಿ-ಡ್ಯೂಟಿ ಟ್ರಾಕ್ಟರ್ ಶ್ರೇಣಿಯನ್ನು ವಿಸ್ತರಿಸುವ ನಿಟ್ಟಿನಲ್ಲಿ ಸೊನಾಲಿಕಾ ತನ್ನ ಹೊಚ್ಚಹೊಸ `ಸಿಕಂದರ್ ಡಿ.ಎಲ್.ಎಕ್ಸ್.ಡಿ.ಐ.60 ಟಾರ್ಕ್ ಪ್ಲಸ್ ಮಲ್ಟಿ-ಸ್ಪೀಡ್ ಟ್ರಾಕ್ಟರ್ ಅನ್ನು ಕಂಪನಿಯ ವಿಶೇಷ ಬೆಲೆ ರೂ.8,49,999(ಎಕ್ಸ್-ಶೋರೂಂ)ನಲ್ಲಿ ಬಿಡುಗಡೆ ಮಾಡಿದೆ. ಗಟ್ಟಿ ಮಣ್ಣಿನಲ್ಲೂ ಅಸಾಧಾರಣ ಕಾರ್ಯಕ್ಷಮತೆ ನೀಡಲು ಉನ್ನತ ಟಾರ್ಕ್ ಹೊಂದಿದ್ದು ಇದು ಅತ್ಯಂತ ದೊಡ್ಡ ಎಂಜಿನ್ ವಿಭಾಗದಲ್ಲಿ ಸೇರಿದೆ ಮತ್ತು ಜಮೀನಿನ/ ಜಮೀನಿನ ಆಚೆಗೂ 10 ಡಿಲಕ್ಸ್ ವಿಶೇಷತೆಗಳ ಮೂಲಕ ಕಠಿಣ ಕಾರ್ಯಕ್ಷಮತೆ ನೀಡುತ್ತದೆ. ಸೊನಾಲಿಕಾದ ಹೆವಿ ಡ್ಯೂಟಿ ಟ್ರಾಕ್ಟರ್ ‍ಶ್ರೇಣಿಗೆ ಹೊಚ್ಚಹೊಸ ಸೇರ್ಪಡೆಯಾಗಿದ್ದು ಪಂಜಾಬ್ ನ ಹೊಷಿಯಾರ್ ಪುರದ ವಿಶ್ವದ ನಂ.1 ಟ್ರಾಕ್ಟರ್ ಘಟಕದಿಂದ ಬಿಡುಗಡೆಯಾಗಲಿದೆ. 

 Advertisement

 

ಜಾಹೀರಾತಿಗಾಗಿ ಸಂಪರ್ಕಿಸಿ 6362546216

ಸೊನಾಲಿಕಾದ ಹೊಚ್ಚಹೊಸ ಸೇರ್ಪಡೆ ಸಿಕಂದರ್ ಡಿ.ಎಲ್.ಎಕ್ಸ್.ಡಿ.ಐ.60 ಟಾರ್ಕ್ ಪ್ಲಸ್ ಮಲ್ಟಿ ಸ್ಪೀಡ್ ಟ್ರಾಕ್ಟರ್ ತನ್ನ ಅತ್ಯಂತ ಪ್ರಶಂಸೆಗೆ ಒಳಗಾದ ಸಿಕಂದರ್ ಡಿ.ಎಲ್.ಎಕ್ಸ್. ಸರಣಿಗೆ ಹೊಚ್ಚಹೊಸ ಸೇರ್ಪಡೆಯಾಗಿದೆ. ಸೊನಾಲಿಕಾದ ಪರಂಪರೆಯನ್ನು ಮುಂದಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಹೊಸ ಟ್ರಾಕ್ಟರ್ ಅತ್ಯಂತ ದೊಡ್ಡ 4 ಸಿಲಿಂಡರ್ 4,709 ಸಿಸಿ ಎಚ್.ಡಿ.ಎಂ. ಎಂಜಿನ್ ಅನ್ನು ಹೊಂದಿದ್ದು ಸರಿಸಾಟಿ ಇರದ 275 ಎನ್.ಎಂ.ಟಾರ್ಕ್ ನೀಡುತ್ತದೆ. ಸುಧಾರಿತ 12ಎಫ್+12ಆರ್ ಮಲ್ಟಿ-ಸ್ಪೀಡ್ ಟ್ರಾನ್ಸ್ ಮಿಷನ್ ಅನ್ನು ಶಟಲ್-ಟೆಕ್ ತಂತ್ರಜ್ಞಾನದೊಂದಿಗೆ ಹಾಗೂ ಉನ್ನತ 5ಜಿ ಹೈಡ್ರಾಲಿಕ್ಸ್ ನೊಂದಿಗೆ ಹೊಂದಿದ್ದು ಇದು 2,200 ಕೆಜಿ ಎತ್ತುವ ಸಾಮರ್ಥ್ಯ ಹೊಂದಿದೆ ಮತ್ತು 140+ ಸೆಟ್ಟಿಂಗ್ಸ್ ಹೊಂದಿದೆ. ಎಲ್.ಇ.ಡಿ.ಡಿ.ಆರ್.ಎಲ್. ಹೆಡ್ಲೈಟ್, ಎಲ್.ಇ.ಡಿ.ಟೈಲ್ ಲೈಟ್, ಪ್ರೊ+ಬಂಪರ್, ಡಿಲಕ್ಸ್ ಸೀಟ್ ಮತ್ತು ಪವರ್ ಸ್ಟೀರಿಂಗ್ ಹೊಂದಿರುವ ಸೊನಾಲಿಕಾ ಸಿಕಂದರ್ ಡಿ.ಎಲ್.ಎಕ್ಸ್. ಡಿ.ಐ. 60 ಟಾರ್ಕ್ ಪ್ಲಸ್ ಮಲ್ಟಿ-ಸ್ಪೀಡ್ ಟ್ರಾಕ್ಟರ್ ಭಾರತದ ಕೃಷಿಯ ವಿಶಿಷ್ಟ ಅಗತ್ಯದ ಹಲವು ಬಳಕೆಗಳು ಮತ್ತು ಅಳವಡಿಕೆಗಳಿಗೆ ವಿನ್ಯಾಸಗೊಳಿಸಲಾಗಿದೆ. 

ಹೊಸ ಬಿಡುಗಡೆ ಕುರಿತು ಇಂಟರ್ನ್ಯಾಷನಲ್ ಟ್ರಾಕ್ಟರ್ಸ್ ಲಿಮಿಟೆಡ್ ಜಂಟಿ ವ್ಯವಸ್ಥಾಪಕ ನಿರ್ದೇಶಕ ಶ್ರೀ ರಾಮನ್ ಮಿಟ್ಟಲ್, “ನಾವು ನಮ್ಮ ಹೊಚ್ಚಹೊಸ ಉಪಕ್ರಮ ಒಂದು ದೇಶ, ಒಂದು ಟ್ರಾಕ್ಟರ್ ಬೆಲೆ’ಯ ನಮ್ಮ ಉದ್ಯಮದ ಪ್ರಥಮ ಆವಿಷ್ಕಾರ ಪ್ರಾರಂಭಿಸಲು ಮತ್ತು ನಮ್ಮ ಪರಿವರ್ತನೀಯ ಸೊನಾಲಿಕಾ ಸಿಕಂದರ್ ಡಿ.ಎಲ್.ಎಕ್ಸ್.ಡಿ.ಐ. 60 ಟಾರ್ಕ್ ಪ್ಲಸ್ ಮಲ್ಟಿ-ಸ್ಪೀಡ್ ಪ್ರಸ್ತುತಪಡಿಸಲು ಬಹಳ ಉತ್ಸುಕರಾಗಿದ್ದೇವೆ. ಇದು ಕುಟುಂಬಗಳಿಗೆ ಅತ್ಯುತ್ತಮವಾದುದನ್ನು ಆಯ್ಕೆ ಮಾಡಿಕೊಳ್ಳಲು ಅನುಕೂಲ ಮತ್ತು ಸಾಮರ್ಥ್ಯ ನೀಡುತ್ತದೆ. ಇದು ಭಾರತೀಯ ಟ್ರಾಕ್ಟರ್ ಉದ್ಯಮದ ಕಾರ್ಯಕ್ಷಮತೆಯ ಮಾನದಂಡಗಳನ್ನು ಕ್ರಾಂತಿಕಾರಕಗೊಳಿಸಲಿದ್ದು ಇದು 12ಎಫ್+12ಆರ್ ಟ್ರಾನ್ಸ್ ಮಿಷನ್, ಸುಧಾರಿತ 5ಜಿ ಹೈಡ್ರಾಲಿಕ್ಸ್ ಮತ್ತು 10 ಡಿಲಕ್ಸ್ ಫೀಚರ್ ಗಳನ್ನು ಒದಗಿಸುತ್ತಿದ್ದು ಇದನ್ನು ಹಲವು ಕೃಷಿ ಬಳಕೆಗಳಿಗೆ ಪರಿಪೂರ್ಣ ಟ್ರಾಕ್ಟರ್ ಆಗಿಸಿದೆ. ನಮ್ಮ ಹೊಚ್ಚಹೊಸ ಬಿಡುಗಡೆಯು ನಮ್ಮ ವಿಸ್ತಾರ ಟೈಗರ್ ಶ್ರೇಣಿಯ 40-75 ಎಚ್.ಪಿ. ಟ್ರಾಕ್ಟರ್ ಕಳೆದ ತಿಂಗಳು ಬಿಡುಗಡೆಯಾಗಿದೆ. ನಮ್ಮ ಹೆವಿ-ಡ್ಯೂಟಿ ಟ್ರಾಕ್ಟರ್ ಶ್ರೇಣಿಗೆ ಅಂತಹ ಗಮನಾರ್ಹ ಸೇರ್ಪಡೆಗಳನ್ನು ಮಾಡುವುದನ್ನು ಮುಂದುವರಿಸುತ್ತೇವೆ” ಎಂದರು.